ರಾಮ​ನ​ಗ​ರ (ಸೆ.11):  ಒಂದು ಕಡೆ ರಾಜ್ಯಾದ್ಯಂತ ರಸಗೊಬ್ಬರದ ಅಭಾವದಿಂದ ರೈತರು ಪರದಾಡುತ್ತಿದ್ದರೆ, ರಾಮನಗರದಲ್ಲಿ ಅಕ್ರಮವಾಗಿ 6 ಟನ್‌ ಯೂರಿಯವನ್ನು ದಾಸ್ತಾನು ಮಾಡಲಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. 

ತಾಲೂಕಿನ ಬೈರ​ಮಂಗಲ-ಹೊಸೂರು ಗ್ರಾಮ​ದ ಶ್ರೀ ವಿರ​ಭ​ದ್ರ​ಸ್ವಾಮಿ ಟ್ರೇಡರ್ಸ್‌ಗೆ ಸೇರಿದ ಗೋದಾ​ಮಿನ ಮೇಲೆ ದಾಳಿ ನಡೆ​ಸಿದ ಕೃಷಿ ಅಧಿಕಾರಿ ವನಿತಾ ನೇತೃತ್ವದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿ ಸುಮಾರು 6 ಟನ್‌ನಷ್ಟುವಿಜಯ್‌ ಯೂರಿಯಾವನ್ನು ಜಪ್ತಿ ಮಾಡಿ ಮಳಿಗೆಗಳನ್ನು ಸೀಲ್‌ ಮಾಡಿದ್ದಾರೆ.

ರಾಜ್ಯಕ್ಕೆ ಬರಲಿದೆ 51000 ಟನ್‌ ಯೂರಿಯಾ: ಸಚಿವ ...

ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನಲೆಯಲ್ಲಿ ರಸಗೊಬ್ಬರ ಪೂರೈಕೆ ಕಡಿಮೆಯಾಗಿತ್ತು. ಅಲ್ಲದೇ ಯೂರಿಯಾ ಕೊರತೆ ಉಂಟಾಗಿ ರೈತರು ಪರದಾಡುವಂತಾಗಿತ್ತು. 

ಸರ್ಕಾರ ಆಮದು ಮಾಡಿ ರೈತರಿಗೆ ಯೂರಿಯಾ ಪೂರೈಕೆ ಮಾಡಿತ್ತು. ಆದರೆ ಇದೀಗ ಹಲವೆಡೆ ಅಕ್ರಮವಾಗಿ ಯೂರಿಯಾ ದಾಸ್ತಾನು ಮಾಡಿರುವುದು ಬೆಳಕಿಗೆ ಬರುತ್ತಿದೆ.