3 ವರ್ಷಗಳ ಬಳಿಕ ಬಾರ್ಡರ್ ಕ್ರೈಂ ಮೀಟಿಂಗ್ ಆಂಧ್ರ, ತೆಲಂಗಾಣ ಮತ್ತು ರಾಜ್ಯದ ಪೊಲೀಸರ ಸಭೆ ರಾಯಚೂರು ನಗರದ ಶಕ್ತಿನಗರದಲ್ಲಿ ಸಭೆ ಮಿಸ್ಸಿಂಗ್ , ಡಕಾಯಿತಿ, ದರೋಡೆ ಮತ್ತು ಕಳ್ಳತನ ಬಗ್ಗೆ ಸಭೆಯಲ್ಲಿ ಚರ್ಚೆ

ವರದಿ: ಜಗನ್ನಾಥ ಪೂಜಾರ್, ಏಷ್ಯಾ ನೆಟ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು(ಮೇ.7): ಕೋವಿಡ್ ಸೋಂಕು ಇಳಿಕೆಯಾದ ಬಳಿಕ ರಾಯಚೂರು ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು (criminal activities) ಹೆಚ್ಚಾಗಿ ನಡೆಯುತ್ತಿವೆ. ಬಹುತೇಕ ಅಪರಾಧ ಕೃತ್ಯಗಳು ರಾಯಚೂರು (Raichur) ಜಿಲ್ಲೆಯ ಗಡಿಭಾಗದಲ್ಲಿಯೇ ಹೆಚ್ಚಾಗಿ ನಡೆಯುತ್ತಿದ್ದು, ಆಂಧ್ರ ಮತ್ತು ತೆಲಂಗಾಣದಿಂದ ರಾಯಚೂರು ಜಿಲ್ಲೆಗೆ ಎಂಟ್ರಿಕೊಟ್ಟು ಅಪರಾಧ ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗುತ್ತಿದ್ರು. ಕರ್ನಾಟಕ ಪೊಲೀಸರು ಆರೋಪಿಗಳ ಬಂಧಿಸಲು ಆಂಧ್ರ ಮತ್ತು ತೆಲಂಗಾಣಕ್ಕೆ ಓಡಾಟ ನಡೆಸಿದ್ರು. ಆರೋಪಿಗಳು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು 3 ವರ್ಷಗಳ ಬಳಿಕ ಮೊದಲ ಬಾರಿಗೆ ರಾಯಚೂರು ಡಿವೈಎಸ್ ಪಿ (Raichur DYSP) ನೇತೃತ್ವದಲ್ಲಿ ರಾಯಚೂರು ಗಡಿ ಹೊಂದಿರುವ ಆಂಧ್ರ (Andra) ಮತ್ತು ತೆಲಂಗಾಣದ (Telangana) ವಿವಿಧ ಠಾಣೆಯ ಪೊಲೀಸರ ಜೊತೆಗೆ ಬಾರ್ಡರ್ ಕ್ರೈಂ ಸಭೆ ನಡೆಸಿದ್ರು.

ಬಾರ್ಡರ್ ಕ್ರೈಂಂ ಸಭೆಯಲ್ಲಿ ಯಾರು ಇದ್ರು!: ಆಂಧ್ರ ಮತ್ತು ತೆಲಂಗಾಣ ಗಡಿ ಹೊಂದಿರುವ ರಾಯಚೂರು ಜಿಲ್ಲಾ ಕೇಂದ್ರಕ್ಕೆ ಆಂಧ್ರ ಮತ್ತು ತೆಲಂಗಾಣ ಕಳ್ಳರ ಕಾಟ ಹೆಚ್ಚಾಗಿದೆ. ರಾಯಚೂರು ಸಿಟಿಗೆ ನಾ‌ನಾ ವೇಷದಲ್ಲಿ ಬರುವ ಖದೀಮರು ಅಪರಾಧ ಕೃತ್ಯ ಎಸಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಂದಾಸ್ ಆಗಿ ಓಡಾಟ ಮಾಡುತ್ತಾರೆ. ಪೊಲೀಸರು ಆರೋಪಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ ಹತ್ತಾರು ಘಟನೆಗಳು ಇವೆ. ಹೀಗಾಗಿ ಇಂತಹ ಕೃತ್ಯಗಳ ತಡೆಗಾಗಿ ರಾಯಚೂರಿನಲ್ಲಿ ‌ಬಾರ್ಡರ್ ಕ್ರೈಂ ಸಭೆ ನಡೆಸಲಾಯ್ತು.

ರಾಯಚೂರು ‌ಡಿವೈಎಸ್ ಪಿ ವೆಂಕಟೇಶ ಕುಮಾರ್ ಹಾಗೂ ‌ನಾರಾಯಣಪೇಟ್ ಡಿಎಸ್ ಪಿ ‌ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಯಚೂರು ಜಿಲ್ಲೆಯ ಸಿಪಿಐ ಮತ್ತು PSIಗಳು ಸೇರಿದಂತೆ ಆಂಧ್ರದ ಏಮ್ಮಿಗನೂರು ಪೊಲೀಸರು, ಮಂತ್ರಾಲಯ ಪೊಲೀಸರು, ಮಾಧವರಂ ಪೊಲೀಸರು ಹಾಗೂ ತೆಲಂಗಾಣದ ಮಕತಲ್, ಗದ್ವಾಲ್, ಕೃಷ್ಣಾ,ಗಟ್ಟು, ಕೆಟಿ ದೊಡ್ಡೆ ಪೊಲೀಸರು ಸಭೆಯಲ್ಲಿ ಭಾಗಿಯಾಗಿದ್ದರು.

HAL RECRUITMENT 2022: ಭದ್ರತಾ ಅಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ HAL ನೇಮಕಾತಿ

ಮೂರು ರಾಜ್ಯಗಳ ಕಾಮಾನ್ ಖದೀಮರ ಬಗ್ಗೆ ಚರ್ಚೆ: ಆಂಧ್ರ ಮತ್ತು ತೆಲಂಗಾಣ ಗಡಿ ಪ್ರದೇಶದಲ್ಲಿ ಕೊರೊನಾ ಇಳಿಕೆ ಬಳಿಕ ಅಪರಾಧ ಕೃತ್ಯ ಹೆಚ್ಚಾಗಿವೆ. ಅದರಲ್ಲೂ ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿ ಹೊಂದಿರುವ ಜಿಲ್ಲೆಯಾಗಿದೆ. ತೆಲಂಗಾಣದ ಕಳ್ಳರ ಗ್ಯಾಂಗ್ ಗಡಿ ಭಾಗದಲ್ಲಿ ಮನೆ ಕಳ್ಳತನ, ಗಮನ ಬೇರೆಡೆಗೆ ಸೆಳೆದು ‌ಲೂಟಿ, ದರೋಡೆ ಹಾಗೂ ‌ಪಡಿತರ ಅಕ್ಕಿ ಸಾಗಾಟ ಮತ್ತು ಸಿಎಚ್ ಪೌಡರ್ ( ಕಲಬೆರಕೆ ಸೇಂದಿ) ದಂಧೆ ಜೋರಾಗಿ ‌ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ರಾಯಚೂರು ಪೊಲೀಸರು ಹತ್ತಾರು ‌ಕ್ರಮಕೈಗೊಂಡರೂ ದಂಧೆಕೋರರು ನಾನಾ ರೀತಿಯಲ್ಲಿ ಆಂಧ್ರ ‌ಮತ್ತು ತೆಲಂಗಾಣ ‌ಭಾಗದಿಂದ ರಾಯಚೂರು ಸಿಟಿಗೆ ನುಗ್ಗಿ ದಂಧೆ ಮಾಡಿಕೊಂಡು ‌ಪರಾರಿ ಆಗುವುದಿಲ್ಲ ಕಾಮಾನ್ ಆಗಿದೆ.‌

ಆಂಧ್ರದಲ್ಲಿ ಕೃತ್ಯ ಎಸಗಿ ರಾಯಚೂರಿಗೆ ಬರುವುದು, ತೆಲಂಗಾಣದಲ್ಲಿ ಕಳ್ಳತನ ‌ಮಾಡಿ ತಪ್ಪಿಸಿಕೊಂಡು ‌ರಾಯಚೂರಿಗೆ ಬರುವುದು ಹಾಗೂ ರಾಯಚೂರಿನಲ್ಲಿ ದರೋಡೆ ‌ಮಾಡಿ ಆಂಧ್ರ ಮತ್ತು ತೆಲಂಗಾಣಕ್ಕೆ ಪಲಾಯನ ಮಾಡುವುದು ನಡೆಯುತ್ತಿದೆ. ಖದೀಮರ ಪರಾರಿಯನ್ನ ತಪ್ಪಿಸಲು ಮೂರು ರಾಜ್ಯಗಳ ಗಡಿ ಪ್ರದೇಶದ ಠಾಣೆಯ ಪೊಲೀಸರು ಸಭೆ ನಡೆಸಿ ಮೂರು ರಾಜ್ಯಕ್ಕೆ ಬೇಕಾದ ಕಳ್ಳರ ಬಗ್ಗೆ ಚರ್ಚೆ ನಡೆಸಿದರು.

ಪೊಲೀಸರಿಗೆ ತಲೆನೋವು ಆಗಿದೆ ಪಡಿತರ ‌ಅಕ್ಕಿ ದಂಧೆ: ಆಂಧ್ರ ‌ಮತ್ತು ತೆಲಂಗಾಣ ಹಾಗೂ ರಾಯಚೂರು ಜಿಲ್ಲೆಯ ರೈತರು ಉತ್ತಮ ಗುಣಮಟ್ಟದ ‌ಭತ್ತ ಬೆಳೆದು ಅಕ್ಕಿ ಉತ್ಪಾದನೆ ‌ಮಾಡುತ್ತಾರೆ. ಆದ್ರೂ ಸರ್ಕಾರ ಪಡಿತರ ಅಕ್ಕಿ ‌ವಿತರಣೆ ಮಾಡುತ್ತಾರೆ. ಸರ್ಕಾರ ನೀಡುವ ಅಕ್ಕಿ ಜನರು ಕಾಳಸಂತೆಯಲ್ಲಿ 10-15 ರೂಪಾಯಿಗೆ ಕೆಜಿಯಂತೆ‌ ಮಾರಾಟ ಮಾಡುತ್ತಾರೆ. ಪಡಿತರ ಅಕ್ಕಿ ಖರೀದಿ ‌ಮಾಡಿದ ದಂಧೆಕೋರರು ಅಕ್ರಮವಾಗಿ ಪಡಿತರ ಅಕ್ಕಿ ರಾಯಚೂರಿಗೆ ಸಾಗಾಟ ಮಾಡಿ ರೈಸ್ ಮಿಲ್ ನಲ್ಲಿ ಪಾಲಿಶ್ ‌ಮಾಡಿ ಮಾರಾಟ ಮಾಡುವ ಗ್ಯಾಂಗ್ ಗಳು ಹೆಚ್ಚಾಗಿ ಹುಟ್ಟಿಕೊಂಡಿವೆ. ಈ ಗ್ಯಾಂಗ್ ಗೆ ಮಟ್ಟ ಹಾಕುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

Vijayanagara ಅಧಿಕಾರ ಚುಕ್ಕಾಣಿ ಹಿಡಿದ್ರು ಕಾಂಗ್ರೆಸ್ ಸದಸ್ಯರನ್ನು ಬಿಡದ ಬಿಜೆಪಿ

ರಾಯಚೂರಿಗೆ ಕಂಕಟವಾಗಿದೆ ತೆಲಂಗಾಣದ ಸಿಎಚ್ ಪೌಡರ್: ರಾಜ್ಯದಲ್ಲಿ ಸೇಂದಿ ‌ಮಾರಾಟ ನಿಷೇಧಿಸಲಾಗಿದೆ. ಆದ್ರೆ ತೆಲಂಗಾಣದಲ್ಲಿ ಸೇಂದಿ ‌ಮಾರಾಟ‌ಕ್ಕೆ ಅವಕಾಶ ‌ನೀಡಿದ್ದಾರೆ. ಹೀಗಾಗಿ ತೆಲಂಗಾಣದ ‌ಕೃಷ್ಣಾ ಮತ್ತು ಗದ್ವಾಲ್ ಮಾರ್ಗದಿಂದ ರಾಯಚೂರು ನಗರಕ್ಕೆ ಸಿಎಚ್ ಪೌಡರ್ ‌ಸಾಗಾಟ‌ ಮಾಡಿ ಸೇಂದಿ ಮಾರಾಟ ದಂಧೆ ಜೋರಾಗಿ ನಡೆದಿದೆ.

ಇದಕ್ಕೆ ಕಡಿವಾಣ ಹಾಕಲು ಪೊಲೀಸರು, ಅಬಕಾರಿ ಅಧಿಕಾರಿಗಳು ಎಷ್ಟೇ ದಾಳಿ ಮಾಡಿದ್ರೂ ಸಹ ದಂಧೆ ಮಾತ್ರ ಕಡಿವಾಣ ಹಾಕಲು ಸಾಧ್ಯವಾಗದೇ ನಿರಂತರವಾಗಿ ದಂಧೆ ನಡೆಯುತ್ತಿದೆ. ಸಿ.ಎಚ್. ಪೌಡರ್ ‌ಸಾಗಾಟ ಮಾಡುವ ಕಿಂಗ್ ‌ಪಿನ್ ಗಳ ಬಗ್ಗೆಯೂ ಚಲನವಲನಗಳ ಬಗ್ಗೆ ನಿಗಾವಹಿಸಲು ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗೆ ಸೂಚನೆ ‌ನೀಡಲಾಯ್ತು. ಇನ್ನೂ ಮೂರು ರಾಜ್ಯದಲ್ಲಿ ಕಾಣೆಯಾದವರು, ಅಪರಿಚಿತ ಶವ ಪತ್ತೆ‌ ಮತ್ತು ಸರಣಿ ಮನೆಗಳ್ಳತನ ಸೇರಿದಂತೆ ಹತ್ತಾರು ಅಪರಾಧ ಕೃತ್ಯ ಗಳ ಬಗ್ಗೆ ‌ಸುಮಾರು 4 ಗಂಟೆಗಳ ಕಾಲ ನಿರಂತರವಾಗಿ ‌ಸಭೆ ನಡೆಸಿ ಚರ್ಚಿಸಲಾಯಿತು.