ವಿಜಯಪುರ, [ಅ.01]: ಭೀಮಾತೀರದ ಕುಖ್ಯಾತಿ ಬಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ವಿಜಯಪುರ ‌ಜಿಲ್ಲೆ ಇಂಡಿ ತಾಲೂಕಿನ ಕಪನಿಂಬರಗಿ ಬಳಿಯ ಎನ್ಎಚ್13 ರಲ್ಲಿ ನಡೆದಿದೆ.

ಮಹೀಂದ್ರಾ ಎಕ್ಸ್​ಯುವಿ  ಹಾಗೂ ಗೂಡ್ಸ್ ವಾಹನದ ಮಧ್ಯೆ ಇಂದು [ಮಂಗಳವಾರ] ಅಪಘಾತ ಸಂಭವಿಸಿದ್ದು, ಎಕ್ಸ್​ಯುವಿನಲ್ಲಿದ್ದ ಬಾಗಪ್ಪ ಪತ್ನಿ ಶೋಭಾ ಭಜಂತ್ರಿ 45 ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಕೆಲವರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. 

ಖಾಸಗಿ ಬಸ್ ಅಪಘಾತ: 21 ಮಂದಿ ಬಲಿ, ಹಲವರಿಗೆ ಗಂಭೀರ ಗಾಯ!

ಹೊರ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಶೋಭಾ ಅವರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಲಾಯ್ತು. ಈ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಶೋಭಾ ಅವರು ಚಿಕ್ಕೋಡಿಯ ಪ್ರಧಾನ ನ್ಯಾಯಾಲದಲ್ಲಿ ಎಪಿಪಿ ಆಗಿದ್ದರು.  

ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಅವರ ಸಹೋದರ ಬಾಗಪ್ಪ. ಎರಡು ವರ್ಷಗಳಿಂದ ಹಿಂದೆ ಕೊಲೆ ಪ್ರಕರಣವೊಂದರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುತ್ತಿದ್ದಾಗ ಭೀಮಾ ತೀರದ ರೌಡಿ ಬಾಗಪ್ಪ ಹರಿಜನ (45) ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದರು. ಅದೃಷ್ಟವಶಾತ್ ಬಾಗಪ್ಪ ಪ್ರಾಣಾಪಾಯದಿಂದ ಪರಾಗಿದ್ದನ್ನು ಇಲ್ಲಿ ಸ್ಮರಿಸಬಹದು.