Asianet Suvarna News Asianet Suvarna News

Aero India 2023 ಸೂಪರ್‌ಸಾನಿಕ್ ಏರ್‌ಕ್ರಾಫ್ಟ್‌ನಿಂದ ಹನುಮಾನ್ ಸ್ಟಿಕ್ಕರ್ ಮಾಯ!

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ಹೆಎಚ್ಎಎಲ್ ಅಭಿವೃದ್ಧಿಪಡಿಸಿದ  HLFT-42 ಸೂಪರ್‌ಸಾನಿಕ್ ಏರ್‌ಕ್ರಾಫ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಇದು ದೇಶದ ಗಮನಸೆಳೆದಿತ್ತು. ಈ ವಿಮಾನದ ಬಾಲದಲ್ಲಿ ಹುನುಮಾನ್ ಚಿತ್ರ ಅಂಟಿಸಲಾಗಿತ್ತು. ಆದರೆ ಹನುಮಾನ್ ಸ್ಟಿಕ್ಕರ್‌ನ್ನು HAL ತೆಗೆದಿದೆ.
 

HAL removes Lord hanuman sticker from tail of the HLFT 42 aircraft at the Aero India 2023 in Bengaluru ckm
Author
First Published Feb 14, 2023, 5:18 PM IST

ಬೆಂಗಳೂರು(ಫೆ.14): ಪ್ರತಿಷ್ಠಿತ ಏರ್‌ಶೋ ಕಾರ್ಯಕ್ರಮದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ನೋಡುಗ ಮನಸೂರೆಗೊಳಿಸುತ್ತಿದೆ. ಇದರ ಜೊತೆಗೆ ಸ್ವದೇಶಿ ಯುದ್ಧವಿಮಾನಗಳು, ಕಾಂಬಾಟ್ ಹೆಲಿಕಾಪ್ಟರ್ ಪ್ರದರ್ಶನ ಆತ್ಮನಿರ್ಭರ ಭಾರತವನ್ನು ತೋರಿಸುತ್ತಿದೆ. ಸ್ವದೇಶಿ ನಿರ್ಮಿತ ಏರ್‌ಕ್ರಾಫ್ಟ್ ಪೈಕಿ ಹೆಚ್‌ಎಎಲ್ ಅಭಿವೃದ್ಧಿಪಡಿಸಿರುವ HLFT-42 ಸೂಪರ್‌ಸಾನಿಕ್ ಏರ್‌ಕ್ರಾಫ್ಟ್ ಭಾರಿ ಸದ್ದು ಮಾಡಿದೆ. ಒಂದು ಇದರ ಪರ್ಫಾಮೆನ್ಸಿ ಮತ್ತೊಂದು ಈ ವಿಮಾನದಲ್ಲಿ ಬಳಸಿರುವ ಹನುಮಾನ್ ಚಿತ್ರ. HLFT-42 ವಿಮಾನದ ಮೇಲೆ ಆಂಜನೇಯ ಚಿತ್ರ ಅಂಟಿಸಲಾಗಿತ್ತು. ಆದರೆ ಎರಡೇ ದಿನಕ್ಕೆ HLFT-42 ಏರ್‌ಕ್ರಾಫ್ಟ್‌ನಿಂದ ಆಂಜನೇಯ ಸ್ಟಿಕ್ಕರ್ ತೆಗೆಯಲಾಗಿದೆ. ಸ್ವತಃ ಹೆಚ್‌ಎಎಲ್ ಈ ಸ್ಟಿಕ್ಕರ್ ತೆಗೆದು ಹಾಕಿದೆ.

ಹನುಮಾನ್ ಸ್ಟಿಕ್ಕರ್ ಕುರಿತ ಪರ ವಿರೋಧ ವ್ಯಕ್ತವಾಗಿತ್ತು. ಯುದ್ಧ ವಿಮಾನದಲ್ಲಿ ದೇವರ ಚಿತ್ರ ಯಾಕೆ ಅನ್ನೋ ಪ್ರಶ್ನೆ ಎದ್ದಿತ್ತು. ಇಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರಿಂದ ಭಾರತಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳ ಕುರಿತು ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಹೆಎಚ್‌ಎಎಲ್ ಮಹತ್ವದ ಹೆಜ್ಜೆ ಇಟ್ಟಿದೆ. HLFT-42 ಸುಧಾರಿತ ಮತ್ತು ಅತ್ಯಧುನಿಕ ತಂತ್ರಜ್ಞಾನ ಹೊಂದಿರುವ ತರಬೇತಿ ವಿಮಾನದ ಮೇಲೆ ಪವನಪುತ್ರ ಆಂಜನೇಯನ ಚಿತ್ರ ಹಾಕಲಾಗಿತ್ತು. ಈ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಹೆಚ್ಎಎಲ್ ಚರ್ಚೆ ನಡೆಸಿ ಇದೀಗ ಆಂಜನೇಯ ಸ್ಟಿಕ್ಕರ್ ತೆಗೆಯಲಾಗಿದೆ.ಸದ್ಯ ಆಂಜನೇಯ ಚಿತ್ರ ಹಾಕುವುದು ಸೂಕ್ತವಲ್ಲ ಎಂದು ಹೆಚಎಎಲ್ ಚೇರ್ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿಬಿ ಆನಂತಕೃಷ್ಣನ್ ಹೇಳಿದ್ದಾರೆ.

 

 

Aero India: ಬಾನಂಗಳದಲ್ಲಿ ವಿಮಾನಗಳ ಚಿತ್ತಾರ: ಜನಾಕರ್ಷಣೆಗೊಂಡ ಆಂಜನೇಯ ಯುದ್ದ ವಿಮಾನ

ಮೊದಲ ದಿನ ಹೆಚ್ಎಎಲ್ ಆಂಜನೇಯ ಸ್ಟಿಕ್ಕರ್ ಅಂಟಿಸಿದ HLFT-42 ಎಲ್ಲರ ಗಮನಸೆಳೆದಿತ್ತು. ಆಂಜನೇಯ ಕೈಯಲ್ಲಿ ಗದೆಯನ್ನು ಹಿಡಿದು ಹಾರಿದ ಮಾದರಿಯಲ್ಲಿ ಚಿತ್ರ ಬರೆಯಲಾಗಿದೆ. ವಿಮಾನದ ಹಿಂಬದಿಯ ಬಾಲದ ಎಡ ಮತ್ತು ಬಲ ಎರಡೂ ಕಡೆಯೂ ಬರೆಯಲಾಗಿದೆ. ವಿಮಾನದ ಕುರಿತು ವಿವರಣೆ ನೀಡಿದ ಟೆಸ್ಟ್‌ ಫೈಲೆಟ್‌ ಹರ್ಷವರ್ಧನ್‌ ಠಾಕೂರ್‌, ಎಚ್‌ಎಎಲ್‌ ಮಾರುತ್‌ ಹೆಸರಿನ ಎಚ್‌ಎಲ್‌ಎಫ್‌ಟಿ-42 ತರಬೇತಿ ಯುದ್ಧ ವಿಮಾನ ಅಭಿವೃದ್ಧಿ ಪಡಿಸುತ್ತಿದೆ. 2030ರ ವೇಳೆಗೆ ಈ ವಿಮಾನ ಹಾರಾಟಕ್ಕೆ ಸಿದ್ಧವಾಗಲಿದೆ. ಇದು ತೇಜಸ್‌-ಮಾರ್ಕ್ 2 ಮಾದರಿಯ ತಂತ್ರಜ್ಞಾನವನ್ನು ಹೊಂದಿದೆ.

Aero India 2023 : ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ: ಗಮನ ಸೆಳೆದ ಯುದ್ದ ವಿಮಾನಗಳ ಕಸರತ್ತು
 
ಹನುಮಾನ್ ಶಕ್ತಿ ರೀತಿಯ ಪರ್ಫಾಮೆನ್ಸ್ ಬಿಂಬಿಸಲು ಚಿತ್ರ ಅಂಟಿಸಲಾಗಿತ್ತು. ಮಾರುತ ಅನ್ನೋ ಹೆಸರಿನಲ್ಲಿ ಈ ಏರ್‌ಕ್ರಾಫ್ಟ್ ಬಿಡುಗಡೆ ಮಾಡಲು ಹೆಚ್‌ಎಎಲ್ ಸಿದ್ಧತೆ ನಡೆಸಿತ್ತು. ಆದರೆ ಆಂತಿರಕ ಸಭೆ ಬಳಿಕ ಸ್ಟಿಕ್ಕರ್ ತೆಗೆಯಲಾಗಿದೆ. 

Follow Us:
Download App:
  • android
  • ios