ಕಲಬುರಗಿ, [ಅ.05]:  ಜಿಲ್ಲೆಯ ಭೀಮಾ ತೀರದಲ್ಲಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಚರಣೆ ನಡೆಸಿದ್ದು, ಮಕ್ಕಳ ಆಟಿಕೆಗಳಾಗಿದ್ದ ನಾಡ ಪಿಸ್ತೂಲುಗಳನ್ನ ವಶಪಡಿಸಿಕೊಂಡಿದ್ದಾರೆ.

ಇಂದು [ಶನಿವಾರ] ಅಫಜಲಪುರ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಮತ್ತೆ 3 ನಾಡಪಿಸ್ತೂಲು, 4 ಜೀವಂತ ಗುಂಡುಗಲನ್ನ ಜಪ್ತಿ ಮಾಡಿದ್ದಾರೆ.

ಭೀಮಾತೀರದ ಕುಖ್ಯಾತಿ ಬಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವು

ಅಕ್ರಮವಾಗಿ ನಾಡ ಪಿಸ್ತೂಲು ಹೊಂದಿರುವ ಮೂವರನ್ನು ಬಂಧಿಸಿದ್ದಾರೆ. ತಡಕಲ್ ಗ್ರಾಮದ ರಮೇಶ ಹಡಪದ, ದುದ್ದಣಗಿ ಗ್ರಾಮದ ಪ್ರಭು ಜಮಾದಾರ, ಗುಂದಗಿ ಗ್ರಾಮದ ಶರಣಗೌಡ ಪಾಟೀಲ್ ಬಂಧಿತ ಆರೋಪಿಗಳು.

ಭೀಮಾ ತೀರದ ಹಂತಕರ ವಿಚಾರ ಎಲ್ಲರಿಗೂ ಗೊತ್ತಿದೆ. ಆಗಾಗ ಇಲ್ಲಿ ಪಿಸ್ತೂಲ್ ಸುದ್ದು, ರಕ್ತದೋಕುಳಿ ಆಗಿಯೇ ಆಗುತ್ತವೆ. ಯಾರ ಮನೆಯಲ್ಲೂ ನೋಡಿದ್ರೂ ಕಂಟ್ರಿ ಪಿಸ್ತೂಲ್,  ನಾಡ ಪಿಸ್ತೂಲುಗಳು ಒಂಥರಾ ಮಕ್ಕಳ ಆಟಿಕೆ ಸಮಾನುಗಳಾಗಿವೆ.