Asianet Suvarna News Asianet Suvarna News

ಬಾಗಲಕೋಟೆ: ಐತಿಹಾಸಿಕ ಐಹೊಳೆ ಸ್ಮಾರಕಗಳಲ್ಲಿನ ಬಿರುಕು ಸರಿಪಡಿಸುವಂತೆ ನಟ ಅನಿರುದ್ಧ ಮನವಿ

ಸರ್ಕಾರ ಹಾಗೂ ಪುರಾತತ್ವ ಇಲಾಖೆಗೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮುಖಾಂತರ ಮನವಿ ಮಾಡಿರುವ ಅವರು, ಇತ್ತೀಚಿಗೆ ಐಹೊಳೆಗೆ ಭೇಟಿ‌ ನೀಡಿದ ಸಂದರ್ಭದಲ್ಲಿ ಅವರು ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಚಾಲುಕ್ಯರ ಶಿಲ್ಪಕಲೆಗೆ ಮಾರು ಹೋದ ನಟ ಅನಿರುದ್ಧ ಪುರಾತನ ದುರ್ಗಾದೇವಿ ದೇವಸ್ಥಾನದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಟ ಅನಿರುದ್ಧ. 
 

Actor Aniruddha Jatkar request to the government to repair the rift in the historical monuments of Aihole grg
Author
First Published Aug 21, 2024, 12:31 PM IST | Last Updated Aug 21, 2024, 12:31 PM IST

ಮಲ್ಲಿಕಾರ್ಜುನ ಹೊಸಮ‌ನಿ ಏಷಿಯಾನೆಟ್ ಸುವರ್ಣ ನ್ಯೂಸ್

ಬಾಗಲಕೋಟೆ(ಆ.21): ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಚಾಲುಕ್ಯರ ನಾಡು ಐಹೊಳೆಯ ದುರ್ಗಾದೇವಿ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ‌ ಬಿರುಕು ಕಾಣಿಸಿಕೊಂಡಿದ್ದು, ಬಿರುಕು ಸರಿಪಡಿಸುವಂತೆ ನಟ ಅನಿರುದ್ಧ ಅವರು ಮನವಿ ಮಾಡಿದ್ದಾರೆ. 

ಸರ್ಕಾರ ಹಾಗೂ ಪುರಾತತ್ವ ಇಲಾಖೆಗೆ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮುಖಾಂತರ ಮನವಿ ಮಾಡಿರುವ ಅವರು, ಇತ್ತೀಚಿಗೆ ಐಹೊಳೆಗೆ ಭೇಟಿ‌ ನೀಡಿದ ಸಂದರ್ಭದಲ್ಲಿ ಅವರು ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಚಾಲುಕ್ಯರ ಶಿಲ್ಪಕಲೆಗೆ ಮಾರು ಹೋದ ನಟ ಅನಿರುದ್ಧ ಪುರಾತನ ದುರ್ಗಾದೇವಿ ದೇವಸ್ಥಾನದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ಮುಡಾದಲ್ಲಿ ಏನು ತಪ್ಪಾಗಿದೆ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ: ಸಚಿವ ಆರ್‌.ಬಿ.ತಿಮ್ಮಾಪೂರ

ಮುಂದಿನ ಪೀಳಿಗೆಗೆ ಇಂತಹ ಅದ್ಭುತ ಶಿಲ್ಪಕಲೆಗಳನ್ನ ,ದೇವಾಲಯಗಳನ್ನು ತೋರಿಸುವ ಅವಶ್ಯಕತೆ ಇದೆ.ಹಾಗಾಗಿ ಸರ್ಕಾರ,ಪುರಾತತ್ವ ಇಲಾಖೆ ಬಿರುಕು ಸರಿಪಡಿಸಿ ಎಂದು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios