Asianet Suvarna News Asianet Suvarna News

ಎಚ್‌ಎಎಲ್‌ ವಿಮಾನದ ಮೇಲಿಂದ ನಾಪತ್ತೆ ಆಗಿದ್ದ ಹನುಮನ ಚಿತ್ರ ಕೊನೆಯ ದಿನ ಪ್ರತ್ಯಕ್ಷ

ವಿವಾದದ ಭೀತಿಯಿಂದ ಚಿತ್ರವನ್ನು ಮರುದಿನವೇ ತೆಗೆದು ಹಾಕಲಾಗಿತ್ತು ಎಂದು ಎಚ್‌ಎಎಲ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದರೆ, ಕೊನೆಯ ದಿನವಾದ ಶುಕ್ರವಾರ ಮತ್ತೆ ಭಜರಂಗಿ ಚಿತ್ರವನ್ನು ವಿಮಾನದ ರೆಕ್ಕೆಯಲ್ಲಿ ಪ್ರದರ್ಶಿಸಲಾಗಿದೆ.

aero india 2023 lord hanuman pic back on tail of hal aircraft 3 days after removal ash
Author
First Published Feb 18, 2023, 10:53 AM IST

ಬೆಂಗಳೂರು (ಫೆಬ್ರವರಿ 18, 2023): ಎಚ್‌ಎಎಲ್‌ ಅಭಿವೃದ್ಧಿ ಪಡಿಸುತ್ತಿರುವ ಮಾರುತ್‌ ಹೆಸರಿನ ಎಚ್‌ಎಲ್‌ಎಫ್‌ಟಿ-42 ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ತರಬೇತಿ ವಿಮಾನದ ಮೇಲೆ ಮತ್ತೆ ಪವನಪುತ್ರ ಆಂಜನೇಯನ ಚಿತ್ರ ಹಾಕಿ ಕೊನೆಯ ದಿನದ ಏರೋ ಇಂಡಿಯಾದಲ್ಲಿ ಪ್ರದರ್ಶಿಸಿದೆ. ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023 ರ ಅಂತಿಮ ದಿನದಂದು ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ಎಚ್‌ಎಲ್‌ಎಫ್‌ಟಿ-42ನ ಬಾಲದ ಮೇಲೆ ಭಗವಾನ್ ಹನುಮಾನ್ ಚಿತ್ರವು ಮತ್ತೆ ಹಿಂತಿರುಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮಾಹಿತಿ ನೀಡಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಎಚ್‌ಎಲ್‌ಎಫ್‌ಟಿ - 42 ಪೂರ್ಣ ಪ್ರಮಾಣದ ಮಾಡೆಲ್‌ ಮತ್ತೆ ಹಿಂದೂ ದೇವರನ್ನು ಪ್ರದರ್ಶಿಸುವ ಚಿತ್ರಗಳನ್ನು ಹಂಚಿಕೊಂಡಿದೆ. 3 ದಿನಗಳ ಹಿಂದೆ ಹನುಮಾನ್‌ ಚಿತ್ರಗಳನ್ನು ತೆಗೆದುಹಾಕಲಾಗಿತ್ತು.

ಏರೋ ಇಂಡಿಯಾದ (Aero India) ವೈಮಾನಿಕ ಪ್ರದರ್ಶನ ಆರಂಭದಿಂದ ಎಚ್‌ಎಲ್‌ಎಫ್‌ಟಿ-42 (HLFT - 42) ವಿಮಾನ ಹಿಂಬದಿಯ ರೆಕ್ಕೆಯ ಮೇಲೆ ಕೈಯಲ್ಲಿ ಗದೆ ಹಿಡಿದಿರುವ ಆಂಜನೇಯನ ಚಿತ್ರ ಹಾಕಲಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿವಾದದ ಭೀತಿಯಿಂದ ಚಿತ್ರವನ್ನು ಮರುದಿನವೇ ತೆಗೆದು ಹಾಕಲಾಗಿತ್ತು ಎಂದು ಎಚ್‌ಎಎಲ್‌ (HAL) ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದರೆ, ಕೊನೆಯ ದಿನವಾದ ಶುಕ್ರವಾರ ಮತ್ತೆ ಭಜರಂಗಿ ಚಿತ್ರವನ್ನು ವಿಮಾನದ ರೆಕ್ಕೆಯಲ್ಲಿ ಪ್ರದರ್ಶಿಸಲಾಗಿದೆ.

ಇದನ್ನು ಓದಿ: Aero India 2023 ಸೂಪರ್‌ಸಾನಿಕ್ ಏರ್‌ಕ್ರಾಫ್ಟ್‌ನಿಂದ ಹನುಮಾನ್ ಸ್ಟಿಕ್ಕರ್ ಮಾಯ!

ಸೋಮವಾರ ಆರಂಭವಾದ ಐದು ದಿನಗಳ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್‌ನ ಹಾಲ್-3ರಲ್ಲಿ ಸ್ಟ್ಯಾಟಿಕ್ ಡಿಸ್ಪ್ಲೇ ಏರ್‌ಕ್ರಾಫ್ಟ್ ಮಾಡೆಲ್‌ ಅನ್ನು ಪ್ರದರ್ಶಿಸಲಾಗಿತ್ತು. 'ಎಚ್‌ಎಎಲ್‌ನಲ್ಲಿ ಹನುಮಾನ್' ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮತ್ತು ಚರ್ಚೆಯನ್ನು ಹುಟ್ಟುಹಾಕಿದ ನಂತರ, ಯಾವುದೇ ನಿರ್ದಿಷ್ಟ ಕಾರಣವನ್ನು ಹೇಳದೆ ರಕ್ಷಣಾ ಪಿಎಸ್‌ಯು ಸಂಸ್ಥೆ ಎಚ್‌ಎಎಲ್‌ ಮಂಗಳವಾರ ತೆಗೆದುಹಾಕಿತ್ತು. ಇದನ್ನು ಭಾರತದ ಮೊದಲ ಸ್ವದೇಶಿ ವಿಮಾನ HF-24 ಮಾರುತ್ (ಗಾಳಿ ಎಂದರ್ಥ) ನಿಂದ ಪಡೆಯಲಾಗಿದೆ ಎಂದು  ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು. ಹನುಮಾನ್‌ ಚಿತ್ರ ತೆಗೆದಿದ್ದರೂ ‘’ದಿ ಸ್ಟ್ರಾಮ್‌ ಈಸ್‌ ಕಮಿಂಗ್’’ ಎಂಬ ಸ್ಲೋಗನ್ ಹಾಗೇ ಉಳಿದಿತ್ತು. 

ಇನ್ನು, ಈ ವಿವಾದದ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದ ಎಚ್‌ಎಎಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ಸಿಬಿ ಅನಂತಕೃಷ್ಣನ್, ಇಡೀ ಸಂಚಿಕೆಯು ಉದ್ದೇಶಪೂರ್ವಕವಲ್ಲ ಎಂದು ಹೇಳಿದ್ದರು. HLFT-42 ಎಂಬುದು 'ಮುಂದಿನ ಜನರೇಷನ್‌ ಸೂಪರ್‌ಸಾನಿಕ್ ಟ್ರೈನರ್‌' ಆಗಿದ್ದು, ಇದು ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ 'ನಿರ್ಣಾಯಕ ಪಾತ್ರ' ವಹಿಸುತ್ತದೆ ಮತ್ತು ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ, ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್, ಇನ್‌ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕ್ ವಿತ್ ಫ್ಲೈ ಬೈ ವೈರ್ ಕಂಟ್ರೋಲ್ ಸಿಸ್ಟಮ್ ಹೊಂದಿದೆ ಎಂದೂ ಎಚ್ಎಎಲ್ ಕಳೆದ ವಾರ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೀತಿರೋ ಏರೋ ಇಂಡಿಯಾದ 2ನೇ ದಿನದ ವಿಹಂಗಮ ನೋಟ ಹೀಗಿದೆ..

ಎಚ್‌ಎಎಲ್‌ ಅಭಿವೃದ್ಧಿಪಡಿಸುತ್ತಿರುವ ಈ ವಿಮಾನ ತರಬೇತಿ ವಿಮಾನವಾಗಿದ್ದು, ತೇಜಸ್‌-ಮಾರ್ಕ್ 2 ಮಾದರಿಯ ತಂತ್ರಜ್ಞಾನವನ್ನು ಹೊಂದಿದೆ. 2030ರ ವೇಳೆಗೆ ಈ ವಿಮಾನ ಹಾರಾಟಕ್ಕೆ ಸಿದ್ಧವಾಗಲಿದೆ.

ಏಷ್ಯಾದ ಅತಿದೊಡ್ಡ ಏರೋ ಶೋನ 14 ನೇ ಆವೃತ್ತಿ - ಏರೋ ಇಂಡಿಯಾ 2023 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಉದ್ಘಾಟಿಸಿದ್ದರು. ವಾಯು ರಕ್ಷಣಾ ವ್ಯವಸ್ಥೆಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು (UAS), ವೈಮಾನಿಕ ಮತ್ತು ನೆಲದ ನಿಖರವಾದ ಮಾರ್ಗದರ್ಶಿ ಯುದ್ಧಸಾಮಗ್ರಿಗಳು, ಎಲೆಕ್ಟ್ರಾನಿಕ್ ವಾರ್‌ಫೇರ್‌ (EW) ವ್ಯವಸ್ಥೆಗಳು, ಭೂಮಿ ಮತ್ತು ನೌಕಾ ಪರಿಹಾರಗಳು, ಏವಿಯಾನಿಕ್ ವ್ಯವಸ್ಥೆಗಳು, ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಹಾಗೂ ಹೆಚ್ಚಿನ ತಂತ್ರಜ್ಞಾನಗಳು ಪ್ರದರ್ಶನದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

Follow Us:
Download App:
  • android
  • ios