Asianet Suvarna News Asianet Suvarna News

Earthquake| ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ, ಆತಂಕದಲ್ಲಿ ಜನತೆ

*  ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಭೂಕಂಪನ
*  ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ
*  ಭೂಕಂಪನ ಕಾಟದಿಂದ ರೋಸಿ ಹೋದ ವಿಜಯಪುರದ ಜನತೆ
 

Again Earthquake in Vijayapura District grg
Author
Bengaluru, First Published Nov 14, 2021, 10:59 AM IST
  • Facebook
  • Twitter
  • Whatsapp

ವಿಜಯಪುರ(ನ.14):  ಜಿಲ್ಲೆಯಲ್ಲಿ ಭೂಕಂಪನದ ಭಯ ಇನ್ನೂ ನಿಲ್ಲುವ ಹಾಗೆ ಕಾಣ್ತಿಲ್ಲ. ಹೌದು, ಇಂದು(ಭಾನುವಾರ) ಬೆಳಗಿನ ಜಾವ 6.20 ಕ್ಕೆ ವಿಜಯಪುರ(Vijayapura) ಜಿಲ್ಲೆಯ ಬಸವನ ಬಾಗೇವಾಡಿ(Basavana Bagewadi) ತಾಲೂಕಿನ ಮನಗೂಳಿ ಗ್ರಾಮದಲ್ಲಿ ಮತ್ತೆ ಭೂಮಿ‌ ಕಂಪಿಸಿದ ಅನುಭವವಾಗಿದೆ. 

ಇಂದು ಬೆಳಿಗ್ಗೆ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಭೂಕಂಪನದಿಂದ ಮನಗೂಳಿ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಈ ತರಹದ ಶಬ್ದದಿಂದ‌ ಮನಗೂಳಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. 

ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 16ಕ್ಕೂ ಅಧಿಕ ಬಾರಿ ಭೂಕಂಪನವಾಗಿದೆ(Earthquake). 16 ಬಾರಿಯೂ ರಿಕ್ಟರ್ ಮಾಪಕದಲ್ಲಿ(Richter Scale) ಭೂಕಂಪನ ತೀವ್ರತೆ ದಾಖಲಾಗಿದೆ. ಕೆಲ ದಿನಗಳ ಹಿಂದಷ್ಟೇ ಭೂ ವಿಜ್ಞಾನಿಗಳ(Earth Scientists) 10 ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಸೂತಿ ಗ್ರಾಮದಲ್ಲಿ ವಿಜ್ಞಾನಿಗಳು ಭೂಕಂಪನ ಮಾಪಕ ಅಳವಡಿಕೆ ಸಾಧನವನ್ನ ಮಾಡಿದ್ದಾರೆ. 
ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುತ್ತಿರುವುದರಿಂದ ಭೂಕಂಪನದಿಂದ ಜನರು ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯ ಬಸವನ ಬಾಗೇವಾಡಿ, ವಿಜಯಪುರ, ತಿಕೋಟ(Tikota), ಬಬಲೇಶ್ವರ(Babaleshwara) ತಾಲೂಕುಗಳಲ್ಲಿ ಭೂಕಂಪನ ಕಾಟದಿಂದ ಜನರು ರೋಸಿ ಹೋಗಿದ್ದಾರೆ.

Deepavali ಸಂಭ್ರಮದ ನಡುವೆ ಭೂಕಂಪನ: ಬೆಚ್ಚಿಬಿದ್ದ ವಿಜಯಪುರದ ಜನತೆ..!

ಭೂಕಂಪನ ಪೀಡಿತ ಪ್ರದೇಶಗಳಿಗೆ ತಜ್ಞರ ಭೇಟಿ

ವಿಜಯಪುರ ಜಿಲ್ಲೆಯ ವಿವಿಧೆಡೆ 2019ರಿಂದ ಸಂಭವಿಸುತ್ತಿರುವ ಲಘು ಭೂಕಂಪನಗಳು(Earthquake) ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ(Karnataka State Disaster Management Authority), ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ(Karnataka State Natural Disaster) ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ಜನರಲ್ಲಿ ಭೂಕಂಪನ ಜಾಗೃತಿ(Awareness) ಮತ್ತು ಆತ್ಮವಿಶ್ವಾಸ ವೃದ್ಧಿಯ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಕಲಬುರಗಿ(Kalaburagi) ಜಿಲ್ಲೆಯಲ್ಲಿ ನ. 8 ಮತ್ತು 9ರಂದು ಆಯೋಜಿಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ಹೆಸರಾಂತ ವಿವಿಧ ರಾಷ್ಟ್ರೀಯ ಸಂಸ್ಥೆಗಳಾದ ರಾಷ್ಟ್ರೀಯ ಭೌತ ಸಂಶೋಧನಾ ಸಂಸ್ಥೆ (Hydrerabad), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (Bengaluru), ಭಾರತೀಯ ವಿಜ್ಞಾನ ಸಂಸ್ಥೆ (ಬೆಂಗಳೂರು) ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಶೋಧನಾ ಸಂಸ್ಥೆ (ಬೆಂಗಳೂರು), ರಾಷ್ಟ್ರೀಯ ಭೂಕಂಪನ ಅಧ್ಯಯನ ಸಂಸ್ಥೆ (New Delhi) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಬೆಂಗಳೂರು) ಸಂಸ್ಥೆಗಳ ವಿಷಯ ತಜ್ಞರು ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಕಲಬುರಗಿ) ಮೈಸೂರು ವಿಶ್ವವಿದ್ಯಾಲಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ(Government of Karnataka) ಅಧಿಕಾರಿಗಳು ಭಾಗವಹಿಸಿದ್ದರು.

ಕಲಬುರಗಿ ಜಿಲ್ಲೆಯ ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಭೂಕಂಪನ(Earthquake) ಪೀಡಿತ ಗ್ರಾಮಗಳಲ್ಲಿರುವ ಮನೆಗಳ ಮುಂದೆ ಶೆಡ್‌ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ(R Ashok) ಭರವಸೆ ನೀಡಿದ್ದರು.

ಕಲಬುರಗಿ, ವಿಜಯಪುರದಲ್ಲಿ ಮತ್ತೆ ಭೂಕಂಪ: ಆತಂಕ ಹೆಚ್ಚಳ

'ಶೆಡ್‌ ಹಾಕಿ ಕೊಡಿ, ಅಲ್ಲೇ ಮಕ್ಕೊಂಡು ಜೀವಾ ಉಳಿಸ್ಕೋತೀವಿ'

ಶೆಡ್ ಕಟ್ಟಿ ಕೊಡ್ರಿ, ಈ ಭೂಕಂಪನದಿಂದ, ಬಾರಿ ಸದ್ದಿನಿಂದ ಬಚಾವ್ ಆಗಲಿಕ್ಕಿ ಅಲ್ಲೇ ಮುದ್ಯಾಗಿ ಮಕ್ಕೊಂಡು ನಮ್ಮ ಜೀವಾ ಉಳಸ್ಕೋತೇವಿ ಎಂದು ಭೂಕಂಪ ಪೀಡಿತ ಗಡಿಕೇಶ್ವರ ಊರಿನ ಜನತೆ ಗೋಳಾಡಿದ್ದರು.

ಕೊನೆಗೂ ತಮ್ಮೂರಿಗೆ ಭೇಟಿ ನೀಡಿದ್ದ ಕಲಬುರಗಿ(Kalaburagi) ವಿಭಾಗೀಯ ಮಟ್ಟದ ಹಿರಿಯ ಕಂದಾಯ ಅಧಿಕಾರಿ, ಪ್ರಾದೇಶಿಕ ಆಯುಕ್ತ ಡಾ. ಪ್ರಸಾದ್ ಜೊತೆ ಮಾತನಾಡಿದ ಊರವರೆಲ್ಲರೂ ಭೂಮಿಯಿಂದ ಭಾರಿ ಶಬ್ದ ಉಂಟಾಗಿ ನಂತರ ಭೂಮಿ ಕಂಪಿಸುತ್ತಿರುವುದರಿಂದ ಜನರು ಜೀವದ ಭಯದಿಂದ ಜೀವನ ಕಳೆಯುವಂತಾಗಿದೆ. ನಮ್ಮ ಗ್ರಾಮಸ್ಥರ(Villagers) ಮನೆಯ ಮುಂದೆ ಅಂಗಳದಲ್ಲಿ ಚಿಕ್ಕದಾದ ಶೆಡ್(Shed) ನಿರ್ಮಿಸಿ ಕೊಟ್ಟರೆ ನಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುತ್ತೇವೆ. ಭೂಕಂಪನದಿಂದ ಜನರು ಊರನ್ನೇ ಬಿಟ್ಟು ಹೋಗಿದ್ದಾರೆಂಜು ಗೋಳಿಟ್ಟರು.
 

Follow Us:
Download App:
  • android
  • ios