Kodagu: ಕೊರಗಜ್ಜ ದೈವಕೋಲಕ್ಕೆ ಅವಮಾನ: ಆರೋಪ
ರಾಜ್ಯದಲ್ಲಿ ಕೊರಗಜ್ಜ ದೈವಕೋಲಕ್ಕೆ ಅವಮಾನವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ. ತುಳುನಾಡಿನವರು ಅಲ್ಲದವರಿಂದ ಕೊರಗಜ್ಜ ಕೋಲ ಮಾಡುವಂತಿಲ್ಲ, ಆದರೂ ಕಾಂತಾರ ಸಿನಿಮಾದ ಬಳಿಕ ರಾಜ್ಯದೆಲ್ಲೆಡೆ ಕೊರಗಜ್ಜ ಕೋಲ ಆಚರಣೆ ಮಾಡಲಾಗುತ್ತಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ನ.28): ರಾಜ್ಯದಲ್ಲಿ ಕೊರಗಜ್ಜ ದೈವಕೋಲಕ್ಕೆ ಅವಮಾನವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ. ತುಳುನಾಡಿನವರು ಅಲ್ಲದವರಿಂದ ಕೊರಗಜ್ಜ ಕೋಲ ಮಾಡುವಂತಿಲ್ಲ, ಆದರೂ ಕಾಂತಾರ ಸಿನಿಮಾದ ಬಳಿಕ ರಾಜ್ಯದೆಲ್ಲೆಡೆ ಕೊರಗಜ್ಜ ಕೋಲ ಆಚರಣೆ ಮಾಡಲಾಗುತ್ತಿದ್ದು, ತಮ್ಮ ಮನಸ್ಸಿಗೆ ಬಂದಂತೆ ಆಚರಣೆ ಮಾಡಲು ಶುರು ಮಾಡಿದ್ದು ಇದರಿಂದ ಕೊರಗಜ್ಜ ದೈವ ಕೋಲಕ್ಕೆ ಅಪಮಾನವಾಗಿದೆ ಎಂದು ಕೊರಗಜ್ಜ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ, ಮೈಸೂರು, ದೊಡ್ಡಬಳ್ಳಾಪುರ, ಹುಣುಸೂರು ಸೇರಿದಂತೆ ರಾಜ್ಯದ ಹಲವೆಡೆ ಕೊರಗಜ್ಜ ದೈವ ಕೋಲ ಆಚರಣೆ ಮಾಡುತ್ತಿರುವುದಕ್ಕೆ ಅದರ ಆರಾಧಕರು ಮತ್ತು ನರ್ತಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಕೊರಗಜ್ಜ ದೈವ ಕೋಲ ಕಟ್ಟುವುದಾಗಿ ಅಪಮಾನ ಮಾಡಲಾಗುತ್ತಿದೆ. ಕೊರಗಜ್ಜ ದೈವ ಮೂಲ ಆಚರಣೆಯ ವಿಷಯವೇ ಗೊತ್ತಿಲ್ಲದವರು ಯದ್ವತದ್ವಾ ಆಚರಣೆ ಮಾಡಿ ಅಪಮಾನ ಮಾಡುತ್ತಿದ್ದಾರೆ. ಕೊರಗಜ್ಜ ಯಾವಾಗಲೂ ಪ್ರಸಾದ, ಗಂಧ ಕೊಡುವುದಿಲ್ಲ. ನಿಂಬೆಹಣ್ಣು ಮಂತ್ರಿಸಿಕೊಡುವುದಿಲ್ಲ, ತೆಂಗಿನ ಕಾಯಿ ಹೊಡೆಯುವುದಿಲ್ಲ.
Kodagu: ಬನಶಂಕರಿ ದೇವಿಯ ಜಾತ್ರಾ ಉತ್ಸವ ಪ್ರಯುಕ್ತ ಕೊಡಗಿನಲ್ಲಿ ರೋಚಕ ಎತ್ತಿನಗಾಡಿ ಓಟ
ಆದರೆ ತುಳುನಾಡಿನವರು ಅಲ್ಲದವರು, ಆಚರಣೆ ಗೊತ್ತಿಲ್ಲದವರು ಮನಬಂದಂತೆ ಆಚರಿಸುತ್ತಿದ್ದಾರೆ. ಕೊರಗಜ್ಜ ಕೋಲ ಕನ್ನಡದಲ್ಲಿ ಮಾತನಾಡುತ್ತಿರುವುದು ಹೇಗೆ ಎಂದು ಆರಾಧಕರಾದ ಲೋಹಿತ್ ಅವರು ಪ್ರಶ್ನಿಸಿದ್ದಾರೆ. ಕೊರಗಜ್ಜ ಕೋಲ ಬರುವುದಾಗಿ ಹೇಳಿ ಜನರಿಂದ ವಸೂಲಿ ಮಾಡುತ್ತಿದ್ದಾರೆ. ಹೆಗಲು ಸೇವೆಯನ್ನು ಹಗಲು ಸೇವೆಯೆಂದು ಮಾಡಲಾಗುತ್ತಿದೆ. ಹೆಗಲು ಸೇವೆ ಎಂದರೆ ಹಗಲು ವೇಳೆಯಲ್ಲಿ ಸೇವೆ ಮಾಡುವುದಲ್ಲ. ಹಾಗೆಂದರೆ ಹೆಡೆಯನ್ನು ಇಟ್ಟು ಪೂಜಿಸುವುದು ಎಂದರ್ಥ. ತುಳುನಾಡಿನವರು ಅಲ್ಲದವರಿಂದ ಕೊರಗಜ್ಜ ದೈವಕೋಲ ಕನ್ನಡದಲ್ಲಿ ನುಡಿಯುತ್ತಿದೆ.
ಕೊರಗಜ್ಜ ಕಾರ್ಣಿಕ ಕನ್ನಡದಲ್ಲಿ ನುಡಿಯುವುದು ಹೇಗೆ?. ಕೊರಗಜ್ಜ ಯಾವಾಗ ಕನ್ನಡ ಶಾಲೆಯಲ್ಲಿ ಕಲಿತರು ಎಂದು ಲೋಹಿತ್ ಅವರು ಪ್ರಶ್ನಿಸಿದ್ದಾರೆ. ಶಿವಮೊಗ್ಗ, ದೊಡ್ಡಬಳ್ಳಾಪುರ, ಮೈಸೂರು ಸೇರಿದಂತೆ ಹಲವೆಡೆ ಕನ್ನಡದಲ್ಲಿ ಕೊರಗಜ್ಜ ದೈವ ಮಾತನಾಡುವುದು ಹೇಗೆ ಎಂದು ಪ್ರಶಿಸಿರುವ ಅವರು, ತುಳುನಾಡಿನವರು ಅಲ್ಲದವರು ಕೊರಗಜ್ಜ ದೈವ ಕೋಲ ಕಟ್ಟುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
Kodagu: ವಿರಾಜಪೇಟೆಯ ಮೊಗರಗಲ್ಲಿಯಲ್ಲಿ 'ನಮ್ಮ ಕ್ಲಿನಿಕ್' ಪ್ರಾರಂಭ
ಕೋಟಿ ಚನ್ನಯ್ಯ, ಕೊರಗಜ್ಜ ಇವೆಲ್ಲವೂ ಸಹೋದರ ದೈವಗಳಾಗಿದ್ದು ತುಳು ನಾಡಿನವರು ಪೂಜಿಸುತ್ತಾರೆ. ದೇವರೇ ಬೇರೆ ದೈವ ಕೋಲಗಳೇ ಬೇರೆಯಾಗಿದ್ದು ಎಲ್ಲರೂ ದೇವಗಳನ್ನು ಪೂಜಿಸಿ ಆರಾಧಿಸಲು ಸಾಧ್ಯವಿಲ್ಲ ಎಂದು ರಮೇಶ್ ಅವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ದೈವ ನರ್ತಕರು ಮತ್ತು ಆರಾಧಕರು ಒಂದೆಡೆ ಸೇರಿ ದೈವ ಆರಾಧನೆಯ ಕಟ್ಟು ನಿಟ್ಟಿನ ನಿಯಮಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.