ಚಿತ್ರದುರ್ಗಕ್ಕೆ ADGP ಅಲೋಕ್ ಕುಮಾರ್ ಭೇಟಿ; ಹೊಟ್ಟೆಬಾಕ ಪೊಲೀಸರಿಗೆ ಕ್ಲಾಸ್!
- ಚಿತ್ರದುರ್ಗಕ್ಕೆ ADGP ಅಲೋಕ್ ಕುಮಾರ್ ಭೇಟಿ, ಜನ ಸಂಪರ್ಕ ಸಭೆ.
- ಮುರುಘಾ ಮಠಕ್ಕೆ ಭೇಟಿ ನೀಡಿ, ಮುರುಘಾಶ್ರೀ ಕಚೇರಿ, ಬೆಡ್ ರೂಂ ಪರಿಶೀಲನೆ ನಡೆಸಿದ ADGP.
- ಹೊಟ್ಟೆ ಬಾಕ ಪೊಲೀಸ್ ಸಿಬ್ಬಂದಿಗೆ ಅಲೋಕ್ ಕುಮಾರ್ ಕ್ಲಾಸ್
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.2) : ಇಂದು ಕೋಟೆನಾಡು ಚಿತ್ರದುರ್ಗ ನಗರಕ್ಕೆ ADGP ಅಲೋಕ್ ಕುಮಾರ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿದರು. ಸರ್ಕಾರದ ಸಕಲ ಗೌರವಗಳೊಂದಿಗೆ ADGP ಅವರನ್ನು ಎಸ್ಪಿ ಕೆ.ಪರಶುರಾಮ ಹಾಗೂ IGP ತ್ಯಾಗರಾಜನ್ ಸ್ವಾಗತ ಮಾಡಿಕೊಂಡರು. ನಂತರ ಎಸ್ಪಿ ಕಚೇರಿ ಬಳಿಯೇ ನಿಂತಿದ್ದ ಹಾಗೂ ಅವರನ್ನು ಬರಮಾಡಿಕೊಂಡ ವಾದ್ಯ ನುಡಿಸುವ ಸಿಬ್ಬಂದಿಯೊಂದಿಗೆ ಕೆಲ ಕಾಲ ಅಲೋಕ್ ಕುಮಾರ್ ಮಾತುಕತೆ ನಡೆಸಿದರು.
POCSO ಪ್ರಕರಣ ಹಿಂಪಡೆಯುವಂತೆ ಬೆದರಿಕೆ, ಅಧಿಕಾರ ದುರ್ಬಳಕೆ: ADGP Alok Kumar ವಿರುದ್ಧ ಪಿಸಿಆರ್‌ಗೆ ಆದೇಶ
ಬಳಿಕ ಅವರನ್ನು ಸ್ವಾಗತಿಸಲು ನಿಂತಿದ್ದ ಡಿವೈಎಸ್ಪಿಗಳಾದ ಹಿರಿಯೂರು ಡಿವೈಎಸ್ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈಎಸ್ಪಿ ಅನಿಲ್ , ಚಳ್ಳಕೆರೆ ಡಿವೈಎಸ್ಪಿ ರಮೇಶ್, ಡಿಸಿಆರ್ ಬಿ ಡಿವೈ ಎಸ್ಪಿ ಲೋಕೇಶ್, ಎಸ್ಪಿ ಕಚೇರಿಯ ಸಿಪಿಐ ನಾಗರಾಜ್ ಗೆ ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಕ್ಲಾಸ್ ತೆಗೆದುಕೊಂಡರು. ಚಿತ್ರದುರ್ಗದ ಎಸ್ಪಿ ಕಚೇರಿ ಬಳಿ ಅಲೋಕ್ ಕುಮಾರ್ ಕೆಲ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು.
ಹೊಟ್ಟೆ ಬಾಕ ಪೊಲೀಸ್ ಅಧಿಕಾರಿಗಳಿಗೆ ಎಡಿಜಿಪಿಯಿಂದ ಕ್ಲಾಸ್ ತೆಗೆದುಕೊಂಡರು. ಕೆಲವರು ಲೈಟ್ ವೇಟ್ ಇದ್ರೆ, ಉಳಿದವರು ಹೆವಿ ವೇಟ್ ಆಗಿದ್ದೀರಿ ಎಂದು ವಾರ್ನಿಂಗ್ ನೀಡಿದರು. ತೂಕ ಕಡಿಮೆ ಮಾಡಿಕೊಳ್ಳಿ, ಇದು ಟಫ್ ಜಾಬ್ ಗೊತ್ತಿಲ್ಲವಾ? ಫುಡ್ ಕಂಟ್ರೋಲ್ ಮಾಡಿ, ವ್ಯಾಯಾಮ ಮಾಡಿ ಎಂದು ಎಡಿಜಿಪಿ ಸಲಹೆ ನೀಡಿದರು.
ಬಳಿಕ ಎಸ್ಪಿ ಕಚೇರಿಯಲ್ಲಿ ಸುಮಾರು 2 ರಿಂದ 3 ಗಂಟೆಗಳ ಕಾಲ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ಅಲೋಕ್ ಕುಮಾರ್ ಬಳಿಕ ಸಂಜೆ 5 ಗಂಟೆ ಸುಮಾರಿಗೆ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಜನ ಸಂಪರ್ಕ ಸಭೆಯಲ್ಲಿ ಭಾಗಿಯಾದರು. ಅಲ್ಲಿ ನೆರೆದಿದ್ದ ಅನೇಕರ ಕೇಸ್ ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ಎಸ್ಪಿಗೆ ಖಡಕ್ ಸೂಚನೆ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಸಂಪರ್ಕ ಸಭೆ, ಹೆಚ್ಚಿನ ಬೀಟ್ ನಡೆಸಲು ಸೂಚಿಸಿದ್ದೇನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲ. ಮುರುಘಾಶ್ರೀ ಫೋಕ್ಸೋ ಪ್ರಕಣದ ಬಗ್ಗೆ ಕೂಲಂಕುಷ ತನಿಖೆ. ಇಂಥ ಘಟನೆಗಳು ಮರುಕಳಿಸದ ರೀತಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದರು. 1ನೇ ಫೋಕ್ಸೋ ಕೇಸ್ ನ ಚಾರ್ಜ್ ಶೀಟ್ ಸಲ್ಲಿಕೆ, ತನಿಖೆ ಬಾಕಿಯಿದೆ ಎಂದರು.
ಇನ್ನೂ ಬೆಳಗ್ಗೆಯಿಂದಲೂ ಜಿಲ್ಲೆಯಲ್ಲಿ ಅತಿ ಹೆಚ್ಚು ಸದ್ದು ಮಾಡ್ತಿರುವ ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ವಿಚಾರಕ್ಕೆ ಸಂಬಂದಿಸಿದಂತೆ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಯತ್ನ ಕೇಸ್. ಈಗಾಗಲೇ ಶಾಸಕ ತಿಪ್ಪಾರೆಡ್ಡಿ ದೂರು ನೀಡಿದ್ದಾರೆ. ತನಿಖೆ ಬಗ್ಗೆ ಚರ್ಚಿಸಿ ಕ್ರಮಕ್ಕೆ ಎಸ್ಪಿ ಪರಶುರಾಮ್ ಗೆ ಸೂಚಿಸಿದ್ದೇನೆ ಎಂದರು.
ADGP ಅಲೋಕ್‌ಕುಮಾರ್ ವಿರುದ್ಧ ಶಾಸಕ ಅಭಯ್ ಪಾಟೀಲ್, ಪ್ರಮೋದ್ ಮುತಾಲಿಕ್ ಗರಂ!
ಜನ ಸಂಪರ್ಕ ಸಭೆ ಮುಕ್ತಾಯವಾದ ಕೂಡಲೇ ಮುರುಘಾ ಮಠಕ್ಕೆ ಅಲೋಕ್ ಕುಮಾರ್ ಭೇಟಿ ನೀಡಿದರು. ಈ ವೇಳೆ ಐಜಿಪಿ ತ್ಯಾಗರಾಜನ್, ಎಸ್ಪಿ ಕೆ.ಪರಶುರಾಮ ಸಾಥ್ ನೀಡಿದರು. ಮುರುಘಾ ಶ್ರೀ ವಿರುದ್ದದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ, ADGP ಮುರುಘಾ ಶ್ರೀ ಕಚೇರಿ, ಬೆಡ್ ರೂಂ ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸಿದರು. ತದನಂತರ ಸ್ಥಳ ಪರಿಶೀಲನೆ ನಡೆಸಿ ಅಲ್ಲಿಂದ ತೆರಳಿದ ಅಲೋಕ್ ಕುಮಾರ್ ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಬ್ಬಂದಿಗಳ ಅಹವಾಲು ಹಾಗೂ ಠಾಣೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.