ರಾಮನಗರ (ನ.11): ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರ ವಿದ್ಯಾರ್ಥಿ ನಿಲಯಗಳನ್ನು ನ. 17 ರಂದು ಪ್ರಾರಂಭಿಸಲಾಗುವುದು.

ಜಿಲ್ಲೆಯ ಮೆಟ್ರಿಕ್‌ ನಂತರದ ಬಾಲಕರ/ಬಾಲಕಿಯರ ವಿದ್ಯಾರ್ಥಿನಿಲಯಗಳನ್ನು ಈ ಹಿಂದಿನ ವರ್ಷದಲ್ಲಿ ದಾಖಲಾಗಿ ನವೀಕರಣಗೊಂಡಿರುವ ದ್ವಿತೀಯ ಪದವಿ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌-19 ಟೆಸ್ವ್‌ ಮಾಡಿಸಿ ದೃಢೀಕರಣ ಸಲ್ಲಿಸುವುದು. 

ಯಾವುದೇ ಗಂಭೀರವಾದ ಕಾಯಿಲೆಗಳು (ಹೃದಯ ಸಂಬಂಧಿ, ಕಿಡ್ನಿ ಸಮಸ್ಯೆ, ಶ್ವಾಸಕೋಶ ತೊಂದರೆ ಹಾಗೂ ಕ್ಯಾನ್ಸರ್‌) ಇಲ್ಲದಿರುವ ಬಗ್ಗೆ ವೈದ್ಯರಿಂದ ದೃಢೀಕರಣ ಪತ್ರ ಹಾಗೂ ವಿದ್ಯಾರ್ಥಿನಿಲಯಕ್ಕೆ ದಾಖಲಾಗುವ ಸಮಯದಲ್ಲಿ ಪೋಷಕರಿಂದ ಪಡೆದಿರುವ ಒಪ್ಪಿಗೆ ಪತ್ರ ಸಲ್ಲಿಸುವುದು.

ನ.17ಕ್ಕೆ ವಿವಿ, ಕಾಲೇಜು ಪುನಾರಂಭಕ್ಕೆ ಭರದ ಸಿದ್ಧತೆ

ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್‌ ಭವನ, 2ನೇ ಮಹಡಿ, ಬಿ.ಎಂ. ರಸ್ತೆ, ರಾಮನಗರ ಜಿಲ್ಲೆ ಇಲ್ಲಿ ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.