Asianet Suvarna News Asianet Suvarna News

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಸಲಹೆ

ಯುವ ಮತದಾರರು ಹಾಗೂ ಮತಪಟ್ಟಿಯಲ್ಲಿ ಹೆಸರನ್ನು ಸೇರಿಸದೆ ಇರುವ ಯುವಜನತೆ ತಪ್ಪದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನುನೋಂದಾಯಿಸಿಕೊಳ್ಳಲು ಜಿ.ಪಂ. ಸಹಾಯಕ ಕಾರ್ಯದರ್ಶಿ ಮಂಜುನಾಥ್ ಹೆಚ್.ಎಂ. ಸಲಹೆ ನೀಡಿದರು.

Advise to register name in voter list snr
Author
First Published Dec 9, 2023, 8:48 AM IST

 ತುಮಕೂರು :  ಯುವ ಮತದಾರರು ಹಾಗೂ ಮತಪಟ್ಟಿಯಲ್ಲಿ ಹೆಸರನ್ನು ಸೇರಿಸದೆ ಇರುವ ಯುವಜನತೆ ತಪ್ಪದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನುನೋಂದಾಯಿಸಿಕೊಳ್ಳಲು ಜಿ.ಪಂ. ಸಹಾಯಕ ಕಾರ್ಯದರ್ಶಿ ಮಂಜುನಾಥ್ ಹೆಚ್.ಎಂ. ಸಲಹೆ ನೀಡಿದರು.

ನಗರದ ಸ.ಪ್ರ.ದ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಕಾಲೇಜು ಶಿಕ್ಷಣ ಇಲಾಖೆ, ಜಿ.ಪಂ. ಮತ್ತು ಸ್ವೀಪ್ ಸಮಿತಿ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಜನವರಿ 25 ರಂದು ನಡೆಯುವ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದರು.

ಪ್ರಾಂಶುಪಾಲರು ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಸಂವಿಧಾನವೇ ನೀಡಿದೆ. ಅದನ್ನು ನಾವೆಲ್ಲರೂ ತಪ್ಪದೇ ಚಲಾಯಿಸಬೇಕು ಎಂದರು.

ಸಂಚಾಲಕ ಮಂಜುನಾಥ್ ಆರ್ ಮಾತನಾಡಿ, ಜಿಲ್ಲಾ ಮಟ್ಟದ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಸಹಾಯಕ ನಿರ್ದೇಶಕ ಪಿ.ಆರ್.ಬಡೇಖಾನವರ, ಡಾ.ಜಿ.ಕೆ.ನಾಗರಾಜು, ಕ್ವಿಜ್ ಸಂಚಾಲಕ ಡಾ.ಯೋಗೀಶ್ ಎನ್, ಜಿ.ಪಂ.ನ ಶ್ರೀಕಾಂತ್ ಹಾಜರಿದ್ದರು.

ಕಟಕಟೆಯಲ್ಲಿ ಬಿಜೆಪಿ ಚಿಹ್ನೆ

ಚೆನ್ನೈ (ಡಿ.8): ಮದ್ರಾಸ್‌ ಹೈಕೋರ್ಟಿನಲ್ಲೊಂದು ಅಸಾಮಾನ್ಯ ದಾವೆಯೊಂದು ದಾಖಲಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯ ರಾಜಕೀಯ ಪ್ರಭಾವ ಅಥವಾ ಉಪಸ್ಥಿತಿ ನಗಣ್ಯವೆಂದೇ ಹೇಳಬಹುದು. ಆದರೆ ಬಿಜೆಪಿಯ 'ಚಿಹ್ನೆ'ಯನ್ನು ಮಾತ್ರ ಈಗ ಕಟಕಟೆಯಲ್ಲಿ ನಿಲ್ಲಿಸಲಾಗಿದೆ! ಬಿಜೆಪಿಯ ಚಿಹ್ನೆಯಾಗಿರುವ ಕಮಲವು  ರಾಷ್ಟ್ರೀಯ ಹೂವಾಗಿದ್ದು, ಧಾರ್ಮಿಕ ಸಂಕೇತವೂ ಆಗಿದೆ. ಹಾಗಾಗಿ ಅದನ್ನ ರಾಜಕೀಯ ಪಕ್ಷದ ಚಿಹ್ನೆಯಾಗಿ ಬಳಸುವುದು  ರಾಷ್ಟ್ರೀಯ ಸಮಗ್ರತೆಗೆ ಅಗೌರವ ತೋರಿದಂತೆ ಎಂದು ರಮೇಶ್‌ ಎಂಬುವವರು  ಮದ್ರಾಸ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಚಿಹ್ನೆ ನೀಡುವಾಗ ಭಾರತೀಯ ಚುನಾವಣಾ ಆಯೋಗವು ತನ್ನದೇ ನೀತಿ-ನಿಯಮಗಳನ್ನು ಉಲ್ಲಂಘಿಸಿದೆ ಎಂದು  ತಮಿಳುನಾಡು ಕೇಂದ್ರಿತ ಅಹಿಂಸಾ ಸೋಶಿಯಲಿಸ್ಟ್‌ ಪಕ್ಷದ ಮುಖ್ಯಸ್ಥರಾಗಿರುವ ರಮೇಶ್‌ ವಾದಿಸಿದ್ದಾರೆ. ಈ ರೀತಿಯ ಪಕ್ಷಪಾತದಿಂದಾಗಿ ಇತರ ಪಕ್ಷಗಳಿಗೆ ಅನ್ಯಾಯವಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಸ್‌ವಿ  ಗಂಗಾಪುರ್‌ವಾಲಾ ಹಾಗೂ ನ್ಯಾ| ಡಿ. ಭರತ ಚಕ್ರವರ್ತಿ ದ್ವಿಸದಸ್ಯ ಪೀಠ  ದಾವೆಯ ಹಿಂದಿನ ಸದುದ್ದೇಶವನ್ನು ಖಾತ್ರಿಪಡಿಸಲು 20 ಸಾವಿರ ರೂಪಾಯಿಗಳನ್ನು ಡಿಪಾಸಿಟ್‌ ಮಾಡಲು ಅರ್ಜಿದಾರರಿಗೆ ಸೂಚಿಸಿದ್ದಾರೆ. ಈ ಹಿಂದೆ ಸದ್ರಿ ವಿಷಯದ ಬಗ್ಗೆ ವಿಚಾರಣೆ ನಡೆದಿದ್ದು, ಈಗಾಗಲೇ  ತೀರ್ಮಾನವಾಗಿದ್ದರೆ, ಡಿಪಾಸಿಟ್‌ ಮೊತ್ತವನ್ನು ಜಪ್ತಿಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿದೆ.

ಕೇಂದ್ರ ಸಂಪುಟಕ್ಕೆ 3 ಸಚಿವರ ರಾಜೀನಾಮೆ: 4 ಸಚಿವರಿಗೆ ಹೆಚ್ಚುವರಿ ಖಾತೆ; ಶೋಭಾಗೆ ಆಹಾರ, ಆರ್‌ಸಿಗೆ ಜಲಶಕ್ತಿ ಖಾತೆ 

ಡಿ. 18ರೊಳಗೆ 20 ಸಾವಿರ ರೂ.ಗಳನ್ನು ಡಿಪಾಸಿಟ್‌ ಮಾಡುವಂತೆ ಸೂಚಿಸಿರುವ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ  ನ್ಯಾ| ಎಸ್‌ವಿ  ಗಂಗಾಪುರ್‌ವಾಲಾ ಡಿ.18 ರಂದು ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ.

ಲೀಲಾವತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ!

Latest Videos
Follow Us:
Download App:
  • android
  • ios