Asianet Suvarna News Asianet Suvarna News

ಮಹಿಳೆಯರು ಉದ್ಯಮ ಆರಂಭಿಸಿ ಸ್ವಾವಲಂಬಿಯಾಗಲಿ: ಸಚಿವ ಬಿ.ಸಿ. ಪಾಟೀಲ

*  ಕೃಷಿ ಇಲಾಖೆಯಲ್ಲಿ ಯಾರೂ ಮಾಡದಂತಹ ಕೆಲಸ ಮಾಡಿ ಸರ್ಕಾರಕ್ಕೆ ದೊಡ್ಡ ಹೆಸರು ತಂದ ಬಿ.ಸಿ.ಪಾಟೀಲ್‌
*  ಮಹಿಳೆಯರು ಪುರುಷರಷ್ಟೇ ಸಮಾನರು
*  ಮಹಿಳೆ ಪುರುಷನಿಗೆ ಸರಿಸಮನಾಗಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು 
 

Agriculture Minister BC Patil Talks Over Women grg
Author
Bengaluru, First Published Nov 8, 2021, 10:43 AM IST
  • Facebook
  • Twitter
  • Whatsapp

ಹಿರೇಕೆರೂರು(ನ.08): ಮಹಿಳೆಯರು(Women) ಸಮಾಜದಲ್ಲಿ ಸ್ವಾವಲಂಬನೆ ಸಾಧಿಸಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಕಾರಿಯಾಗಿದೆ. ಸರ್ಕಾರದ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಕಿರು ಉದ್ಯಮಗಳನ್ನು ಆರಂಭಿಸಿ ಸ್ವಾವಲಂಬಿಯಾಗಿ ಬೆಳೆಯಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ(BC Patil) ಹೇಳಿದ್ದಾರೆ.

ಪಟ್ಟಣದ ಪೊಲೀಸ್‌ ಮೈದಾನದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ಹಿರೇಕೆರೂರ-ರಟ್ಟೀಹಳ್ಳಿ ತಾಲೂಕಿನ 490 ಸ್ವಸಹಾಯ ಸಂಘಗಳಿಗೆ 4.30 ಕೋಟಿ ಸಾಲದ ಚೆಕ್‌ಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಹತ್ಯೆ ರಾಜಕೀಯ ಅಸ್ತ್ರವಾಗುವುದು ಬೇಡ: ಬಿಜೆಪಿ ಶಾಸಕ ವಿರೂಪಾಕ್ಷಪ್ಪ

ಕೋವಿಡ್‌ನಿಂದಾಗಿ(Covid19) ಕಳೆದ ಎರಡು ವರ್ಷಗಳಿಂದ ಇಂತಹ ದೊಡ್ಡ ಕಾರ್ಯಕ್ರಮ ಮಾಡಲು ಆಗಿರಲಿಲ್ಲ, ಉಪ ಚುನಾವಣೆಯಲ್ಲಿ(Byelection) ಗೆದ್ದ ನಂತರ ಅಭಿನಂದನೆ ತಿಳಿಸಲು ಆಗಿರಲಿಲ್ಲ. ಸಾಲ ಸೌಲಭ್ಯಗಳನ್ನು ಪಡೆದುಕೊಂಡ ಸ್ವಸಹಾಯ ಸಂಘದ ಮಹಿಳೆಯರು ಹೈನುಗಾರಿಕೆ, ಜೇನು ಸಾಕಣಿಕೆ, ಕುರಿ ಸಾಕಾಣಿಕೆ, ಮೀನು ಕೃಷಿ,ಕೋಳಿ ಸಾಕಾಣಿಕೆ ಕೈಗೊಳ್ಳಬೇಕು. ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಿ ಅದರ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ತಾವೇ ಮಾರುಕಟ್ಟೆ ಸೃಷ್ಟಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಭೂಮಿ ತಾಯಿ ನಂಬಿದವರನ್ನು ಕೈಬಿಡುವದಿಲ್ಲ. ರೈತರು(Farmers) ತಮಗೆ ಬೇಕಾದಷ್ಟು ಬೆಳೆಗಳನ್ನು(Crop) ತಾವೇ ಬೆಳೆದುಕೊಳ್ಳಬೇಕು. ರಾಸಾಯನಿಕ ಮುಕ್ತವಾದ ಸಾವಯವ ಕೃಷಿಗೆ(Organic Farming) ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ(Shivaram Hebbar) ಮಾತನಾಡಿ, ಕೊಟ್ಟ ಮಾತಿನಂತೆ ಜನರ ಋುಣ ತೀರಿಸಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೃಷಿ ಇಲಾಖೆಯಲ್ಲಿ(Department of Agriculture) ಯಾರೂ ಮಾಡದಂತಹ ಕೆಲಸ ಮಾಡಿ ಸರ್ಕಾರಕ್ಕೆ ದೊಡ್ಡ ಹೆಸರು ತಂದಿದ್ದಾರೆ. ಕೃಷಿಕರು ಮತ್ತು ಕಾರ್ಮಿಕರು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಇಬ್ಬರೂ ಒಂದಾಗಿ ಬದುಕಬೇಕು. ಕೋವಿಡ್‌ ಸಂದರ್ಭದಲ್ಲಿ ಇಲಾಖೆಯಿಂದ 25 ಲಕ್ಷ ಅಹಾರ ಧಾನ್ಯಗಳ ಕಿಟ್‌ಗಳನ್ನು ಕಾರ್ಮಿಕರಿಗೆ ವಿತರಿಸಲಾಗಿದೆ. ಮಹಿಳೆಯರು ಕುಟುಂಬದ ಶಕ್ತಿಯಾಗಿದ್ದು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಮಹಿಳೆ ಪುರುಷನಿಗೆ ಸರಿಸಮನಾಗಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದರು.

ಸಿಂದಗಿ ಸೋಲು ಕಾಂಗ್ರೆಸ್‌ನ ಅಂತ್ಯ ಎಂದು ಒಪ್ಪಿಕೊಳ್ಳಲಿ

ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಮಾತನಾಡಿ, ಬರೀ ಮಹಿಳೆಯರೇ ಸೇರಿರುವ ಬಹು ದೊಡ್ಡ ಕಾರ್ಯಕ್ರಮ ಇದಾಗಿದೆ. ಕೃಷಿ ಸಚಿವ ಬಿ.ಸಿ. ಪಾಟೀಲರು ಮಹಿಳೆಯರಿಗೆ ಮೊದಲ ಆದ್ಯತೆ ನೀಡಿ ಅದ್ಭುತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ರೈತರಿಗೆ ಸ್ಪೂರ್ತಿ ತುಂಬುವ ರೈತರೊಂದಿಗೆ ಒಂದು ದಿನ ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಮಹಿಳೆಯರು ಪುರುಷರಷ್ಟೇ ಸಮಾನರು. ಇಂದು ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರೆ ಮುಂದಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ನೀಡುತ್ತಿರುವ ಸಾಲವನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ದಿ ಹೊಂದುವ ಜತೆಗೆ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಬೇಕು ಎಂದು ಹೇಳಿದರು.

ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ಉಪಾಧ್ಯಕ್ಷೆ ಕುಸುಮಾ ಬಣಕಾರ, ಸೃಷ್ಟಿಪಾಟೀಲ, ತಹಸೀಲ್ದಾರ್‌ ಕೆ.ಎ. ಉಮಾ, ರಟ್ಟೀಹಳ್ಳಿ ತಹಸೀಲ್ದಾರ್‌ ಅರುಣಕುಮಾರ ಕಾರಗಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌. ಪಾಟೀಲ, ದೊಡ್ಡಗೌಡ ಪಾಟೀಲ, ಜಿಲ್ಲಾ ಯೋಜನಾ ನಿರ್ದೇಶಕ ಎಸ್‌.ಜಿ. ಕೊರವರ, ತಾಪಂ ಇಒ ಸುನಿಲಕುಮಾರ, ಆರ್‌.ಎನ್‌. ಗಂಗೋಳ, ಲಿಂಗರಾಜ ಚಪ್ಪರದಹಳ್ಳಿ, ಬೂತಲಿಂಗಪ್ಪ ಅಬಲೂರ, ಮಂಜುಳಾ ರವಿಶಂಕರ ಬಾಳಿಕಾಯಿ, ಆರ್‌.ಎಸ್‌. ಹುಲ್ಮನಿ, ಹನುಮಂತಪ್ಪ ಮೇಗಳಮನಿ, ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
 

Follow Us:
Download App:
  • android
  • ios