ಶಿರಸಿ(ಏ.07): ಸಂಸದ ಅನಂತಕುಮಾರ ಹೆಗಡೆ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಪಟ್ಟಣದ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏ.5ರ ತಡರಾತ್ರಿ 2 ಗಂಟೆಯ ವೇಳೆಗೆ ಈ ಕರೆ ಬಂದಿದೆ. ಒಂದನೇ ಬಾರಿ ಫೋನ್‌ ಎತ್ತುವ ಮೊದಲೇ ಸಂಪರ್ಕ ಕಡಿತವಾಗಿದೆ. ಮತ್ತೊಮ್ಮೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ಅನಂತಕುಮಾರ ಹೆಗಡೆ ನೀನೇ ಅಲ್ವಾ? ಮೊದಲ ಸಲ ಪೋನ್‌ ಮಾಡಿದಾಗ ದೂರು ನೀಡಿದ್ದೀಯ. ಪತ್ರಿಕೆಗಳಲೆಲ್ಲಾ ಸುದ್ದಿಯಾಗಿತ್ತು. ಈ ಬಾರಿ ಏನು ಮಾಡ್ತೀಯಾ? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಆಗಂತುಕ ವ್ಯಕ್ತಿ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ.

ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ

ಈ ಮೊದಲು 2019ರ ಫೆ.2 ಮತ್ತು ಏ.20ರಂದು ಇದೇ ಮಾದರಿಯಲ್ಲಿ ಅನಂತ ಕುಮಾರ ಹೆಗಡೆ ಅವರಿಗೆ ಜೀವ ಬೆದರಿಕೆ ಕರೆ ಬಂದಿತ್ತು.