ಅಸ್ಸಾಂ, ಬಾಂಗ್ಲಾ ನಿವಾಸಿಗಳ ಮೇಲೆ ಕ್ರಮಕೈಗೊಳ್ಳಿ: ಹಿಂಜಾವೇ ಮನವಿ

ಶನಿವಾರಸಂತೆ ಹೋಬಳಿ ಸುತ್ತಮುತ್ತ ನೆಲಸಿರುವ ಅಸ್ಸಾಂ ಮತ್ತು ಬಾಂಗ್ಲಾ ನಿವಾಸಿಗಳಿಂದ ಗಾಂಜಾ ಮಾರಾಟ, ಗೋಹತ್ಯೆ, ಗೋಮಾಂಸ ಮಾರಾಟ ಮಾಡುವಂತ ಕಾನೂನು ಬಾಹಿರ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಕ್ರಮಕೈಗೊಳ್ಳಿ: ಹಿಂದು ಜಾಗರಣ ವೇದಿಕೆ ಮನವಿ.

Act on Assam Bangla residents Hinjawe appeal kodagu rav

ಶನಿವಾರಸಂತೆ (ನ.19) : ಶನಿವಾರಸಂತೆ ಹೋಬಳಿ ಸುತ್ತಮುತ್ತ ನೆಲಸಿರುವ ಅಸ್ಸಾಂ ಮತ್ತು ಬಾಂಗ್ಲಾ ನಿವಾಸಿಗಳಿಂದ ಗಾಂಜಾ ಮಾರಾಟ, ಗೋಹತ್ಯೆ, ಗೋಮಾಂಸ ಮಾರಾಟ ಮಾಡುವಂತ ಕಾನೂನು ಬಾಹಿರ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಅವರು ಸುತ್ತಮುತ್ತಲಿನ ಗ್ರಾಮಗಳ ಆಯಾಯ ಜಾಗದಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದ್ದು, ಸರ್ಕಾರ ಮತ್ತು ಪೊಲೀಸರು ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೊಡ್ಲಿಪೇಟೆ ಹಿಂದೂ ಜಾಗರಣ ವೇದಿಕೆ ಪ್ರಮುಖರು ಶನಿವಾರಸಂತೆ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ಮನವಿ ಪತ್ರ ನೀಡಿದರು.

ಕೊಡಗು: ಹದಗೆಟ್ಟ ರಸ್ತೆ, ಶಾಸಕರನ್ನು ತರಾಟೆಗೆ ತೆಗೆದುಕೊಂಡು ಜನರ ಆಕ್ರೋಶ

* ಮನವಿ ಪತ್ರದಲ್ಲೇನಿದೆ?

ಶನಿವಾರಸಂತೆ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಿಗೆ ಅಸ್ಸಾಂ, ಬಾಂಗ್ಲ ನಿವಾಸಿಗರು ಕೂಲಿಯನ್ನು ಆರಿಸಿಕೊಂಡು ಬಂದು ನೆಲಸಿದ್ದಾರೆ, ಅವರು ದಿನ ಕಳೆದಂತೆ ಗಾಂಜಾ ಮಾರಾಟ, ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಗ್ರಾಮಸ್ಥರ ವಿಶ್ವಾಸಗಳಿಸಿ ಸಣ್ಣಪುಟ್ಟವ್ಯಾಪಾರವನ್ನು ಮಾಡುತ್ತಿದ್ದಾರೆ, ಇದರ ಜೊತೆಗೆ ಇಲ್ಲೇ ನೆಲೆ ಊರಲು ಪ್ರಯತ್ನಿಸುತ್ತಿದ್ದು, ಜಾತಿ ಆಧಾರದ ಮೇಲೆ ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ಇರುವ ಪ್ರದೇಶಗಳಿಗೆ ಹೋಗಿ ತಾವು ನೆಲಸಿರುವ ದೊಡ್ಡ ದೊಡ್ಡ ಕಾಫಿತೋಟದಲ್ಲಿ ಗೋವುಗಳನ್ನು ಹತ್ಯೆಗೈದು ಗೋಮಾಂಸ ಮಾರಾಟ ಮಾಡುತ್ತಿರುವ ಪ್ರಕರಣ ಹಲವು ಬಾರಿ ನಡೆದಿದೆ. ಇದಲ್ಲದೆ ಅವರು ಸ್ಥಳೀಯರನ್ನು ಬಳಸಿ ಗಾಂಜಾ, ಅಫೀಮುಗಳಂಥ ಅಮುಲು ಪದಾರ್ಥಗಳನ್ನು ಹಿಂದೂ ಸಮುದಾಯ ಸೇರಿದಂತೆ ಎಲ್ಲರಿಗೂ ಮಾರಾಟ ಮಾಡುತ್ತಿದ್ದಾರೆ. ವಿಶೇಷವಾಗಿ ಹಿಂದೂ ಸಮುದಾಯದವರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಅಸ್ಸಾಂ, ಬಾಂಗ್ಲಾದಿಂದ ಬಂದ ವಲಸಿಗರಿಂದ ಯಾವುದೇ ಅಹಿತಕರ ಘಟನೆ ನಡೆದರೆ ಅವರಿಗೆ ಮನೆ ಬಾಡಿಗೆಗೆ ಕೊಟ್ಟಿರುವ ಮನೆ ಮಾಲೀಕರು ಮತ್ತು ಕೆಲಸ ಕೊಟ್ಟಿರುವ ತೋಟದ ಮಾಲೀಕರು ನೇರ ಜವಾಬ್ದಾರಾಗುತ್ತಾರೆ, ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟಇಲಾಖೆಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ತೀವ್ರ ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬ್ರಿಟಿಷ್ ಬಾರ್ಬರ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಕೊಡಗಿನ ಯುವಕ..!

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮನವಿ ಪತ್ರವನ್ನು ಶನಿವಾರಸಂತೆ ಕಂದಾಯ ಇಲಾಖೆ ಉಪತಹಸೀಲ್ದಾರ್‌ ಶ್ರೀದೇವಿ, ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಹಾಗೂ ಶನಿವಾರಸಂತೆ ಪೊಲೀಸ್‌ ಠಾಣೆಗೆ ಸಲ್ಲಿಸಿದರು. ಈ ಸಂದರ್ಭ ಸಂಘಟನೆ ಪ್ರಮುಖರಾದ ಪುನೀತ್‌ ತಾಳೂರು, ಸೋಮಶೇಖರ್‌ ಪೂಜಾರ್‌, ದಿನಿ ಬಿಳಹ, ಪ್ರಸನ್ನ, ನವೀನ್‌, ಅರುಣ್‌, ರಕ್ಷಿತ್‌ ಮುಂತಾದವರಿದ್ದರು.

Latest Videos
Follow Us:
Download App:
  • android
  • ios