ಎನ್‌ಆರ್‌ಪುರ: ಹೌಸಿಂಗ್ ಬೋರ್ಡ್ ಕಾಲೋನಿ ಮನೆಯಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ಅನಾಹುತ
ಪಟ್ಟಣದ 11 ನೇ ವಾರ್ಡಿನ ಹೌಸಿಂಗ್ ಬೋರ್ಡ್ ಕಾಲೋನಿಯ ಸುಂದರ ಎಂಬುವರ ಮನೆಗೆ ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಅಗ್ನಿ ಶ್ಯಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.
ನರಸಿಂಹರಾಜಪುರ (ಮೇ.27) : ಪಟ್ಟಣದ 11 ನೇ ವಾರ್ಡಿನ ಹೌಸಿಂಗ್ ಬೋರ್ಡ್ ಕಾಲೋನಿಯ ಸುಂದರ ಎಂಬುವರ ಮನೆಗೆ ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಅಗ್ನಿ ಶ್ಯಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ.
ಗಾರೆ ಕೆಲಸ ಮಾಡುವ ಸುಂದರ ಹಾಗೂ ಕುಟುಂಬದವರು ರಾತ್ರಿ ಗಾಡ ನಿದ್ದೆಯಲ್ಲಿದ್ದಾಗ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕೂಡಿಟ್ಟಿದ್ದ ಕಟ್ಟಿಗೆಗೆ ಮೊದಲು ಬೆಂಕಿ ಹೊತ್ತಿಕೊಂಡಿದೆ.ಬೆಂಕಿಯ ಸುಡುತ್ತಿರುವ ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದಾರೆ. ತಕ್ಷಣ ಅಕ್ಕ ಪಕ್ಕದ ಮನೆಯವರು ಸೇರಿ ಹತ್ತಿರದ ಅಗ್ನಿ ಶ್ಯಾಮಕ ದಳದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶ್ಯಾಮಕ ದಳ ಸಿಬ್ಬಂದಿ ಬೆಳಗಿನ 4 ಗಂಟೆಯವರೆಗೆ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ಪೂರ್ಣವಾಗಿ ನಂದಿಸಿದ್ದಾರೆ. ಬೆಂಕಿಯಿಂದ ಮನೆಯ ಹಿಂಭಾಗದ ಕೊಟ್ಟಿಗೆಯ ಪಕಾಸಿ, ಹೆಂಚುಗಳು ಸುಟ್ಟುಹೋಗಿದೆ. ತಕ್ಷಣ ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸದೆ ಇದ್ದಿದ್ದರೆ ಬೆಂಕಿಯ ಜ್ವಾಲೆಯಿಂದ ಮನೆಗೆ ಅಪಾಯವಾಗುತ್ತಿತ್ತು. ಜೊತೆಗೆ ಅಕ್ಕಪಕ್ಕದಲ್ಲಿ ಸಹ ಮನೆಗಳಿದ್ದು ಹೆಚ್ಚಿನ ಅಪಾಯ ತಪ್ಪಿದೆ. ಮನೆಯ ಹಿಂಭಾಗದಲ್ಲಿ ಯಾವುದೇ ಕಟ್ಟಿಗೆಯ ಒಲೆ ಅಥವಾ ವಿದ್ಯುತ್ ವೈರ್‌ಗಳು ಇರಲಿಲ್ಲ. ಆದರೂ ಬೆಂಕಿ ಹೊತ್ತಿಕೊಂಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
Fire Accident: ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಭೀಕರ ದುರಂತಕ್ಕೆ ಯುವತಿ ಬಲಿ!
ಶುಕ್ರವಾರ ಬೆಳಿಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕಾಂತ್, ಸದಸ್ಯರಾದ ಜುಬೇದ, ಸೋಜ, ಸುರೈಯಾಭಾನು, ಮಹಮ್ಮದ್ ವಸೀಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರು. ನಷ್ಟ
ಬಂಟ್ವಾಳ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರುಪಾಯಿ ನಷ್ಟಸಂಭವಿಸಿದ ಘಟನೆ ಚೆನೈತ್ತೋಡಿ ಗ್ರಾಮದ ವಾಮದಪದವಿನಲ್ಲಿ ನಡೆದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಾಮದಪದವು ಸಮೀಪದ ಕಡ್ತಲಬೆಟ್ಟು ಕೋಡಿಬಾಕಿಮಾರ್ ಎಂಬಲ್ಲಿ ಸುಧಾಕರ್ ಶೆಟ್ಟಿಎಂಬವರ ಮನೆಗೆ ಗುರುವಾರ ಮಧ್ಯರಾತ್ರಿ 12.30ರ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಸುಮಾರು 2 ಲಕ್ಷ ರುಪಾಯಿಗೂ ಅಧಿಕ ನಷ್ಟಸಂಭವಿಸಿದೆ ಎಂದು ಹೇಳಲಾಗಿದೆ.
ಆಕಸ್ಮಿಕ ಬೆಂಕಿ ಅವಘಡ: ಪೊಲೀಸರು ಜಪ್ತಿ ಮಾಡಿದ್ದ 58 ಬೈಕ್ ಸುಟ್ಟು ಭಸ್ಮ
ಘಟನೆ ಸುದ್ದಿ ತಿಳಿದ ಕೂಡಲೇ ಸ್ಥಳೀಯ ಯುವಕರ ಸಹಾಯದಿಂದ ನೀರು ಹಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಲಾಗಿದೆ. ಹೆಚ್ಚಿನ ಅನಾಹುವನ್ನು ತಪ್ಪಿಸಲಾಗಿದೆ. ಮನೆಯ ಅಡುಗೆ ತಯಾರಿಸುವ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರೊಳಗೆ ದಾಸ್ತಾನು ಮಾಡಲಾಗಿದ್ದ ಒಣ ಅಡಕೆ ಮತ್ತು ಬೆಲೆಬಾಳುವ ಮರದ ಸೊತ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಚೆನೈತ್ತೋಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ರಾಜೇಂದ್ರ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.