ಕರ್ನಾಟಕ-ಆಂಧ್ರ ಗಡಿ ಸರ್ವೇ ಕಂಪ್ಲೀಟ್: ಮತ್ತೆ ಜೈಲಿಗೆ ಹೋಗ್ತಾರಾ ಜನಾರ್ದನ ರೆಡ್ಡಿ?
ಮತ್ತೆ ಜನಾರ್ದನ ರೆಡ್ಡಿಗೆ ಸಂಕಷ್ಟ ಸಾಧ್ಯತೆ?| ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಮೂರುವರೆ ವರ್ಷ ಸೆರೆವಾಸ ಅನುಭವಿಸಿರುವ ಜನಾರ್ದನ ರೆಡ್ಡಿ| ಗಡಿ ಸರ್ವೇ ಮಾಡಿ ವರದಿ ಕೊಡುವಂತೆ ಸರ್ವೇ ಆಫ್ ಇಂಡಿಯಾಗೆ ಸೂಚಸಿದ್ದ ಸುಪ್ರೀಂಕೋರ್ಟ್| ರಾಜ್ಯದ ಗಡಿ ಒತ್ತವರಿ ಮಾಡಿರುವ ಆರೋಪ ರೆಡ್ಡಿ ಮೇಲಿದೆ|
ಬಳ್ಳಾರಿ(ಫೆ.07): ಈಗಾಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಜೈಲು ದರ್ಶನವಾಗುತ್ತಾ? ಎಂಬ ಮಾತಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ. ಹೌದು, ಪುಷ್ಟಿ ನೀಡಿದ್ದು ಕರ್ನಾಟಕ- ಆಂಧ್ರ ಪ್ರದೇಶ ಗಡಿಸರ್ವೇ.
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮೂರುವರೆ ವರ್ಷ ಸೆರೆವಾಸ ಅನುಭವಿಸಿದ್ದಾರೆ. ಗಣಿ ಅಷ್ಟೇ ಅಲ್ಲ ರಾಜ್ಯದ ಗಡಿ ಒತ್ತುವರಿ ಮಾಡಿರುವ ಆರೋಪ ಕೂಡ ರೆಡ್ಡಿ ಮೇಲಿದೆ. ಹೀಗಾಗಿ ಗಡಿ ಸರ್ವೇ ಮಾಡಿ ವರದಿ ಕೊಡುವಂತೆ ಸರ್ವೇ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಸುಪ್ರೀಂ ಸೂಚನೆ ಮೇರೆಗೆ ಅಧಿಕಾರಿಗಳು ಸರ್ವೇ ಕಾರ್ಯವನ್ನ ಪೂರ್ಣಗೊಳಿಸಿದ್ದಾರೆ.
ಬಳ್ಳಾರಿ: ಕರ್ನಾಟಕ ಆಂಧ್ರ ಗಡಿ ಸರ್ವೇ ಮುಕ್ತಾಯ
ಈಗಾಗಲೇ ಮೂರು ಬಾರಿ ಸರ್ವೇ ಮಾಡಿದ್ದು, ಇದೀಗ ಕೊನೆ ಹಂತದ ಕೆಲಸ ಕೂಡ ಪೂರ್ಣಗೊಳಿಸಲಾಗಿದೆ. ಆಂಧ್ರ ಮತ್ತು ಕರ್ನಾಟಕ ಅಧಿಕಾರಿಗಳಿಂದ ಸರ್ಟಿಪೈಢ್ ಕಾರ್ಯ ಮಾತ್ರ ಬಾಕಿ ಇದೆ. ಸರ್ಟಿಪೈಢ್ ಕಾರ್ಯ ಪೂರ್ಣಗೊಂಡರೆ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ. ಅಕ್ರಮ ಗಣಿಗಾರಿಕೆ ವೇಳೆ ಅಂತಾರಾಜ್ಯ ಗಡಿ ರೇಖೆಯನ್ನ ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೂಡ ಜನಾರ್ದನ ರೆಡ್ಡಿ ಮೇಲಿದೆ.
ಕಳೆದ 3 ದಿನಗಳ ಹಿಂದೆ ಆಂಧ್ರ- ಕರ್ನಾಟಕ ಗಡಿ ಒತ್ತುವರಿ ಹಾಗೂ ಧ್ವಂಸ ಪ್ರಕರಣದ ಸರ್ವೇ ಕಾರ್ಯವನ್ನ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಆಂಧ್ರದ ಓಬಳಾಪುರಂ ಹಾಗೂ ಕರ್ನಾಟಕದ ತುಮಟಿ ಮೈನ್ಸ್ ಮಧ್ಯೆ ಗಡಿ ರೇಖೆ ಧ್ವಂಸಗೊಂಡಿದೆ ಎಂದು ತಿಳಿದು ಬಂದಿದೆ.