Asianet Suvarna News Asianet Suvarna News

ಸಿಂದಗಿ ಸೋಲು ಕಾಂಗ್ರೆಸ್‌ನ ಅಂತ್ಯ ಎಂದು ಒಪ್ಪಿಕೊಳ್ಳಲಿ

  • ಹಾನಗಲ್ಲ ಉಪಚುನಾವಣೆ ಗೆಲುವು 2023ರ ಚುನಾವಣೆಗೆ ಕಾಂಗ್ರೆಸ್‌ನ ಆರಂಭ ಎನ್ನುವ ಮುಖಂಡರು ಇದನ್ನು ಒಪ್ಪಲಿ
  •   ಸಿಂದಗಿಯಲ್ಲಿನ ಹೀನಾಯ ಸೋಲು  ಕಾಂಗ್ರೆಸ್‌ನ ಅಂತ್ಯ ಎಂದು ಒಪ್ಪಿಕೊಳ್ಳಬೇಕು - ಬಿಸಿ ಪಾಟೀಲ್
sindagi By Election Result Predicts Congress Future says  minister BC patil snr
Author
Bengaluru, First Published Nov 8, 2021, 6:53 AM IST

 ಹಾವೇರಿ(ನ.08):  ಹಾನಗಲ್ಲ ಉಪಚುನಾವಣೆ (hanagal By Election) ಗೆಲುವು 2023ರ ಚುನಾವಣೆಗೆ ಕಾಂಗ್ರೆಸ್‌ನ (congress) ಆರಂಭ ಅನ್ನುವುದಾದರೆ ಸಿಂದಗಿಯಲ್ಲಿನ ಹೀನಾಯ ಸೋಲು ಕೂಡ ಆರಂಭವೇ ಆಗಬೇಕು. ಹಾನಗಲ್ಲ ಗೆಲುವು ಆರಂಭವಾದರೆ, ಸಿಂದಗಿ ಸೋಲು ಕಾಂಗ್ರೆಸ್‌ನ ಅಂತ್ಯ ಎಂದು ಒಪ್ಪಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ (BC Patil) ತಿರುಗೇಟು ನೀಡಿದರು.

ಹಿರೇಕೆರೂರು ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ಲಿನಲ್ಲಿ ಏಳು ಸಾವಿರ ಮತಗಳ ಅಂತರದಿಂದ ಗೆದ್ದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ (DK Shivakumar) ಅವರು ದೊಡ್ಡ ಗೆಲುವು ಎಂದು ಹೇಳಿಕೊಳ್ಳುತ್ತಿದ್ದಾರೆ.

ಸಿಂದಗಿಯಲ್ಲಿ ಹೀನಾಯವಾಗಿ ಕಾಂಗ್ರೆಸ್‌ ಸೋತಿದೆ. ಹಾನಗಲ್ಲ ಫಲಿತಾಂಶ (hanagal Result) ಅವರ ಪಾಲಿಗೆ ಆರಂಭವಾಗಲು ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ (Basavaraj BOmmai) ಸಿಎಂ ಆಗಿ ಮೂರು ತಿಂಗಳಾಗಿದೆ. ಜನರು ಕಾಂಗ್ರೆಸ್‌ ಅಭ್ಯರ್ಥಿ ಮಾನೆ ಪರವಾಗಿ ತೀರ್ಪು ನೀಡಿದ್ದಾರೆ. ನಾವು ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ಕಾಂಗ್ರೆಸಿಗರು ಇದರಿಂದ ಬೀಗುವ ಅಗತ್ಯವೇನಿಲ್ಲ. ಸಿಎಂ ಆಗಿದ್ದ ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿಯಲ್ಲಿ (Chamundeshwari) ಹೀನಾಯವಾಗಿ ಸೋಲಲಿಲ್ಲವೇ? ಉಪಚುನಾವಣೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಮೊದಲು ಹೇಳಿದ್ದರು. ಗೆದ್ದ ತಕ್ಷಣ ದಿಕ್ಸೂಚಿ ಎಂದು ಹೇಳುತ್ತಿದ್ದಾರೆ. ಹಾನಗಲ್ಲ ಫಲಿತಾಂಶ ದಿಕ್ಸೂಚಿ ಅನ್ನುವುದಾದರೆ ಸಿಂದಗಿ ಗೆಲುವು ಬಿಜೆಪಿಗೆ (BJP) ದಿಕ್ಸೂಚಿ. ಅಲ್ಲಿ ಬಹಳ ದೊಡ್ಡ ಮತಗಳ ಅಂತರದಿಂದ ಕಾಂಗ್ರೆಸ್‌ (Congress) ಸೋತಿದೆ ಎಂದು ತಿರುಗೇಟು ನೀಡಿದರು.

ಪುನೀತ್‌ ರಾಜಕುಮಾರ್‌ ಅಭಿಮಾನಿಯಾಗಿ ಅವರಿಗೆ ಪದ್ಮಶ್ರೀ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಅವರು ಬದುಕಿದ್ದಾಗಲೇ ಪದ್ಮಶ್ರೀ ಕೊಡಬೇಕಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾದರೆ ನಾವೂ ಕೂಡ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.

ಬಿಟ್‌ ಕಾಯಿನ್‌ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಟ್‌ ಕಾಯಿನ್‌ ಎಂದರೇನು ಎಂದೇ ನನಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆಯೂ ಮಾಹಿತಿಯಿಲ್ಲ. ಆದರೆ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅದು ಅಕ್ರಮ ಎಂದಾದರೆ ಅದರಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

ಸಚಿವ ಶಿವರಾಮ ಹೆಬ್ಬಾರ, ಆನಂದ ಸಿಂಗ್‌, ಯು.ಬಿ. ಬಣಕಾರ ಇತರರು ಇದ್ದರು.

ಬಿಜೆಪಿ ಗೆಲುವಿಗೆ ಕಾರಣವಾಗಿದ್ದೇನು..? :  ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ ಇಂದು ನಡೆದಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿತ್ತು. ಅಂತೂ ಭಾರೀ ಕುತೂಹಲದ ಮಧ್ಯೆ ಕಮಲ ಅರಳಿದ್ದು ಈಗ ಗೆಲುವಿಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

  • ಮುಖ್ಯವಾಗಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಭೂಸನೂರು ಪರ ಭಾರೀ ಅನುಕಂಪದ ಅಲೆ ಇತ್ತು.
  • ಕಡಿಮೆ ಅಂತರದಲ್ಲಿ ಸೋತಿದ್ದ ಕಾರಣ ಗೆಲ್ಲಬೇಕಾಗಿತ್ತು ಎಂಬ ಭಾವನೆ ಗಟ್ಟಿಯಾಗಿತ್ತು.
  • ಕ್ಷೇತ್ರದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಪ್ರಭಾವ ಬೀರಿದೆ.
  • ಕ್ಷೇತ್ರದ ಪ್ರಮುಖ ಲಿಂಗಾಯತ ಸಮೂದಾಯದ ಮತಗಳು ವರ್ಗಾವಣೆ ಆಗದಂತೆ ತಡೆಯುವಲ್ಲಿ ಬಿಜೆಪಿ ಸಫಲವಾಗಿರುವುದು ಗೆಲುವಿನ ಓಟಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.
  • ಜೆಡಿಎಸ್ ಅಭ್ಯರ್ಥಿ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಗೆ ಹೋಗದಂತೆ ತಡೆದಿರುವುದು ಕೂಡಾ ಇಲ್ಲಿ ಬಿಜೆಪಿ ಗೆಲುವಿಗೆ ನೆರವಾಗಿದೆ.
  • ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸಚಿವರನ್ನು ನೇಮಿಸಿ ಕಾರ್ಯತಂತ್ರ ರೂಪಿಸಲಾಗಿತ್ತು.
  • ಶಾಸಕರು ಮತ್ತು ಜಿಲ್ಲಾ ನಾಯಕರು ಗ್ರಾಮಗಳಲ್ಲೇ ವಾಸ್ತವ್ಯ ಹೂಡಿ ಮನವೊಲಿಕೆ ಮಾಡಿದ್ದರು.
  • ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಪಕ್ಷವನ್ನು ಬೆಂಬಲಿಸುವ ಮನಸ್ಥಿತಿಗೆ ಬಂದ ಮತದಾರರ ಯೋಚನೆಗಳು ಈ ಗೆಲುವಿನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
  • ಜೆಡಿಎಸ್ ನಿಂದ ಪಕ್ಷಾಂತರಗೊಂಡ ಕೈ ಅಭ್ಯರ್ಥಿಯನ್ನು ಒಪ್ಪಿಕೊಳ್ಳಲು ಮತದಾರರು ಹಿಂದೇಟು ಹಾಕಿರುವುದು ಗೋಚರಿಸಿದೆ.
  • ಬಿಜೆಪಿ ನಾಯಕರ ಸಂಘಟಿತ ಪ್ರಚಾರ ಮತ್ತು ಸಿಂದಗಿ ಕ್ಷೇತ್ರದ ಅಭಿವೃದ್ಧಿಯ ವಿಚಾರ ಪ್ರಚಾರ ಮಾಡಿದ್ದು ಇಲ್ಲಿ ಗೆಲುವಿಗೆ ನೆರವಾಗಿದೆ.
  • ಹಿಂದುಪರ ಸಂಘಟನೆಗಳು ತೆರೆಮರೆಯಲ್ಲಿ ನಡೆಸಿದ ಪ್ರಚಾರದಿಂದಾಗಿ ಹಿಂದು ಮತಗಳ ಕ್ರೋಢಿಕರಣವಾಗಿದೆ.

ಸಿಂದಗಿಯಲ್ಲಿ ಕಾಂಗ್ರೆಸ್ ಸೋಲಲು ಕಾರಣಗಳೇನೇನು ?

  • ಕಳೆದ ಬಾರಿ ಸೋತಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಭೂಸನೂರು ಪರ ಅನುಕಂಪ ಸೃಷ್ಟಿಯಾಗಿರುವುದು ಕಾಂಗ್ರೆಸ್‌ಗೆ ಈ ಬಾರಿ ಕಂಟಕವಾಗಿ ಪರಿಣಮಿಸಿದೆ.
  • ಕ್ಷೇತ್ರದಲ್ಲಿ ಫಲ ನೀಡದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರಚಾರ ಬಿಜೆಪಿ ಪ್ರಚಾರ ಮೀರಿಸುವಲ್ಲಿ ವಿಫಲವಾಗಿದೆ.
  • ಪ್ರಮುಖ ಲಿಂಗಾಯತ ಗಾಣಿಗ ಸಮೂದಾಯದ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
  • ಕ್ಷೇತ್ರದ ಅಭಿವೃದ್ಧಿ ವಿಚಾರ ಮರೆತು ವೈಯಕ್ತಿಕ ಟೀಕೆ ಟಿಪ್ಪಣೆಗಳಿಗೆ ಆದ್ಯತೆ ನೀಡಿ ಪ್ರಚಾರ ಮಾಡಿದ್ದು ಮತದಾರರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿಲ್ಲ.
  • ಅಭಿವೃದ್ಧಿಗಾಗಿ ಆಡಳಿತ ಪಕ್ಷವನ್ನು ಬೆಂಬಲಿಸುವ ಮನಸ್ಥಿತಿಗೆ ಬಂದ ಸಿಂದಗಿ ಮತದಾರು ಬಿಜೆಪಿಯತ್ತ ವಾಲಿದ್ದಾರೆ.
  • ಜೆಡಿಎಸ್ ನಿಂದ ಅಶೋಕ್ ಮನಗೂಳಿ ಪಕ್ಷಾಂತರಗೊಂಡರೂ, ಕಾರ್ಯಕರ್ತರು ಕಾಂಗ್ರೆಸ್ ಗೆ ಬರದಿರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ.

ಸಿಂದಗಿ ಉಪಚುನಾವಣೆ ಫಲಿತಾಂಶ

ಅಂತಿಯ ಫಲಿತಾಂಶ
ಕಾಂಗ್ರೆಸ್ - 62680
ಬಿಜೆಪಿ -  93865
ಜೆಡಿಎಸ್ - 4353
ಬಿಜೆಪಿ 31185 ಮಗತಗಳ ಅಂತರದಲ್ಲಿ ಗೆಲುವು

ನಿರೀಕ್ಷೆ ರೀತಿಯಲ್ಲಿ ಮತದಾರರ ಮನೆ ಮನೆ ತಲುಪುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಫೇಲ್ ಆಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ ಬಳಿಕ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಬದಲಾಗಿದ್ದು ಕಂಬಳಿ ರಾಜಕೀಯದ ಹೇಳಿಕೆ ಮತಗಳಿಕೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಭಾವ ಬೀರದಿರುವುದು ಸೋಲಿಗೆ ಕಾರಣವಾಗಿದೆ. ಸಿಎಂ ತವರು ಕ್ಷೇತ್ರ ಹಾನಗಲ್ ನಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದ್ದು ಇನ್ನು 9 ಸುತ್ತಿನ ಮತದಾನ ಎಣಿಕೆ ಬಾಕಿ ಇದೆ.

ಉಪಚುನಾವಣೆ ನಡೆದಿದ್ದೇಕೆ?

ಸಿಂದಗಿಯಲ್ಲಿ ಜೆಡಿಎಸ್‌(JDS) ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರು ನಿಧನರಾಗಿದ್ದರು. ಹಾಗಾಗಿ ಸಿಂದಗಿಯಲ್ಲಿ ಉಪಚುನಾವಣೆ ನಡೆದಿದೆ. ವಿಜಯಪುರ ಸಿಂದಗಿ ವಿಧಾನಸಭಾ ಕ್ಷೇತ್ರ ಹಿರಿಯ ಶಾಸಕ, ಜೆಡಿಎಸ್‌ ನಾಯಕರಾಗಿದ್ದ ಎಂ ಸಿ ಮನಗೂಳಿ(85) ಜನವರಿ 12ರಂದು ಕೊನೆಯುಸಿರೆಳೆದಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮನಗೂಳಿಯನ್ನು ಜನವರಿ 9ರಂದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 1 ಗಂಟೆಗೆ ನಿಧನರಾಗಿದ್ದರು.

ಸಿಂದಗಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದರೂ ಸಿಗದ ಫಲ:

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಉಪ ಚುನಾವಣೆ ಹಿನ್ನೆಲೆ ವಾಸ್ತವ್ಯ ಹೂಡಿದರೂ ಮತದಾರ ಕೈಹಿಡಿದಿಲ್ಲ. ಕ್ಷೇತ್ರವನ್ನ ಉಳಿಸಿಕೊಳ್ಳಲು ಹತ್ತಕ್ಕೂ ಹೆಚ್ಚು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಜೆಡಿಎಸ್ ವರಿಷ್ಠರು ಸುದ್ದಿಯಾಗಿದ್ದರು.

ನೀರಾವರಿ ಸಚಿವರಾಗಿದ್ದಾಗ ಸಿಂದಗಿ ತಾಲ್ಲೂಕಿನ ಸುತ್ತಮುತ್ತಲ ಭಾಗಕ್ಕೆ ನೀರು ಹರಿಸಿದ್ದ ದೇವೇಗೌಡ ಇದನ್ನೇ ಚುನಾವಣಾ ಪ್ರಚಾರದ ವೇಳೆ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಜೊತೆಗೆ ಮನಗೂಳಿ ಕುಟುಂಬದ ಜೊತೆಗಿನ ಒಡನಾಟವನ್ನೂ ಪ್ರಚಾರ ಸಂದರ್ಭ ಮೆಲುಕು ಹಾಕಿದ್ದರು.

Follow Us:
Download App:
  • android
  • ios