ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 24 ಟ್ರಸ್ಟ್‌ಗಳ ಕಾರ್ಯನಿರ್ವಹಣೆ ಇನ್ನಷ್ಟು ಉತ್ತಮವಾಗಲು ಕ್ರಮ ಕೈಗೊಳ್ಳಲಾಗುವುದು. ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಬೆಂಗಳೂರು (ಜೂ.11): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 24 ಟ್ರಸ್ಟ್‌ಗಳ ಕಾರ್ಯನಿರ್ವಹಣೆ ಇನ್ನಷ್ಟು ಉತ್ತಮವಾಗಲು ಕ್ರಮ ಕೈಗೊಳ್ಳಲಾಗುವುದು. ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು. ಶನಿವಾರ ‘ಕನ್ನಡ ಭವನ’ದಲ್ಲಿ ವಿವಿಧ ಟ್ರಸ್ಟ್ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಜೊತೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಪ್ರವಾಸ ಮಾಡುವ ವೇಳೆ ಆಯಾ ಜಿಲ್ಲೆಗಳಲ್ಲಿರುವ ಟ್ರಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಗುಬ್ಬಿ ವೀರಣ್ಣ ರಂಗಮಂದಿರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮಾಜಿ ಸಂಸದೆ ಬಿ.ಜಯಶ್ರೀ ಮನವಿ ಮಾಡಿದರಲ್ಲದೇ, ರಂಗ ಮಂದಿರದ ಕಾರ್ಯ ಚಟುವಟಿಕೆ ವೀಕ್ಷಿಸಲು ಸಚಿವರನ್ನು ಆಹ್ವಾನಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಭೇಟಿಗೆ ಒಪ್ಪಿಗೆ ಸೂಚಿಸಿ ಅನುದಾನ ಹೆಚ್ಚಳ ಕುರಿತಂತೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಆತ್ಮಹತ್ಯೆ ಯೋಚನೆ ಬಂದರೆ ಒಳಮನಸ್ಸು ಕೇಳಿ: ಜೋಗತಿ ಮಂಜಮ್ಮ
2 ಕೋಟಿಗೆ ಪ್ರಸ್ತಾವನೆ: ಬೆಟಗೇರಿ ಕೃಷ್ಣಶರ್ಮ ಅವರ ಮನೆಯನ್ನು ಸ್ಮಾರಕ ಮಾಡಬೇಕು. ಕಲಾವಿದ ಹಾಲಭಾವಿ ಹೆಸರಿನಲ್ಲಿ ಆರ್ಚ್ ಗ್ಯಾಲರಿ ನಿರ್ಮಾಣ, ಗಳಗನಾಥ ಮತ್ತು ರಾಜ ಪುರೋಹಿತ ಟ್ರಸ್ಟ್‌ಗಳು ಕಟ್ಟಡ ನಿರ್ಮಾಣಕ್ಕೆ ಸಲ್ಲಿಸಿರುವ 2 ಕೋಟಿ ಪ್ರಸ್ತಾವನೆ, ಬೇಂದ್ರೆ ಟ್ರಸ್ಟ್ ವತಿಯಿಂದ ಬೇಂದ್ರೆ ಅವರ ಜನ್ಮ ದಿನವನ್ನು ವಿಶ್ವಕವಿ ದಿನ ಎಂದು ಆಚರಿಸುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ನಿಜಲಿಂಗಪ್ಪ ಟ್ರಸ್ಟ್ ಪರವಾಗಿ ಮಾಜಿ ಸಂಸದ ಹನುಮಂತಪ್ಪ ಅವರು ಮಾತನಾಡಿ, ಸರ್ಕಾರಿ ಅಧಿಕಾರಿಗಳ ನೇಮಕದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಕೋರಿದರು.
ಕುವೆಂಪು ಮನೆ ವಿಶ್ವದ ಅತ್ಯುತ್ತಮ ಕವಿ ಮನೆ: ಕುವೆಂಪು ಟ್ರಸ್ಟ್‌ನ ಕಾರ್ಯದರ್ಶಿ ಕಡಿದಾಳ್ ರಮೇಶ್, ಕುವೆಂಪು ಅವರ ಮನೆಯನ್ನು ರಾಷ್ಟ್ರದ ಅತ್ಯುತ್ತಮ ಕವಿಮನೆಯನ್ನಾಗಿ ಮಾಡಿದ್ದೇವೆ. ಇದು ಇಡೀ ರಾಷ್ಟ್ರದ ಗಮನ ಸೆಳೆಯುವಂತೆ ಮಾಡಲು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಸಂದರ್ಭಗಳಲ್ಲಿ ಮತ್ತು ದಸರಾ ಪ್ರದರ್ಶನಗಳಲ್ಲಿ ಕುವೆಂಪು ಅವರ ಮನೆಯ ಟ್ಯಾಬ್ಲೋ ಮಾಡಿ ಪ್ರದರ್ಶಿಸಿದರೆ ಒಳ್ಳೆಯ ಪ್ರಚಾರ ಸಿಗುತ್ತದೆ, ಅಲ್ಲದೆ ಲಾಲ್‌ಬಾಗ್‌ನಲ್ಲಿ ಪ್ರತಿವರ್ಷ ಆಯೋಜಿಸುವ ಪುಷ್ಪ ಪ್ರದರ್ಶನದಲ್ಲಿ ಕುವೆಂಪು ಅವರ ಮನೆಯ ಮಾದರಿಯನ್ನು ಮಾಡಿದರೆ ಅಸಂಖ್ಯ ಜನರ ಗಮನ ಸೆಳೆಯುತ್ತದೆ ಎಂದು ಮನವಿ ಮಾಡಿದರು.
ಅಭಿಮಾನಿಗಳಿಂದ ತಂಗಡಗಿ ಜನ್ಮದಿನ ಆಚರಣೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಜನ್ಮದಿನವನ್ನು ತಾಲೂಕಿನ ವಿವಿಧಡೆ ಅವರ ಅಭಿಮಾನಿಗಳ ಬಳಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಸಿ ನೆಡುವ ಮೂಲಕ ಮತ್ತು ಗೋಶಾಲೆಗಳಿಗೆ ಮೇವು ವಿತರಿಸುವ ಮೂಲಕ ಸರಳವಾಗಿ ಶನಿವಾರ ಆಚರಿಸಿದ್ದರು. ಕಾರಟಗಿ ಪಟ್ಟಣದಲ್ಲಿ ಯುವ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಮೂಲಕ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು,ಬ್ರೆಡ್ ಮತ್ತು ಹಾಲು ವಿತರಿಸಲಾಯಿತು. ಜತೆಗೆ ಆಸ್ಪತ್ರೆ ಆವರಣದಲ್ಲಿ ಸಸಿ ನೆಡಲಾಯಿತು.
ಬಿಜೆಪಿ ಅವಧಿಯ 40% ಕಮಿಷನ್ ಬಗ್ಗೆ ತನಿಖೆ ಖಚಿತ: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮಕ್ಕೆ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ ಚಾಲನೆ ನೀಡಿದರು.ಈ ಸಮಯದಲ್ಲಿ ಪುರಸಭೆ ಸದಸ್ಯ ಎಚ್.ಈಶಪ್ಪ, ಹಿರೇಬಸಪ್ಪ ಸಜ್ಜನ್, ಮಂಜುನಾಥ ಮೇಗೂರು,ಬೂದಿ ದೊಡ್ಡ ಬಸವರಾಜ್,ಮಾಜಿ ಸದಸ್ಯ ರವಿಪಾಟೀಲ್ ನಂದಿಹಳ್ಳಿ ಮತ್ತು ಈ. ಚಿದಾನಂದಪ್ಪ, ಶರಣಪ್ಪ ಪರಕಿ,ಸಾಗರ ಕುಲಕರ್ಣಿ,ಶರಣಪ್ಪ ಪನ್ನಾಪುರ,ಯಮನಪ್ಪ ಮೂಲಿಮನಿ,ಈ. ಉದಯಕುಮಾರ, ಬಸವರಾಜ್ ಜುಟ್ಲದ್, ಪಾಶಾ ಸೇರಿದಂತೆ ಇತರರು ಇದ್ದರು.
