ಹುಬ್ಬಳ್ಳಿ(ಜು.08): ಉತ್ತರ ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರುವ ಇಲ್ಲಿನ ಸಿದ್ಧಾರೂಢ ಮಠಕ್ಕೆ ಮತ್ತೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಭಕ್ತರು ಮಠದೊಳಗೆ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಿ ಮಠವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಲಾಕ್‌ಡೌನ್‌ ಆದ ಬಳಿಕ 76 ದಿನಗಳವರೆಗೆ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಸರ್ಕಾರ ಜೂ.8ಕ್ಕೆ ಮಠವನ್ನು ತೆರೆಯಲು ಅನುಮತಿ ನೀಡಿದ್ದರಿಂದ ಅಂದಿನಿಂದ ಪ್ರಾರಂಭಿಸಲಾಗಿತ್ತು. ಆದರೂ ಎಷ್ಟೇ ಪ್ರಯತ್ನಪಟ್ಟರೂ ಭಕ್ತರು ಗುಂಪು ಗುಂಪಾಗಿ ಬರುತ್ತಿರುವುದನ್ನು ತಡೆಯಲು ಸಾಧ್ಯವಾಗಿರಲಿಲ್ಲ.

ಹುಬ್ಬಳ್ಳಿ: ಆ್ಯಂಬುಲೆನ್ಸ್‌ಗೆ 4 ಗಂಟೆ ಕಾದ ಕೊರೋನಾ ಸೋಂಕಿತ

ಮಠದ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಹಾಕಿ ಕಳಿಸಿದರೂ ಭಕ್ತರು ಮಠದೊಳಗೆ ಹೋದ ತಕ್ಷಣ ನಮಸ್ಕರಿಸಲು ಮುಗಿಬೀಳುತ್ತಿದ್ದರು. ಎಷ್ಟೇ ಬೇಡವೆಂದರೂ ಗುಂಪು ಸೇರುತ್ತಿದ್ದರು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಟ್ರಸ್ಟ್‌ ಕಮಿಟಿಯೇ ಮಠವನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿದೆ. ಆದರೆ, ಮಠದಲ್ಲಿ ಈ ಮುಂಚೆ ಯಾವ ರೀತಿ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು. ಅವುಗಳು ಎಂದಿನಂತೆ ನಡೆಯಲಿವೆ.