ಬೀದರ್‌- ಬೆಳಗಾವಿ-ಗೋವಾ ಮಧ್ಯೆ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ವಿಮಾನ ಸಂಚಾರ ಆರಂಭಿಸುವಂತೆ ಸಾರ್ವಜನಿಕರ ಬೇಡಿಕೆ ಇದೆ ಈ ಕುರಿತು ಮಾರ್ಗ ಪರಿಶೀಲನೆಯ ನಂತರ ಸ್ಟಾರ್‌ ಏರ್‌ ನಿರ್ಧಾರ ಕೈಗೊಳ್ಳಲಿದೆ. 

ಬೀದರ್‌(ಡಿ.20):  ಮಾರ್ಚ್‌ 2023ರಿಂದ ಬೀದರ್‌ನಿಂದ ಬೆಂಗಳೂರು ಮಧ್ಯೆ ಸ್ಟಾರ್‌ ಏರ್‌ ವಿಮಾನ ಸಂಚಾರ ಸೇವೆ ವಿಸ್ತರಿಸುವ ಕುರಿತು ಸೋಮವಾರ ಬೀದರ್‌ನಲ್ಲಿ ಸಭೆ ನಡೆಸಿದರು. 

ಸ್ಟಾರ್‌ ಏರ್‌ನ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಭೂಪಣ್ಣ ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಅಮಿತ್‌ಕುಮಾರ ಮಿಶ್ರಾ ಅವರೊಂದಿಗೆ ಸಭೆ ನಡೆಸಿ, ಮಾರ್ಚ್‌ ವೇಳೆಗೆ ಬೀದರ್‌ನಿಂದ ಬೆಂಗಳೂರಿಗೆ ಬೆಳಗಿನ ಸಮಯದಲ್ಲಿ ವಿಮಾನ ಸಂಚಾರ ಸೇವೆ ಆರಂಭಿಸುವ ಕುರಿತು ಮಿಶ್ರಾ ಹೇಳಿದಾಗ ಭೂಪಣ್ಣ ಒಪ್ಪಿಗೆ ಸೂಚಿದ್ದಾರೆ. ಸುಮಾರು 76 ಆಸನಗಳ ಎರಡು ಹೊಸ ವಿಮಾನ ಸಂಚಾರ ಆರಂಭಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

BIDAR: ಭಾವಿ ಅಗ್ನಿವೀರರಿಗೆ ಸಚಿವ ಪ್ರಭು ಚವ್ಹಾಣ್‌ ಪ್ರೋತ್ಸಾಹ

ಬೀದರ್‌- ಬೆಳಗಾವಿ-ಗೋವಾ ಮಧ್ಯೆ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ವಿಮಾನ ಸಂಚಾರ ಆರಂಭಿಸುವಂತೆ ಸಾರ್ವಜನಿಕರ ಬೇಡಿಕೆ ಇದೆ ಈ ಕುರಿತು ಮಾರ್ಗ ಪರಿಶೀಲನೆಯ ನಂತರ ಸ್ಟಾರ್‌ ಏರ್‌ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.