ಜೋಯಿಡಾ(ನ.08): ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಪಾರೆಸ್ಟ್‌ ಡಾಕುಮೆಂಟ್ರಿ(ಫಿಲ್ಮ್‌)ಗೋಸ್ಕರ ಚಿತ್ರೀ​ಕ​ರ​ಣ​ಕ್ಕಾಗಿ ನಟ ಪುನೀತ ರಾಜಕುಮಾರ ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪಾತಾಗುಡಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸುಗ್ಗಿ ಕುಣಿತದ ತಂಡದೊಂದಿಗೆ ಬೆರೆತು ಖುಷಿ ಹಂಚಿಕೊಂಡಿದ್ದಾರೆ. 

ಕಳೆದ ನಾಲ್ಕು ದಿನಗಳಿಂದ ಜೋಯಿಡಾ ತಾಲೂಕಿನ ಕುಶಾವಲಿ, ಪಾತಾಗುಡಿ, ಡೆರಿಯಾ, ಡಿಗ್ಗಿ, ಕಾರ್ಟೊಳ್ಳಿ ಗ್ರಾಮಗಳಲ್ಲಿ ಚಿತ್ರೀಕರಣ ನಡೆಸಿರುವ ಪುನೀತ ರಾಜಕುಮಾರ ತಂಡ ಶನಿವಾರ ಬೆಳಗ್ಗೆ ಪಾಂಜೇಲಿ ಗ್ರಾಮದ ಟಿಟಗಾಲಿ ಮಾರ್ಗವಾಗಿ ಸೂಪಾ ಹಿನ್ನಿರಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿ ಪುನಃ ಡಿಗ್ಗಿ ಗ್ರಾಮಕ್ಕೆ ತೆರಳಿದರು.

ಯಲ್ಲಾಪುರ: ಅಕ್ರಮ ಜಾನು​ವಾರು ಸಾಗಾ​ಟ, ಮೂವರ ಬಂಧ​ನ

ಜೋಯಿಡಾ ತಾಲೂಕಿನ ಡಿಗ್ಗಿ ಗ್ರಾಮಗಳ ಸುತ್ತಲ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ದಟ್ಟಾರಣ್ಯ, ಕಾಳಿ ಉಗಮಸ್ಥಾನ ಹಾಗೂ ಅಲ್ಲಿನ ಜನಜೀವನದ ಮೇಲೆ ಬೆಳಕು ಚೆಲ್ಲುವ ಫಾರೆಸ್ಟ್‌ ಡಾಕು​ಮೆಂಟ್ರಿ ವನ್ಯಜೀವಿ ಮತ್ತು ಮನುಷ್ಯನ ಬದುಕಿನ ಒಂದು ವಿಶೇಷ ಚಲನಚಿತ್ರವಾಗಿರ​ಲಿದೆ ಎನ್ನುವ ಅಭಿಪ್ರಾಯವಿದೆ.

ಜೋಯಿಡಾ ಸುತ್ತಲ ಪರಿಸರದ ಸೌಂದರ್ಯಕ್ಕೆ ಮಾರು ಹೋಗಿರುವ ಪುನೀತ ರಾಜಕುಮಾರ ಅವರಿಗೆ ಸ್ಥಳೀಯ ಬುಡಕಟ್ಟು ಕುಣಬಿಗಳು ತಮ್ಮ ವಿಶೇಷ ಸಾಂಪ್ರದಾಯಿಕ ಕಲೆ ಸುಗ್ಗಿ ಕುಣಿತವನ್ನೂ ತೋರ್ಪಡಿಸಿದ್ದಾರೆ. ದಿನದ ಶೂಟಿಂಗ ಮುಗಿಸಿ ಪ್ರತಿದಿನ ರಾತ್ರಿ ವಿಶ್ರಾಂತಿಗಾಗಿ ಜೋಯಿಡಾ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದು, ವಸತಿ ಗೃಹಕ್ಕೆ ಪೊಲೀಸ್‌ ಸೆಕ್ಯೂರಿಟಿ ನೇಮಿಸಿದ್ದರಿಂದ ಸಾರ್ವಜನಿಕರ ಭೇಟಿಗೆ ಪೊಲೀಸರು ಅವಕಾಶ ನೀಡದೆ ಇರುವುದು ಅಭಿಮಾ​ನಿ​ಗ​ಳಲ್ಲಿ ಬೇಸರ ತಂದಿದೆ.