Asianet Suvarna News Asianet Suvarna News

ಕೇರಳ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳು ಸಂಪೂರ್ಣ ಬಂದ್‌

ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು.

 

all shortcuts to kerala from madikeri are closed
Author
Bangalore, First Published May 12, 2020, 9:19 AM IST
  • Facebook
  • Twitter
  • Whatsapp

ಮಡಿಕೇರಿ(ಮೇ 12): ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು.

ಆದರೆ ಕೊಡಗು ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿ ಕೇರಳ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗೇರು ಪ್ಲಾಂಟೇಷÜನ್‌ಗಾಗಿ ಹಾದುಹೋಗಿರುವ ಪಾಣತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇರಳದಲ್ಲಿ ಗೇಟ್‌ ಇದೆ.

ಊರಿಗೆ ಕಳಿಸ್ತೀವಂತ ಹಣ ಕೀಳ್ತಿದ್ದಾರೆ ಮಧ್ಯವರ್ತಿಗಳು: ಮೋಸದ ಜಾಲ

ಆದರೂ ರಸ್ತೆ ಮೂಲಕ ಕದ್ದು ಮುಚ್ಚಿ ನಿರಂತರವಾಗಿ ವಾಹನ ಓಡಾಡುವುದನ್ನು ಅಧಿ​ಕಾರಿ​ಗಳು ಪತ್ತೆಹಚ್ಚಿದ್ದಾರೆ. ಭಾಗಮಂಡಲ ಠಾಣಾ​ಧಿಕಾರಿ ಮಹದೇವ ಹಾಗೂ ಸಿಬ್ಬಂದಿ ಜೆಸಿಬಿ ಯಂತ್ರ ಮೂಲಕ ರಸ್ತೆಗೆ ಮಣ್ಣು ಸುರಿದು ಸಂಪೂರ್ಣವಾಗಿ ಬಂದ್‌ ಮಾಡಿದರು.

Follow Us:
Download App:
  • android
  • ios