ಯಾದಗಿರಿ (ಆ.28): ಐದು ದಿನಗಳ ಹಿಂದೆ ನಗರದ ಜಿಲ್ಲಾಸ್ಪತ್ರೆಯಲ್ಲಿ ರಾಮಸಮುದ್ರ ಗ್ರಾಮದ ಪದ್ಮಾ ಎಂಬ ಮಹಿಳೆ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಳು. ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಈ ವಿಷಯ ತಿಳಿದ ನಟ ಸೋನು ಸೂದ್‌ ಭರವಸೆ ನೀಡಿದಂತೆ 2 ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಗುರುವಾರ ಬೆಳಗ್ಗೆ ಅಮೆಜಾನ್‌ ಪಾರ್ಸಲ್‌ನಲ್ಲಿ ಕಳುಹಿಸಿದ್ದಾರೆ. 

"

ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಲು ಯುವಕರಿಗೆ ಕರೆ ನೀಡಿದ ಸೋನು ಸೂದ್!...

ಕೂಲಿ ಕಾರ್ಮಿಕನಾಗಿರುವ ನಾಗರಾಜ ಬೆಂಗಳೂರಿನಲ್ಲಿ ತನ್ನ ಪತ್ನಿಯೊಂದಿಗೆ ಕೆಲಸ ಮಾಡುತ್ತಿದ್ದ ಆದರೆ, ಕೊರೋನಾ ಉಲ್ಬಣಿಸಿದ ಕಾರಣ ಮಾರ್ಚಲ್ಲಿ ಬೆಂಗಳೂರು ತೊರೆದು ರಾಮಸಮುದ್ರ ಗ್ರಾಮಕ್ಕೆ ತೆರಳಿದ್ದರು. 

ವಿದ್ಯಾರ್ಥಿಗಳ ನೆರವಿಗೂ ಬಂದ ಸೋನು ಸೂದ್‌: ಕೇಂದ್ರ ಸರ್ಕಾರ ಸ್ಪಂದಿಸುತ್ತಾ..?...

ಆ.22ರಂದು ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಆತನಿಗೆ ಕೆಲ ವ್ಯಕ್ತಿಗಳು ಹಣಕಾಸಿನ ನೆರವು ನೀಡಿದ್ದರು. ಬಡ ಕಾರ್ಮಿಕ ನಾಗರಾಜನ ಆರ್ಥಿಕ ಸಮಸ್ಯೆ ಅರಿತ ಸೋನು ಸೂದ್‌, ದೂರವಾಣಿಯಲ್ಲಿ ಆತನೊಂದಿಗೆ ಮಾತನಾಡಿ ಆಹಾರ ಪದಾರ್ಥಗಳನ್ನು ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಉನ್ನತ ವೈದ್ಯಕೀಯ ಚಿಕಿತ್ಸೆಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.