ವಕೀಲರ ಭವನ ಕಾಮಗಾರಿ ಕಳಪೆ: ಗುತ್ತಿಗೆದಾರ ವಿರುದ್ಧ ಸುಪ್ರೀಂ ನ್ಯಾಯಮೂರ್ತಿ ಗರಂ
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವಕೀಲರ ಭವನದ ಕಾಮಗಾರಿ ವೀಕ್ಷಣೆಗೆ ದಿಢೀರ್ ಭೇಟಿ ನೀಡಿದ ಸುಪ್ರೀಂ ಕೋರ್ಚ್ ನ್ಯಾಯಾಧೀಶ ಅಬ್ದು$್ದಲ್ ನಝೀರ್ ಅವರು ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಮೂಡುಬಿದಿರೆ(ಅ.31) : ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ವಕೀಲರ ಭವನದ ಕಾಮಗಾರಿ ವೀಕ್ಷಣೆಗೆ ದಿಢೀರ್ ಭೇಟಿ ನೀಡಿದ ಸುಪ್ರೀಂ ಕೋರ್ಚ್ ನ್ಯಾಯಾಧೀಶ ಅಬ್ದು$್ದಲ್ ನಝೀರ್ ಅವರು ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಕಳಪೆ ರಸ್ತೆ ವರದಿ ಕೇಳಿದ ಪಿಎಂ ಕಚೇರಿ: ಕ್ಯಾರೆ ಎನ್ನದ ಪಾಲಿಕೆ!
ನಿರ್ಮಾಣ ಹಂತದ ವಕೀಲರ ಭವನದ ಕಾಮಗಾರಿ ಅತ್ಯಂತ ಕಳಪೆಯಾಗಿರುವುದನ್ನು ಕಂಡು ನ್ಯಾಯಾಧೀಶರು ಗರಂ ಆದರು. ನ್ಯಾಯಾಧೀಶರ ಭೇಟಿಯ ಪೂರ್ವ ಮಾಹಿತಿ ಇದ್ದರೂ ಗುತ್ತಿಗೆದಾರ ಸ್ಥಳದಲ್ಲಿ ಇರದಿದ್ದುದು ನ್ಯಾಯಾಧೀಶರನ್ನು ಕೆರಳಿಸಿದೆ ಎನ್ನಲಾಗಿದೆ. ದನದ ಕೊಟ್ಟಿಗೆಗೆ ಅಳವಡಿಸುವ ಸಾಮಾಗ್ರಿಗಳನ್ನು ಬಳಕೆ ಮಾಡಲಾಗಿದೆ ಎಂದು ಕಾಮಗಾರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ನ್ಯಾಯಮೂರ್ತಿ ನಝೀರ್ ಕಳಪೆ ಟೈಲ್ಸ್, ಅವೈಜ್ಞಾನಿಕ ಕಾಮಗಾರಿ ಒಡೆದು ಸರಿಪಡಿಸುವಂತೆ ಇಂಜಿನಿಯರ್‌ಗೆ ತಾಕೀತು ಮಾಡಿದ್ದಾರೆ. ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಐದು ವರ್ಷ ಯಾವುದೇ ಗುತ್ತಿಗೆ ಕೊಡದಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವ್ಯವಾಹಾರದ ಸುಳಿವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆಕ್ರೋಶಗೊಂಡ ನ್ಯಾಯಮೂರ್ತಿಗಳು, ನ್ಯಾಯಾಧೀಶರಿಗೆ ಎಲ್ಲಾ ವಿಧದ ಪರಿಜ್ಞಾನವೂ ಇರುತ್ತದೆ. ನಮಗೆ ಸತ್ಯಾಂಶ ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂದು ಪರೋಕ್ಷಾಗಿ ಕಿಡಿಕಾರಿದ್ದಾರೆ. ಕೊನೆ ಕ್ಷಣದಲ್ಲಿ ಗುತ್ತಿಗೆದಾರ ಆಗಮಿಸಿದ್ದು, ತನ್ನ ತವರೂರಿನಲ್ಲಿ ಈ ರೀತಿ ನಡೆದಿರುವುದು ಮನಸ್ಸಿಗೆ ಅತೀವ ನೋವನ್ನುಂಟು ಮಾಡಿದೆ ಎಂದ ಅವರು, ಗುತ್ತಿಗೆದಾರನ ಮುಖವನ್ನೂ ನೋಡದೆ ಮರಳಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರೂ ಹಾಜರಿದ್ದರು. ಕಳಪೆ ಕಾಮಗಾರಿ: ಮಣ್ಣು ಪರೀಕ್ಷೆ ಮಾಡದೆ ಎರೆ ಮಣ್ಣಿಗೆ ಕಾಂಕ್ರಿಟ್!