ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್

ಇಂಜಿನಿಯರಿಂಗ್ ಮುಗಿಸಿದ್ದ ಆದಿತ್ಯ ರಾವ್‌ಗೆ ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವಿತ್ತು. ಬಾಂಬ್ ತಯಾರಿಸುವುದಕ್ಕೂ ಹಲವು ತಿಂಗಳ ಮೊದಲೇ ಆದಿತ್ಯ ರಾವ್ ಈ ಬಗ್ಗೆ ಹೆಚ್ಚಿನ ರಿಸರ್ಚ್ ಮಾಡಿದ್ದ ಎಂದು ಮಂಗಳೂರು ಕಮಿಷನರ್ ಐಪಿಎಸ್ ಹರ್ಷ ತಿಳಿಸಿದ್ದಾರೆ.

Aditya Rao is technically expert he made research on bomb making says mangalore commissioner

ಮಂಗಳೂರು(ಜ.23): ಇಂಜಿನಿಯರಿಂಗ್ ಮುಗಿಸಿದ್ದ ಆದಿತ್ಯ ರಾವ್‌ಗೆ ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವಿತ್ತು. ಬಾಂಬ್ ತಯಾರಿಸುವುದಕ್ಕೂ ಹಲವು ತಿಂಗಳ ಮೊದಲೇ ಆದಿತ್ಯ ರಾವ್ ಈ ಬಗ್ಗೆ ಹೆಚ್ಚಿನ ರಿಸರ್ಚ್ ಮಾಡಿದ್ದ ಎಂದು ಮಂಗಳೂರು ಕಮಿಷನರ್ ಐಪಿಎಸ್ ಹರ್ಷ ತಿಳಿಸಿದ್ದಾರೆ.

"

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಿತ್ಯರಾವ್ ವಿರುದ್ಧ ಮೂರು ಹುಸಿಬಾಂಬ್ ಕರೆ ಮಾಡಿರೋ ಕೇಸ್ ದಾಖಲಾಗಿದೆ. ಜೈಲಿನಲ್ಲಿ ವಿಮುಖನಾಗಿ ಮತ್ತಷ್ಟು ಕೃತ್ಯ ನಡೆಸಲು ಪ್ಲಾನ್ ಮಾಡಿಕೊಂಡಿದ್ದ. ಯೂಟ್ಯೂಬ್ ಮೂಲಕ ಬಾಂಬ್ ತಯಾರಿಕೆ ಬಗ್ಗೆ ಮಾಹಿತಿ ಪಡೆಯುತ್ತಿದ್ದ. ಹಲವಾರು ತಿಂಗಳುಗಳ ಕಾಲ ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಎಂದು ಹರ್ಷ ತಿಳಿಸಿದ್ದಾರೆ.

ರಾತ್ರಿ 2 ಗಂಟೆಯ ತನಕ ನಡೆದಿದ್ದ ಆದಿತ್ಯ ರಾವ್ ವಿಚಾರಣೆ

ತಂತ್ರಜ್ಞಾನದ ಬಗ್ಗೆ ಆದಿತ್ಯರಾವ್ ಅತೀವ ಜ್ಞಾನ ಹೊಂದಿದ್ದ. ಕುಡ್ಲ ಹೊಟೇಲ್‌ನಲ್ಲಿ ಡಿಸೆಂಬರ್‌ನಲ್ಲಿ ಕೆಲಸಕ್ಕೆ ಸೇರಿದ್ದ ಈತ ವಾರದ ರಜೆಗಳಲ್ಲಿ ಬಾಂಬ್ ತಯಾರಿಸುತ್ತಿದ್ದ. ಮಂಗಳೂರಿನ ಹೊಟೇಲ್ ಜಾಬ್ ಬಿಟ್ಟು ಕಾರ್ಕಳದಲ್ಲಿರುವ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದ್ದ ಎಂದು ಅವರು ಹೇಳಿದ್ದಾರೆ.

ಕಾರ್ಕಳದಿಂದ ಆದಿತ್ಯ ರಾವ್‌ ಬಜ್ಪೆ ಏರ್ ಪೋರ್ಟ್ ಗೆ ಬಂದಿಳಿದಿದ್ದ. ಸೆಲೂನ್ಗೂ ಕೂಡಾ ಹೋಗಿ ಬ್ಯಾಗ್ ಇಡಲು ಅನುಮತಿ ಕೋರಿದ್ದ. ಮೊದಲೇ ಏರ್ ಪೋರ್ಟ್ ಸುತ್ತಮುತ್ತಲಿನ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕಿದ್ದ. ಕೃತ್ಯ ನಡೆಸಲು ಬೇರೆ ಬೇರೆ ರಿಕ್ಷಾದಲ್ಲಿ ಆದಿತ್ಯ ಪ್ರಯಾಣ ಮಾಡಿದ್ದ ಎಂದು ಅವರು ತಿಳಿಸಿದ್ದಾರೆ.

ಉಗ್ರ ಚಟುವಟಿಕೆ ಬಗ್ಗೆ ಕೇಸ್ ದಾಖಲು

ಆದಿತ್ಯರಾವ್ ವಿರುದ್ಧ ಉಗ್ರ ಚಟುವಟಿಕೆ ಬಗ್ಗೆ ಕೇಸ್ ದಾಖಲಿಸಲಾಗಿದೆ. ಬಾಂಬ್‌ನ ಅವಶೇಷಗಳನ್ನು FSL( Forecast Systems Laboratory)ಗೆ ಕಳುಹಿಸಲಾಗಿದೆ. ಬಾಂಬ್‌ನಲ್ಲಿ ಟೈಮರ್ ಇಟ್ಟಿದ್ದೆ ಎಂದು ಆದಿತ್ಯರಾವ್ ಹೇಳಿದ್ದಾನೆ. ಆತ ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಮೂಲಕ ಹೋಗಿದ್ದ. ಆದಿತ್ಯರಾವ್ ವಿರುದ್ಧ ಎರಡು ಗಂಭೀರ ಪ್ರಕರಣಗಳು ದಾಖಲಾಗಿದೆ ಎಂದು ಹರ್ಷ ಸ್ಪಷ್ಟಪಡಿಸಿದ್ದಾರೆ. ಆದಿತ್ಯನನನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು. ಕೋರ್ಟ್‌ನಲ್ಲಿ ಕಸ್ಟಡಿಗೆ ನೀಡುವಂತೆ ನಾವು ಮನವಿ ಮಾಡುತ್ತೇವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.

'ಸಿಂಗಲ್ ಹ್ಯಾಂಡ್ ಆಪರೇಷನ್ ಏರ್ಪೋರ್ಟ್', ಬಾಂಬ್ ತಯಾರಿಕೆಗೆ ಬಳಸಿದ್ದು 100 ಸಾಮಾಗ್ರಿ

Latest Videos
Follow Us:
Download App:
  • android
  • ios