* ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿಲ್ಲ, ಆದರೆ ನಿಂದಿಸಿದ್ದಾರೆ* ವಿಜಯನಗರದಲ್ಲಿ ನಡೆದಿದ್ದ ಘಟನೆ ಕುರಿತು ಡಿಸಿಪಿ ಸ್ಪಷ್ಟನೆ* ಹಲ್ಲೆ ನಡೆಸಿರುವುದಕ್ಕೆ ಪುರಾವೆ ಇಲ್ಲ
ಬೆಂಗಳೂರು(ಫೆ.11): ಸಂಚಾರ ನಿಯಮ ಉಲ್ಲಂಘನೆ(Violation of Traffic Rules) ಪ್ರಕರಣದ ದಂಡ ಪಾವತಿಸುವ ಸಂಬಂಧ ಸಾರ್ವಜನಿಕರ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ವಿಜಯನಗರ ಸಂಚಾರ ಠಾಣೆ ಸಬ್‌ಇನ್ಸ್‌ಪೆಕ್ಟರ್(Sub Inspector) ಎಚ್.ಚಂದ್ರಶೇಖರಯ್ಯ ವಿರುದ್ಧ ಶಿಸ್ತು ಕ್ರಮ(Action) ಜರುಗಿಸಲಾಗಿದೆ ಎಂದು ಪಶ್ಚಿಮ ವಿಭಾಗದ(ಸಂಚಾರ) ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ವಿಜಯನಗರ ವ್ಯಾಪ್ತಿ ದ್ವಿಚಕ್ರ ವಾಹನದಲ್ಲಿ(Bike) ಕರ್ಕಶ ಧ್ವನಿ ಮೊಳಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ತಡೆದು ಪಿಎಸ್‌ಐ(PSI) ಚಂದ್ರಶೇಖರ್ ಅವರು, ಸಂಚಾರ ನಿಯಮ ಉಲ್ಲಂಘನೆ ಸಂಬಂಧ 2500 ರು. ದಂಡ(Fine) ವಿಧಿಸಿದ್ದರು. ಆದರೆ ದಂಡ ಕಟ್ಟಲು ಆರೋಪಿತ ವ್ಯಕ್ತಿ ನಿರಾಕರಿಸಿದ್ದಾನೆ. ಕೊನೆಗೆ ಮಾನವೀಯತೆ ದೃಷ್ಟಿಯಿಂದ ಮೂರು ಪ್ರಕರಣಗಳಲ್ಲಿ 1500 ರು. ದಂಡ ಪಾವತಿಸಿ ವಾಹನ ತೆಗೆದುಕೊಂಡು ಹೋಗುವಂತೆ ಆತನಿಗೆ ಪಿಎಸ್‌ಐ ಸೂಚಿಸಿದ್ದಾರೆ. ಹೀಗಿದ್ದರೂ ಪೊಲೀಸರ ಜತೆ ಆತ ಗಲಾಟೆ ಮಾಡಿದ್ದಾನೆ. ಆ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದನ್ನು ಪಿಎಸ್‌ಐ ಆಕ್ಷೇಪಿಸಿದ್ದಾರೆ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.
Bengaluru: ನೋ ಪಾರ್ಕಿಂಗಲ್ಲಿ ವಾಹನ ನಿಲುಗಡೆ ಹೆಚ್ಚಳ!
ಹಲ್ಲೆ ನಡೆಸಿರುವುದಕ್ಕೆ ಪುರಾವೆ ಇಲ್ಲ:
ದಂಡ ಪಾವತಿಸದ ಕಾರಣಕ್ಕೆ ಬೈಕ್ ಸವಾರನಿಗೆ ಪಿಎಸ್‌ಐ ಹಲ್ಲೆ(Assault) ನಡೆಸಿಲ್ಲ. ಆದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಗೊತ್ತಾಗಿದೆ. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೈರಲ್ ಆಗಿರುವ ವಿಡಿಯೋಗಳನ್ನು ಸಹ ಪರಿಶೀಲಿಸಲಾಯಿತು. ಆದರೆ, ಎಲ್ಲೂ ಸಹ ಪಿಎಸ್‌ಐ ಹಲ್ಲೆ ನಡೆಸಿರುವುದಕ್ಕೆ ಪುರಾವೆ ಇಲ್ಲ. ಅಲ್ಲದೆ ಈ ಸಂಬಂಧ ಘಟನಾ ಸ್ಥಳದ ಸುತ್ತಮುತ್ತಲಿನ ಸಾರ್ವಜನಿಕರನ್ನು ವಿಚಾರಿಸಿದಾಗ ಪಿಎಸ್‌ಐ ಹಲ್ಲೆ ನಡೆಸಿರುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಾರ್ವಜನಿಕರ ಜತೆ ಅಶಿಸ್ತಿನಿಂದ ವರ್ತಿಸುವುದು ಶಿಸ್ತಿನ ಇಲಾಖೆಯಲ್ಲಿ ಅವಕಾಶವಿರುವುದಿಲ್ಲ. ಈ ಸಂಬಂಧ ಪಿಎಸ್‌ಐ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ದಂಡ ಕಟ್ಟಲು ಹಣವಿಲ್ಲ ಎಂದ ಯುವಕನ ಮೇಲೆ ಟ್ರಾಫಿಕ್ ಪೊಲೀಸರ ಹಲ್ಲೆ
ಟೋಯಿಂಗ್(Towing) ಗಲಾಟೆ ಮಾಸುವ ಮುನ್ನ ನಗರದಲ್ಲಿ ಸಂಚಾರ ಪೊಲೀಸ್(Traffic Police) ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ಯುವಕನೊಬ್ಬನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ(Assault) ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿತ್ತು., ಸಬ್ ಇನ್ಸ್‌ಪೆಕ್ಟರ್ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯುವಕನ ಮೇಲೆ ಹಲ್ಲೆ ಮಾಡಿದ್ದು ವಿಜಯನಗರ ಸಂಚಾರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್ ಎನ್ನಲಾಗಿದೆ.
Bengaluru Traffic Police: ಕಳಪೆ ಹೆಲ್ಮೆಟ್ ಧರಿಸಿದ್ದವನಿಂದ 100 ಪಡೆದ ಪೇದೆ ತಲೆದಂಡ
ಸಂದರ್ಶನ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ(Bike) ತೆರಳುತ್ತಿದ್ದ ಯುವಕನನ್ನು ತಡೆದಿರುವ ಸಂಚಾರ ಪೊಲೀಸರು, ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆಯ(Traffic Volation) ಬಾಕಿ 2,500 ರು. ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಸಂಬಳ ಬಂದ ಕೂಡಲೇ ಕೋರ್ಟ್‌ಗೆ(Court) ಹೋಗಿ ದಂಡ ಪಾವತಿಸುತ್ತೇನೆ ಎಂದು ಯುವಕ ಹೇಳಿದ್ದನು. ಇದಕ್ಕೆ ಸಂಚಾರ ಪೊಲೀಸರು, ಸದ್ಯಕ್ಕೆ ಒಂದು ಸಾವಿರ ರು. ಪಾವತಿಸಿ ಹೋಗು ಎಂದಿದ್ದರು. ಸತ್ಯವಾಗಲೂ ನನ್ನ ಬಳಿ ಹಣವಿಲ್ಲ ಸಾರ್. ಸಂಬಳ ಬಂದಾಗ ಕಟ್ಟುವೆ ಎಂದು ಯುವಕ ಹೇಳಿದ್ದನು. ಇದರಿಂದ ಕೋಪಗೊಂಡ ಸಂಚಾರ ಠಾಣೆಯ ಸಬ್‌ಇನ್ಸ್‌ಪೆಕ್ಟರ್, ಏಕಾಏಕಿ ಆ ಯುವಕ ಮೇಲೆ ಹಲ್ಲೆ ಮಾಡಿದ್ದರು. ಹೆಲ್ಮೆಟ್(Helmet) ಕಿತ್ತು ರಸ್ತೆಗೆ ಬದಿಗೆ ಎಸೆದಿದ್ದರು. ಯುವಕ ಹೊಡೆಯ ಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಅವಾಚ್ಯಶಬ್ಧಗಳಿಂದ ನಿಂದಿಸುವುದು ವಿಡಿಯೋದಲ್ಲಿ ಸೆರೆಯಾಗಿತ್ತು.
ಬೆದರಿಸಿ ಮುಚ್ಚಳಿಕೆ?
ಸಬ್‌ಇನ್ಸ್‌ಪೆಕ್ಟರ್ ಹಲ್ಲೆ ಮಾಡುವುದನ್ನು ಯುವಕ ಮೊಬೈಲ್‌ನಲ್ಲಿ ವಿಡಿಯೊ ಮಾಡಲು ಮುಂದಾದಾಗ ಅವಾಚ್ಯವಾಗಿ ನಿಂದಿಸಿದ್ದರು. ನೀನು ಜೀವನದಲ್ಲಿ ನನ್ನ ನೆನೆಸಿಕೊಳ್ಳುವ ಹಾಗೆ ಮಾಡುತ್ತಾನೆ. ಬಾ ಪೊಲೀಸ್ ಠಾಣೆಗೆ. ಆ ಮೇಲೆ ನಿನಗೆ ಗೊತ್ತಾಗುತ್ತೆ ಎಂದು ಸಬ್‌ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದ್ದರು. ಕೊನೆಗೆ ಆ ಯುವಕನನ್ನು ಠಾಣೆಗೆ ಕರೆಸಿಕೊಂಡು ಬಲವಂತವಾಗಿ ನನ್ನದೇ ತಪ್ಪು ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದರು. ಅಲ್ಲದೆ, ಹಲ್ಲೆ ಮಾಡುವ ವಿಡಿಯೋಗಳನ್ನು ಯುವಕನ ಮೊಬೈಲ್‌ನಿಂದ ಡಿಲಿಟ್ ಮಾಡಿಸಿದ್ದಾರೆ ಎನ್ನಲಾಗಿದೆ.
