ಬೆಂಗಳೂರು[ಸೆ. 23] ಕಾರ್ ನಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ ,ಲ್ಯಾಪ್ ಟಾಪ್ ಹಿಂದಿರುಗಿಸಿದ ಚಾಲಕ ರೆಹಮಾನ್ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ರವೀಂದ್ರನ್ ಎಂಬುವವರಿಗೆ ಸೇರಿದ 2 .5 ಲಕ್ಷ ಮೌಲ್ಯದ ವಸ್ತುಗಳನ್ನು ಹಿಂತಿರುಗಿಸಿದ್ದಾರೆ.

ರವೀಂದ್ರನ್ ಕೆ.ಆರ್.ಪುರಂ ರೈಲ್ವೆ ಸ್ಟೇಷನ್ ನಿಂದ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ರೆಹಮಾನ್ ಕ್ಯಾಬ್ ಬುಕ್ ಆಗಿತ್ತು. ಆದರೆ ಮಾರ್ಗ ಮಧ್ಯೆ ಟೈರ್ ಪಂಚರ್ ಆಗಿ ಕಾರ್ ಕೈ ಕೊಟ್ಟಿತ್ತು. ನಂತರ ಬೇರೆ ಕಾರ್ ಬುಕ್ ಮಾಡ್ಕೊಂಡು ಮನೆಗೆ ರವೀಂದ್ರನ್  ತೆರಳಿದ್ದರು.

ದಾರಿಲಿ ಸಿಕ್ಕ ಚಿನ್ನ, ಹಣ ಮಾಲೀಕರಿಗೆ ಹಿಂದಿರುಗಿಸಿದ ಕೊಡಗಿನ ಯುವಕ

ಹೋಗುವಾಗ ರೆಹಮಾನ್ ಕಾರ್ ನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಮರೆತುಬಿಟ್ಟಿದ್ದರು. ರವೀಂದ್ರನ್ ಹೋದ ಮೇಲೆ ಇದನ್ನು ಗಮನಿಸಿದ್ದ ಚಾಲಕ ಮಾಲೀಕರನ್ನು ಸಂಪರ್ಕಿಸಿ ಎಲ್ಲ ವಸ್ತುಗಳನ್ನು ಹಿಂದಕ್ಕೆ ನೀಡಿದ್ದಾರೆ. ಈ ಸಂಗತಿಯನ್ನು ರವೀಂದ್ರನ್ ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ.