ಗದಗ(ಫೆ.28): ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ  ಭೂಕುಸಿತ ಸಂಭವಿಸಿದೆ. ಭೂಕುಸಿತದ ಗುಂಡಿಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಸಿಲುಕಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನರಗುಂದ: ಭೂಕುಸಿತಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗ್ತಿಲ್ಲ, ಆತಂಕದಲ್ಲಿ ಜನತೆ

ಪಟ್ಟಣದ ಅಂಬೇಡ್ಕರ್ ಬಡಾವಣೆಯ ಅಂಗನವಾಡಿ ಕೇಂದ್ರ ಬಳಿ ಭೂಕುಸಿತ ಉಂಟಾಗಿದೆ. ಭೂಕುಸಿತದ ಗುಂಡಿಯಲ್ಲಿ ಅಂಗನವಾಡಿ ಸಹಾಯಕಿ ಕಾಶವ್ವ ಬೆಟಗೇರಿ ಎಂಬುವರು ಸಿಲುಕಿದ್ದರು. ಸದ್ಯ ಕಾಶವ್ವ ಬೆಟಗೇರಿ ಅವರು ಪ್ರಾಣಾಯಾದಿಂದ ಪಾರಾಗಿದ್ದಾರೆ.

ನರಗುಂದದಲ್ಲಿ ಮತ್ತೆ ಭೂಕುಸಿತ: ಆತಂಕದಲ್ಲಿ ಜನತೆ

ಭೂಕುಸಿತದ ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಅಂಗನವಾಡಿ ಸಹಾಯಕಿ ಕಾಶವ್ವ ಬೆಟಗೇರಿ ಅವರನ್ನ ನರಗುಂದ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಂಗನವಾಡಿ ಕೇಂದ್ರದ ಮುಂದಿರುವ ನಳದಲ್ಲಿ ನೀರು ತುಂಬುವಾಗ ಈ  ದುರ್ಘಟನೆ ನಡೆದಿದೆ.