ಮೈಸೂರು(ಜ.24): ಮೈಸೂರಿನ ಹುಣಸೂರಿನಲ್ಲಿ ಎರಡು ಲಾರಿಗಳು ಮುಖಾಮುಖಿಯಾಗಿದೆ. ಕೆ.ಆರ್.ನಗರದ ಹೊಸಕಾಲುವೆ ರೈಲ್ವೆ ಮೇಲುಸೇತುವೆ ಬಳಿ ಭೀಕರ ಅಪಘಾತವಾಗಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದೆ.

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ. ಕೆ.ಆರ್.ನಗರದ ಹೊಸಕಾಲುವೆ ರೈಲ್ವೆ ಮೇಲುಸೇತುವೆ ಬಳಿ  ಅಪಘಾತ ಸಂಭವಿಸಿದ್ದು, ಮುಂಜಾನೆ 2.15 ಸುಮಾರಿನಲ್ಲಿ ಘಟನೆ ನಡೆದಿದೆ.

ಮದುವೆ ಆಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ 4 ದಿನಗಳಿಂದ ರೇಪ್‌

ಹೊಳೆನರಸೀಪುರ ತಾಲೂಕಿನ ನಾಗಲಾಪುರ ಗ್ರಾಮದ ಸೋಮಶೇಖರ್ (47)  ಮೃತರು. ಸೋಮಶೇಖರ್ ರಾತ್ರಿ ಹಾಸನದಿಂದ ಮೈಸೂರಿಗೆ ಜೋಳ ತುಂಬಿಕೊಂಡು ಬರುತ್ತಿದ್ದರು. ಜೋಳದ ಲಾರಿ ಹಾಗೂ ಹುಣಸೂರಿನ ಹನಗೋಡಿನಿಂದ ಉತ್ತರ ಪ್ರದೇಶಕ್ಕೆ ಶುಂಠಿ ಸಾಗಿಸುತ್ತಿದ್ದ ಲಾರಿ ಡಿಕ್ಕಿಯಾಗಿದೆ. 

ಜೋಳದ ಗಾಡಿಯ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆ.ಆರ್.ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಘಟನಾ ಸ್ಥಳ ಪರಿಶೀಲಿಸಿದ್ದಾರೆ. ಜೆಸಿಬಿ ಸಹಾಯದಿಂದ ಮಗುಚಿಬಿದ್ದಿದ್ದ ಲಾರಿಯನ್ನು ಎತ್ತಲಾಗಿದೆ.

ಸೇನಾ ವಸತಿಗೃಹದಲ್ಲಿ ಯೋಧನ ಮೃತದೇಹ ಪತ್ತೆ