Asianet Suvarna News Asianet Suvarna News

ಹಬ್ಬದಂದು ತುಮಕೂರು ಗೊರೊವನಹಳ್ಳಿ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಅವಕಾಶ

ತುಮಕೂರು ಗೊರೊವನಹಳ್ಳಿ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಅವಕಾಶ/ ಅರ್ಚಕರ ಪತ್ನಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದ ಕಾರಣ ಸೀಲ್ ಡೌನ್ ಆಗಿದ್ದ ದೇವಾಲಯ/  ವರಮಹಾಲಕ್ಷ್ಮಿ ಹಬ್ಬಕ್ಕೆ ದೇವಿ ದರ್ಶನ ಮಾಡಬಹುದು

After Sealed down goravanahalli lakshmi temple reopen
Author
Bengaluru, First Published Jul 30, 2020, 10:12 PM IST

ತುಮಕೂರು(ಜು. 30)   ಸೀಲ್ ಡೌನ್ ಆಗಿದ್ದ  ತುಮಕೂರು ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅರ್ಚಕರ ಪತ್ನಿಗೆ ಕೊರೋನಾ ಕಾಣಿಸಿಕೊಂಡಿದ್ದರಿಂದ ದೇವಾಲಯ ಸೀಲ್ ಡೌನ್ ಮಾಡಲಾಗಿತ್ತು.

ವರಮಹಾಲಕ್ಷ್ಮಿ ಹಬ್ಬದ ದಿನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.  ಜುಲೈ 20ರಿಂದಲೇ ದೇವಾಲಯ ಸೀಲ್ ಡೌನ್ ಮಾಡಲಾಗಿತ್ತು. ವಿಶೇಷ ಪೂಜೆಗೂ ಅವಕಾಶ ನೀಡಲಾಗಿದ್ದು ಧರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ರಾಜ್ಯ ಸರ್ಕಾರದ ಅನ್ ಲಾಕ್ ಮಾರ್ಗಸೂಚಿ; ಏನೆಲ್ಲ ರಿಯಾಯಿತಿ?

ದೇವಿಯ ವಿಶೇಷ ಪೂಜೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ.ಹಣ್ಣು-ಕಾಯಿ ಹೂವು ಯಾರೂ ತರಬಾರದು ಪ್ರಸಾದ ವಿತರಣೆಯನ್ನು ಈಗಾಗಲೇ ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.  ಸಾಮಾಜಿಕ ಅಂತರ ಕಾಯ್ದುಕೊಂಡು ದೇವಿ ದರ್ಶನ ಪಡೆದುಕೊಳ್ಳಬೇಕು. ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.

 

 

Follow Us:
Download App:
  • android
  • ios