ಬೀದರ್‌(ಸೆ.03): ಬೀದರ್‌ನಿಂದ ಬೆಂಗಳೂರಿಗೆ ಹೊರಟಿದ್ದ ಭವಾನಿ ಟ್ರಾವೆಲ್ಸ್‌ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬಸ್‌ ಸುಟ್ಟು ಕರಕಲಾಗಿರುವ ಘಟನೆ ಹುಮನಾಬಾದ್‌ನ ಕನಕಟ್ಟಾ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ. 

ಅದೃಷ್ಟವಶಾತ್‌ ಬಸ್‌ನಲ್ಲಿದ್ದ 36 ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ 10ರ ಸುಮಾರಿಗೆ ಧುಮ್ಮನಸೂರ್‌ ಕನಕಟ್ಟಾ ಗ್ರಾಮದ ತಿರುವಿನ ಬಳಿ ಬರುವ ರಸ್ತೆ ಉಬ್ಬಿನ ಮೇಲೆ ಬಸ್‌ ವೇಗವಾಗಿ ಸಾಗುತ್ತಿದ್ದಂತೆ ಬಸ್‌ನ ತಳಭಾಗ ಬಡಿದು ಅದರ ಒಳಗಿದ್ದ ವೈರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಅರಿವಿಗೆ ಬಂದಿದೆ. 

ಬೀದರ್‌: ಮಳೆಗೆ ಹಾಳಾಯ್ತು 2 ಕೋಟಿ ರು. ವೆಚ್ಚದ ಕಾಮಗಾರಿ, ಸಚಿವ ಪ್ರಭು ಚವ್ಹಾಣ

ತಕ್ಷಣವೇ ಗ್ರಾಮಸ್ಥರ ಸಹಾಯದಿಂದ ಪ್ರಯಾಣಿಕರು ಬಸ್‌ನಿಂದ ಇಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯಾಣಿಕರು ಸಾಮಾನು, ಸರಂಜಾಮುಗಳೆಲ್ಲವೂ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.