ಬಳ್ಳಾರಿ(ಮೇ.24): ಕೊರೋನಾ ವೈರಸ್‌ನಿಂದಾದ ಲಾಕ್‌ಡೌನ್‌ನಿಂದಾಗಿ ಲೈಂಗಿಕ ಕಾರ್ಯಕರ್ತೆಯರು ತೀವ್ರ ಶೋಚನೀಯ ಬದುಕು ನಡೆಸುತ್ತಿದ್ದು ರಾಜ್ಯ ಸರ್ಕಾರ ಕೂಡಲೇ ಅಗತ್ಯ ನೆರವು ನೀಡಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಆಗ್ರಹಿಸಿದೆ.

ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಸಂಘಟನೆಯ ಮುಖಂಡರು, ಬಡತನ, ಬಾಲ್ಯವಿವಾಹ, ಮಾನವ ಕಳ್ಳಸಾಗಾಣಿಕೆ, ಅನಕ್ಷರತೆಯಿಂದ ಲೈಂಗಿಕ ಕಾರ್ಯಕರ್ತೆಯರಾಗಿ ಬದಲಾಗಿದ್ದಾರೆ. ಇದರಿಂದ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಹೇಳಿದ್ದಾರೆ. 

ಕೊರೋನಾ ಕಾಟ: ಆಹಾರ ಸಿಗದೆ ಲೈಂಗಿಕ ಕಾರ್ಯಕರ್ತೆಯರ ಪರದಾಟ!

ಲೈಂಗಿಕ ವೃತ್ತಿಯನ್ನು ನಿರ್ಮೂಲನೆಗೊಳಿಸುವ ದಿಸೆಯಲ್ಲಿ ಈ ವೃತ್ತಿಗೆ ಇಳಿದವರಿಗೆ ಅಗತ್ಯ ನೆರವು ನೀಡಿ ಸ್ವಯಂ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಮನವಿಯಲ್ಲಿ ಎಐಎಂಎಸ್‌ಎಸ್‌ನ ಜಿಲ್ಲಾ ಪ್ರಮುಖರು ಒತ್ತಾಯಿಸಿದ್ದಾರೆ. ಸಂಘಟನೆಯ ಜಿಲ್ಲಾಧ್ಯಕ್ಷೆ ಎ.ಶಾಂತಾ, ವಿದ್ಯಾ, ಎಂ.ಹುಸೇನ್‌ ಇತರರಿದ್ದರು.