Asianet Suvarna News Asianet Suvarna News

ಕಾಫಿ ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಿ; ಜೆಡಿಎಸ್‌ ಮುಖಂಡ ಸುಧಾಕರ್ ಶೆಟ್ಟಿ ಒತ್ತಾಯ

  • ಕಾಫಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸಿ
  • ಮಳೆಯಿಂದ ಬೆಳೆಗಾರರು ಸಂಕಷ್ಟದಲ್ಲಿ
  • ಕೇಂದ್ರ ರಾಜ್ಯ ಸರ್ಕಾರಕ್ಕೆ ಒತ್ತಾಯ 
Add to coffee crop insurance coverage  JDS leader Sudhakar Shetty rav
Author
First Published Sep 17, 2022, 12:41 PM IST

ಚಿಕ್ಕಮಗಳೂರು (ಸೆ.17) : ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ  ಭಾರೀ ಮಳೆಯಿಂದಾಗಿ, ಪ್ರಮುಖ ಬೆಳೆಗಳು ಮಣ್ಣು ಪಾಲಾಗಿದೆ. ಬೆಳೆ ಕಳೆದುಕೊಂಡಿರುವ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆದಿದ್ದ ಬೆಳೆಗಳು ಮಳೆ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಬೆಳೆಗಾರರ ಪರಿಸ್ಥಿತಿ ಅತಂತ್ರವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ದಾವಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

Chikkamagaluru; ಕಾಡಾನೆಯಿಂದ ಶಾಶ್ವತ ಪರಿಹಾರಕ್ಕಾಗಿ ಕಾಫಿ ಬೆಳೆಗಾರನಿಂದ ಪ್ರತಿಭಟನೆ

ಕಾಫಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸಿ

ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮಲೆನಾಡಿ(Malenadu)ನ ಭಾಗವಾದಲ್ಲಿ ಅಡಿಕೆ(areca nut) ಹಾಗೂ ಭತ್ತಕ್ಕೆ ಅಂಟಿರುವ ಹಳದಿ ರೋಗ, ಎಲೆಚುಕ್ಕಿ ರೋಗ ಬಾಧೆಯಿಂದ  ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬದಲಿ ಬೆಳೆಯಾದ ಕಾಫಿ(Coffe) ಸಹ ಅತಿವೃಷ್ಟಿಯಿಂದ ಇಳುವರಿ ಕ್ಷೀಣಿಸಿದೆ. ಆದ್ದರಿಂದ ಸರ್ಕಾರ ಕಾಫಿ ಬೆಳೆಯನ್ನು ವಿಮೆ ವ್ಯಾಪ್ತಿಗೆ ಸೇರಿಸಬೇಕು ಎಂದು ಜೆಡಿಎಸ್‌(JDS) ರಾಜ್ಯ ಉಪಾಧ್ಯಕ್ಷ  ಸುಧಾಕರ ಶೆಟ್ಟಿ(Sudhakar Shetty) ಮನವಿ ಮಾಡಿದ್ದಾರೆ.

ಕಳೆದ 25 ವರ್ಷಗಳಿಂದ ಆಳಿದ ಎಲ್ಲ ಸರ್ಕಾರಗಳು ಅಡಕೆ ಹಳದಿ ಎಲೆ ರೋಗಕ್ಕೆ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ. ರೋಗಕ್ಕೆ ಔಷಧ ಅಭಿವೃದ್ಧಿಪಡಿಸುತ್ತಿಲ್ಲ. ಹೀಗಾಗಿ ಸರ್ಕಾರ ಇದೇ ತಿಂಗಳು 30ರೊಳಗೆ ರೈತರಿಗೆ ಬೆಳೆ ವಿಮೆ ಪರಿಹಾರ ಒದಗಿಸಬೇಕು. ಶೃಂಗೇರಿ ಕ್ಷೇತ್ರದಲ್ಲಿ ಮಳೆಗೆ ಕ್ಷೇತ್ರದಾದ್ಯಂತ ರಸ್ತೆ, ಸೇತುವೆ ಮತ್ತು ಬಡವರ ಮನೆಗಳು ನಾಶವಾಗಿವೆ. ಸರ್ಕಾರ ಕೂಡಲೇ ಕ್ಷೇತ್ರಕ್ಕೆ 100 ಕೋಟಿ ರೂ. ಪರಿಹಾರ ನೀಡಬೇಕು. ಅನುದಾನವನ್ನು ಯಾವುದೇ ಪಕ್ಷದ ಹೆಸರಿನಲ್ಲಿ ನೀಡದೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತಿ ಮೂಲಕ ನೀಡಬೇಕೆಂದು ಒತ್ತಾಯಿಸಿದರು.

ಹಸು ಹುಡುಕಿಕೊಂಡು ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ: ಕಾಫಿನಾಡಲ್ಲಿ ದುರಂತ

 ಜನರ ಹಣ ಮತಗಳಿಕೆಯ ಅಸ್ತ್ರವಾಗಬಾರದು ಎಂದು ಕೊಪ್ಪ(Koppa)ದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಸಂಘಟನೆಯಿಂದ ವಿಚಲಿತಗೊಂಡಿರುವ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ವೈಯಕ್ತಿಕ ತೇಜೋವಧೆಗೆ ಮುಂದಾಗಿರುವುದು ಅವರ ಕೀಳುಮಟ್ಟದ ಅಭಿರುಚಿಗೆ ಸಾಕ್ಷಿಯಾಗಿದೆ. ಸುಳ್ಳು ಅಪಾದನೆ ಮೂಲಕ ಮತ ಸೆಳೆಯುವ ಅವರ ಯತ್ನ ಮೂರ್ಖತನದ ಪರಮಾವಧಿ ಎಂದು ಜರಿದರು.ಮುಖಂಡರಾದ ದಿವಾಕರ ಭಟ್ ಭಂಡಿಗಡಿ, ಇತರರಿದ್ದರು.

Follow Us:
Download App:
  • android
  • ios