ಕಳಪೆ ರಸ್ತೆ ವರದಿ ಕೇಳಿದ ಪಿಎಂ ಕಚೇರಿ: ಕ್ಯಾರೆ ಎನ್ನದ ಪಾಲಿಕೆ!

  • ಕಳಪೆ ರಸ್ತೆ ವರದಿ ಕೇಳಿದ ಪಿಎಂ ಕಚೇರಿ: ಕ್ಯಾರೆ ಎನ್ನದ ಪಾಲಿಕೆ!
  • -ವರದಿ ನೀಡದೆ ನಿರ್ಲಕ್ಷ್ಯ
  • ಆರ್‌ಟಿಐ ವರದಿಯಲ್ಲಿ ಬಹಿರಂಗ
PM Office asked hearing the poor road report but bbmp dont care rav

ಬೆಂಗಳೂರು (ಅ.24) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ ವೇಳೆ ಪ್ರಧಾನಿ ಸಂಚರಿಸಿದ ರಸ್ತೆಗಳಲ್ಲಿ ನಡೆಸಲಾದ ಕಳಪೆ ಕಾಮಗಾರಿ ಆರೋಪಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಪ್ರಧಾನಿ ಕಚೇರಿ ನೀಡಿದ ಸೂಚನೆಯನ್ನು ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷಿಸಿರುವುದು ಇದೀಗ ಬೆಳಕಿಗೆ ಬಂದಿದೆ.

Bengaluru city: ಶಾಂತಿ ನಗರದ ತುಂಬ ಡೆಡ್ಲಿ ಗುಂಡಿಗಳು!

ಕಳೆದ ಜೂನ್‌ 20ರಂದು ವಿವಿಧ ಕಾಮಗಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಡಾಂಬರೀಕರಣ ಮಾಡಲಾಗಿತ್ತು. .23.5 ಕೋಟಿ ವೆಚ್ಚದಲ್ಲಿ 14 ಕಿ.ಮೀ. ಉದ್ದದ ರಸ್ತೆ ವಿವಿಧ ರಸ್ತೆಗಳನ್ನು ದುರಸ್ತಿ ಮಾಡಲಾಗಿತ್ತು.

ಅದರಲ್ಲಿ ಕೊಮ್ಮಘಟ್ಟರಸ್ತೆಯಲ್ಲಿ ಹಾಕಲಾಗಿದ್ದ ಡಾಂಬಾರು ಪ್ರಧಾನಿ ಬೆಂಗಳೂರು ಬಂದು ನಿರ್ಗಮಿಸಿದ ಮರುದಿನವೇ ಕಿತ್ತು ಹೋಗಿತ್ತು. ಈ ಕಳಪೆ ಕಾಮಗಾರಿ ಕುರಿತು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ, ಪ್ರಧಾನಿ ಕಚೇರಿಯಿಂದಲೂ ಈ ಕುರಿತು ವರದಿ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು.

ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕೂಡ ಪ್ರಧಾನಮಂತ್ರಿ ಕಚೇರಿಗೆ ವರದಿ ನೀಡಿರುವುದಾಗಿ ಹೇಳಿದ್ದರು. ಆದರೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ನೀಡಿರುವ ಮಾಹಿತಿಯನ್ನು ಗಮನಿಸಿದರೆ, ಮುಖ್ಯ ಆಯುಕ್ತರು ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವುದು ಸ್ಪಷ್ಟವಾಗಿದೆ. ಜತೆಗೆ ಪ್ರಧಾನಿ ಕಚೇರಿಯ ಮಾಹಿತಿಯಂತೆ ಬಿಬಿಎಂಪಿಯಿಂದ ಸಲ್ಲಿಕೆಯಾದ ಯಾವ ವರದಿಯೂ ತಮ್ಮ ಬಳಿಯಿಲ್ಲ ಎಂದು ತಿಳಿಸಲಾಗಿದೆ. ಆ ಮೂಲಕ ಪ್ರಧಾನಮಂತ್ರಿ ಕಚೇರಿ ಸೂಚನೆಯನ್ನೂ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ಪಾಲಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!

ಪ್ರಧಾನಮಂತ್ರಿ ಬಂದಾಗ ದುರಸ್ತಿ ಮಾಡಲಾದ ರಸ್ತೆಗಳ ವಿವರ

ರಸ್ತೆ ಉದ್ದ ವೆಚ್ಚ

  • ಬಳ್ಳಾರಿ ರಸ್ತೆ 2.4 ಕಿ.ಮೀ .4.6 ಕೋಟಿ
  • ಮೈಸೂರು ರಸ್ತೆ 0.10 ಕಿ.ಮೀ. .35 ಲಕ್ಷ
  • ಬೆಂಗಳೂರು ವಿವಿ ರಸ್ತೆ 3.60 ಕಿ.ಮೀ. .6.5 ಕೋಟಿ
  • ತುಮಕೂರು ರಸ್ತೆ 0.90 ಕಿ.ಮೀ. .1.5 ಕೋಟಿ
  • ಕೊಮ್ಮಘಟ್ಟರಸ್ತೆ 7 ಕಿ.ಮೀ. .11.5 ಕೋಟಿ
Latest Videos
Follow Us:
Download App:
  • android
  • ios