ಕೋಲಾರ (ಫೆ.02):  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು  ಕುರುಡುಮಲೆ ಪೂಜೆಗೆ ಆಗಮಿಸಿದಾಗ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಮುಖದಲ್ಲಿ ಅಂತಹ ನಗು ಕಾಣಲಿಲ್ಲ.

 ಬದಲಿಗೆ ಡಿಕೆಶಿ ಜೊತೆಗೆ ಇದ್ದು ಇಲ್ಲದಂತೆ ನಡೆದುಕೊಂಡರು. ಡಿಕೆಶಿಯವರನ್ನು ಸ್ವಾಗತಿಸಿದ ರಮೇಶ್‌ ಕುಮಾರ್‌ ದೇವಸ್ಥಾನದ ಪೂಜೆ ಮುಗಿಯುವ ಮುನ್ನವೇ ಹೊರಟ ಹೋದರು.

ಎಸ್‌.ಎಂ.ಕೃಷ್ಣ ರೀತಿ ಪಾಂಚಜನ್ಯ ಮೊಳಗಿಸಿ ಮತ್ತೆ ಕೈ ಅಧಿಕಾರಕ್ಕೆ : ಡಿಕೆಶಿ ...

ರಮೇಶ್‌ ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ನಡುವೆ ಎಣ್ಣೆ ಸೀಗೇ ಕಾಯಿ ಸಂಬಂಧ ಮುನಿಯಪ್ಪ ಅವರ ಮುಖ ನೋಡಿದರೆ ಬೆಂಕಿಯಾಗುತ್ತಾರೆ ಇಂತಹ ಸ್ಥಿತಿಯಲ್ಲಿ ಕೆ.ಎಚ್‌.ಬಣದವರೇ ಹೆಚ್ಚಾಗಿ ಡಿಕೆಶಿ ಅವರನ್ನು ಸುತ್ತುವರೆದಿರುವುದನ್ನು ಕಂಡು ಒಳಗೊಳಗೇ ಕುದಿಯುತ್ತಿದ್ದ ರಮೇಶ್‌ ಕುಮಾರ್‌ ಇದನ್ನೆಲ್ಲಾ ನೋಡಲಾಗದೆ ಅಲ್ಲಿಂದ ಹೊರಟೇ ಹೋದರು.