ಚಿಕ್ಕಬಳ್ಳಾಪುರ(ಮಾ.12): ಯಲಹಂಕದ ಬಿಎಸ್ಎಫ್ ನಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಸೊಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆ ನೀಡಲು ಸರ್ಕಾರದಿಂದ ಸಕಲ ಸಿದ್ಧತೆಯಾಗಿದೆ.

ಬಿಎಸ್ಎಫ್ ಕ್ಯಾಂಪಸ್‌ನ ಆಸ್ವತ್ರೆಯಲ್ಲಿ 300 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಸೋಂಕು ದೃಢ ಪಟ್ಟವರಿಗಾಗಿ ಪ್ರತ್ಯೇಕ ಐದು ಐಸೋಲೇಟೆಡ್ ವಾರ್ಡ್ ಮತ್ತು ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ

ಕೊರೋನಾ ಭೀತಿ: CBSE ಮಕ್ಕಳಿಗೆ ಈ ಬಾರಿ ವಾರ್ಷಿಕ ಪರೀಕ್ಷೆ ಇಲ್ಲ

ಒಂದು ಕೊಠಡಿಗೆ 50 ಹಾಸಿಗೆಯಂತೆ 6 ಕೊಠಡಿಗಳಲ್ಲಿ ಚಿಕಿತ್ಸೆಗೆ 300 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಕೊಠಡಿಗೆ 4 ಶೌಚಾಲಯ, ಒಂದು ಅಡುಗೆ ಕೋಣೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ರಾಜ್ಯ ಸರ್ಕಾರದಿಂದ 500 ಜನ ಸಿಬ್ಬಂದಿ ನಿಯೋಜನೆ ಮಾಡಿದ್ದು, ಬೆಂಗಳೂರು ಜಿಲ್ಲಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿ ತಿರ್ಮಾನಿಸಲಾಗಿದೆ.