Raichur: ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ: ವೆಂಕಟೇಶ್ ಕುಮಾರ್
* ಕೆಕೆಆರ್ ಡಿಬಿ ಅನುದಾನ ಬಳಕೆ ಆಗಬೇಕು
* ಮೇ ಒಳಗಾಗಿ ಕ್ರಿಯಾಯೋಜನೆಗೆ ಸಿದ್ಧಪಡಿಸಲು ಸೂಚನೆ
* ಡಿಸೆಂಬರ್ ಅಂತ್ಯದಲ್ಲಿ ಕಾಮಗಾರಿ ಮುಗಿಸಬೇಕು
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಮೇ.13): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ್ ಅಧಿಕಾರಿಗಳಿಗೆ ಖಡಕ್ ಆಗಿ ಸೂಚನೆ ನೀಡಿದರು.
ರಾಯಚೂರು(Raichur) ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಅಪರಾಧ ಕೃತ್ಯ ಕಡಿವಾಣಕ್ಕೆ Raichur DYSPಯಿಂದ ಬಾರ್ಡರ್ ಕ್ರೈಂ ಸಭೆ
ಪ್ರಸಕ್ತ ವರ್ಷದ ಕಾಮಗಾರಿಗಳು, ಅನುಷ್ಠಾನ ಅಧಿಕಾರಿಗಳ ಬದಲಾವಣೆ ಮಾಡಬೇಕಿದ್ದರೆ, ಕ್ರಿಯಾಯೋಜನೆ ಅನುಮೋದನೆಯಾದ ಹದಿನೈದು ದಿನಗಳ ಒಳಗಾಗಿ ಬದಲಾವಣೆ ಪ್ರಸ್ತಾವನೆಗಳನ್ನು ಮಂಡಳಿಗೆ ಸಲ್ಲಿಸಬೇಕು. ಒಂದು ವೇಳೆ ವಿಳಂಬವಾದರೆ ಅನುಷ್ಠಾನ ಅಧಿಕಾರಿಗಳನ್ನೇ(Officers) ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಪ್ರಸಕ್ತ ಸಾಲಿಗೆ ಅನುಮೋದನೆಗೊಂಡ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ ಇನ್ನೂ ಪ್ರಾರಂಭಿಸದೇ ಇರುವ ಕಾಮಗಾರಿಗಳನ್ನು ವಿಳಂಬ ಮಾಡದೆ ಪ್ರಾರಂಭಿಸಬೇಕು. ಒಂದು ವೇಳೆ ವಿಳಂಬ ಮಾಡಿದರೆ ಅಂತಹ ಕಾಮಗಾರಿಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು(Grants) ಕ್ರಿಯಾ ಯೋಜನೆ ಅನ್ವಯ ಹಂಚಿಕೆ ಮಾಡಲಾಗುತ್ತದೆ. ಹಂಚಿಕೆಯಾದ ಅನುದಾನವನ್ನು ಶೇಕಡ 100ರಷ್ಟು ಬಳಕೆಯಾಗಬೇಕು. ಸರ್ಕಾರ ಒದಗಿಸುವ ಅನುದಾನದಲ್ಲಿ ಸಾಮಾಜಿಕ ಕಲ್ಯಾಣದ ಜೊತೆಗೆ ಮೂಲಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ಹಣವಿದೆ
ಕಲ್ಯಾಣ ಕರ್ನಾಟಕದ(Kalyana Karnataka) 7 ಜಿಲ್ಲೆಗಳ ಅಭಿವೃದ್ಧಿಗಾಗಿ ಸರ್ಕಾರ(Government of Karnataka) 3 ಸಾವಿರ ಕೋಟಿ ಮೀಸಲು ಇಟ್ಟಿದೆ. ಈ ಅನುದಾನ ಸಂಪೂರ್ಣ ಬಳಕೆಗೆ ಸಿಎಂ ಮತ್ತು ಮುಖ್ಯಕಾರ್ಯನಿರ್ವಹಕ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ವರ್ಷದ ಎಲ್ಲಾ ಕೆಲಸಗಳು ಡಿಸೆಂಬರ್ ನಲ್ಲಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಭವಾಗಬಾರದು, ಹಿಂದಿನ ವರ್ಷದಂತೆ ನಿಧಾನವಾಗಿ ಕಾಮಗಾರಿ ಮಾಡಿದ್ರೆ ನಡೆಯಲ್ಲ. 1500 ಕೋಟಿ ದೊಡ್ಡ ಕಾಮಗಾರಿಗಾಗಿ ಮೀಸಲು ಇಟ್ಟಿದ್ದೇವೆ. ಇನ್ನೂ 1500 ಕೋಟಿ ರೂಪಾಯಿ ಚಿಕ್ಕ ಪುಟ್ಟ ಕಾಮಗಾರಿಗಾಗಿ ಮೀಸಲು ಇಡಲಾಗಿದೆ.
ವಾರಕ್ಕೆ ಒಮ್ಮೆ ಕೆಕೆ ಆರ್ ಡಿಬಿ ಸಭೆ ಆಗಬೇಕು
ಕಲ್ಯಾಣ ಕರ್ನಾಟಕದ 7 ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒ ನೇತೃತ್ವದಲ್ಲಿ ಪ್ರತಿವಾರಕ್ಕೆ ಒಮ್ಮೆ ಕೆಕೆಆರ್ ಡಿಬಿ ಸಭೆ ಆಗಬೇಕು. ಸರ್ಕಾರ ನೀಡಿದ ಟಾರ್ಗೆಟ್ ರಿಚ್ ಆಗಲು ಡಿಸೆಂಬರ್ ಒಳಗಾಗಿ ಕಾಮಗಾರಿ ಮುಗಿಸಲು ಕಡ್ಡಾಯವಾಗಿ ಸಭೆ ಸೇರಿ ಕಾಮಗಾರಿ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಕೆಕೆಆರ್ಡಿಬಿಯಿಂದ ತಿಂಗಳಿಗೆ ಒಂದು ಜಿಲ್ಲಾ ಮಟ್ಟದ ಸಭೆ ಮಾಡಲು ಉದ್ದೇಶ ಇಟ್ಟಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಬೇಕಾದಷ್ಟು ಅನುದಾನವಿದೆ. ಸರ್ಕಾರದಿಂದ ಎಲ್ಲಾ ಅನುದಾನ ರಿಲೀಸ್ ಆಗಿದೆ. ಕಾಮಗಾರಿ ಬೇಗ ಆರಂಭಿಸಿ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕಾಗಿದೆ.
Raichur ಭಾವೈಕ್ಯತೆಗೆ ಸಾಕ್ಷಿಯಾದ ಬಸವ ಜಯಂತಿ, ರಂಜಾನ್
ಕೆಕೆಆರ್ ಡಿಬಿಯಿಂದ ಈ ವರ್ಷದ ಬೃಹತ್ ಕಾಮಗಾರಿಗಳು
ಕೆಕೆಆರ್ ಡಿಬಿ 3 ಸಾವಿರ ಕೋಟಿ ರೂಪಾಯಿಯಲ್ಲಿ 1500ಕೋಟಿ ರೂಪಾಯಿ ಬೃಹತ್ ಕಾಮಗಾರಿಗಾಗಿ ಮೀಸಲು ಇಟ್ಟಿದೆ. ರಾಯಚೂರು ವಿಶ್ವವಿದ್ಯಾಲಯ, ಮಾವಿನ ಕೆರೆ, ಸರ್ಕಾರಿ ಇಂಜಿನಿಯರ್ ಕಾಲೇಜು, ರಾಯಚೂರು ವಿಮಾನ ನಿಲ್ದಾಣ, ಬಳ್ಳಾರಿ ವಿಮಾನ ನಿಲ್ದಾಣ, ಕಲಬುರ್ಗಿಯಲ್ಲಿ ಸ್ಕಿಲ್ ವಿವಿ ಮಾಡುವ ಪ್ರಸ್ತಾವನೆಯಿದೆ. ಗುಲಬರ್ಗಾ ವಿವಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕಾಂಪ್ಲೆಕ್ಸ್ ಮಾಡಲು ತೀರ್ಮಾನ ಇಂತಹ ದೊಡ್ಡಮಟ್ಟದ ಕಾಮಗಾರಿ ಮಾಡಲು ಕ್ರಿಯಾಯೋಜನೆ ಸಿದ್ಧವಾಗಿದೆ.
ಅಧಿಕಾರಿಗಳೇ ಕೆಲಸ ಮಾಡಿ ಇಲ್ಲವೆಂದ್ರೆ ಮುಲ್ಲಾಜು ಇಲ್ಲದೆ ಕ್ರಮ- ಆರ್.ವೆಂಕಟೇಶ
ಈಗ ಕೆಕೆಆರ್ ಡಿ ಕೆಲಸಗಳು ಹತ್ತಾರು ಬಾಕಿ ಇವೆ. ಹಿಂದಿನ ವರ್ಷದಂತೆ ಕಾಮಗಾರಿಗಳು ವಿಳಂಬ ಮಾಡಿದ್ರೆ ಈಗ ನಡೆಯಲ್ಲ. ಕ್ರಿಯಾ ಯೋಜನೆ, ಬಳಿಕ 15 ದಿನಗಳ ಒಳಗಾಗಿ ಕಾಮಗಾರಿ ಬದಲಾವಣೆ ಕೇಳಿದ್ರೆ ಮಾಡಿ ಕೊಡುತ್ತೇವೆ. ಆದ್ರೆ ಒಂದು- ಎರಡು ವರ್ಷಗಳ ಬಳಿಕ ಬಂದ್ರೆ ಕಾಮಗಾರಿ ಬದಲು ಮಾಡಲ್ಲ. ಮೇ ತಿಂಗಳಿನ ಕೊನೆಯಲ್ಲಿ ಕಾಮಗಾರಿಗಳು ಆರಂಭಿಸಬೇಕು, ಪ್ರತಿ ಹಂತ ಹಂತದ ಕಾಮಗಾರಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬೇಕು. ಇಲ್ಲಿ ನಾವು ಕಳುಹಿಸಿದ್ದೇವೆ, ಅಲ್ಲಿ ಬಂದಿಲ್ಲ ಎಂದು ನೆಪ ಹೇಳುವುದು ನಡೆಯಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಇಲ್ಲ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕೆಕೆಆರ್ ಡಿಬಿ ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಇನ್ನೂ ಇದೇ ರಾಯಚೂರು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ ಮೋನಿಕಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರ ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.