ಉಡುಪಿ(ಮೇ 12): ಕೊರೋನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಹೊರರಾಜ್ಯಗಳ ಕಾರ್ಮಿಕರಿಗೆ ತಮ್ಮೂರಿಗೆ ತೆರಳಲು ವ್ಯವಸ್ಥೆ ಮಾಡುವುದಾಗಿ ಹೇಳಿ ಹಣ ವಸೂಲಿ ಮಾಡಿದವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದ್ದು, ಅಂತಹವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಬೇರೆ ರಾಜ್ಯದವರನ್ನು ಕಳುಹಿಸಲು ವಾಹನ ವ್ಯವಸ್ಥೆ ಮಾಡಲು ಯಾವುದೇ ಖಾಸಗಿ ವ್ಯಕ್ತಿಗಳನ್ನು ಜಿಲ್ಲಾಡಳಿತ ನೇಮಕ ಮಾಡಿಲ್ಲ. ಅವರ ಸಹಾಯಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಆಶಾ ಕಾರ್ಯಕರ್ತೆಯರಿಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು

ರಾಜ್ಯ ಸರ್ಕಾರವು ಅಂತಾರಾಜ್ಯ ಪ್ರಯಾಣಿಕರಿಗೆ ಸ್ವಊರಿಗೆ ಮರಳಲು ಸಹಾಯವಾಗುವಂತೆ ಸೇವಾಸಿಂಧು ಆ್ಯಪ್‌ ತಯಾರಿಸಿದ್ದು, ಇದರಲ್ಲಿ ನೋಂದಣಿ ಮಾಡಿಕೊಳ್ಳಬೇಕು, ಈಗಾಗಲೇ ಸಾಕಷ್ಟುಮಂದಿ ನೋಂದಣಿ ಮಾಡಿದ್ದಾರೆ.

"

ಹೊರರಾಜ್ಯದ ಪ್ರಯಾಣಿಕರು ತಮ್ಮ ರಾಜ್ಯಕ್ಕೆ ತೆರಳಲು ಅಗತ್ಯ ಮಾಹಿತಿಗಾಗಿ ಮತ್ತು ಸಂದೇಹಗಳ ಪರಿಹಾರಕ್ಕೆ ಮತ್ತು ಯಾರಾದರೂ ಹಣ ವಸೂಲಿ ಮಾಡಿದಲ್ಲಿ ಟೋಲ್‌ ಫ್ರೀ ಸಂಖ್ಯೆ 1077 ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಸೂಚಿಸಿದ್ದಾರೆ.