ಮಾಲೂರು (ಮಾ02):  ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿ​ಕಾರಕ್ಕೆ ಬರಲಿದ್ದು ಅದರಂತೆ ಈ ಬಾರಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್‌ ಪಕ್ಷ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಅಧಿ​ಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಜಾವಗಲ್‌ ಮಂಜುನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ವಿ,ಆರ್‌ ಕನ್ವೆನ್ಶನ್‌ ಹಾಲ್‌ನಲ್ಲಿ ಸೋಮವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ರಂಜೀತ್‌ ಗೊರೂರು ಅವರಿಗೆ ಕಾಂಗ್ರೆಸ್‌ ಎಸ್‌ಸಿ, ಎಸ್ಟಿಘಟಕದಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಣ್ಣೆ-ಸೀಗೆಕಾಯಿ ಸಂಬಂಧ: ಡಿಕೆಶಿ ಬಂದಾಗ ಕುದಿಯುತ್ತಿದ್ದ ರಮೇಶ್ ಕುಮಾರ್

ಕೇಂದ್ರ ಹಾಗೂ ರಾಜ್ಯಸರ್ಕಾರವು ಜನರ ಮನಸ್ಸಿನಿಂದ ದೂರವಾಗುತ್ತಿದ್ದು, ಕಾಂಗ್ರೆಸ್‌ ಮತ್ತೆ ಅಧಿ​ಕಾರಕ್ಕೆ ಬರಲು ಯುವ ಶಕ್ತಿ ಮುಂದಾಗಬೇಕು. ರಾಜ್ಯದಲ್ಲಿ ಬಿಜೆಪಿ ಪಕ್ಷ ಬಂದಾಗಿನಿಂದ ಅಚ್ಚೇ ದಿನ್‌ ಎಂದು ಹೇಳಿಕೊಂಡು ಜನರಿಗೆ ಮಂಕುಬೂದಿ ಎರಚುತ್ತಾ ಪ್ರತಿಯೊಂದಕ್ಕೂ ಬೆಲೆ ಏರಿಕೆ ಮಾಡುತ್ತಿದೆ ಎಂದು ಟೀಕಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ವೈ.ಟಿ. ದಾಮೋಧರ್‌ ಮಾತನಾಡಿ, ಇತ್ತೀಚಿನ ಕೆಲವು ಕಾಂಗ್ರೆಸ್‌ ನಾಯಕರ ಗೊಂದಲದಿಂದಾಗಿ ಇಂದು ಪಕ್ಷ ಸಂಪೂರ್ಣ ನೆಲಕಚ್ಚುವಂತಹ ಕೆಲಸ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ತಾಲೂಕಿನ ಅಧ್ಯಕ್ಷರು ಎಷ್ಟುಸ್ಥಾನಗಳಿಸಿ ಕೊಟ್ಟಿದ್ದಾರೆ ಎಂಬ ಮಾಹಿತಿ ನೀಡಲಿ ಎಂದರು.

ಯೂತ್‌ ಕಾಂಗ್ರೆಸ್‌ ಮಾಜಿ ತಾಲೂಕು ಅಧ್ಯಕ್ಷ ಪುನೀತ್‌ ಗೌಡ ಮಾತನಾಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ನಂತರ ಈಗಿನ ಅಧ್ಯಕ್ಷರು ಕಾಂಗ್ರೆಸ್‌ನಲ್ಲಿ ಎರಡು ಗುಂಪು ಮಾಡುತ್ತಿದ್ದು, ನಿಷ್ಠಾವಂತ ಕಾಂಗ್ರೆಸ್ಸಿಗರು ಒಂದುಗೂಡಿ ಕೆಲಸ ಮಾಡಲು ಹೋಗುವವರಿಗೆ ಧಮ್ಕಿ ಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಯಾರು ತಾಲೂಕಿನಲ್ಲಿ ಸಂಘಟನೆ ಮಾಡುತ್ತಿದ್ದಾರೆ ಅವರನ್ನು ಹತ್ತಿಕ್ಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.