ಕೂಡ್ಲಿಗಿ(ಜ.24): ಅಪ್ರಾಪ್ತ ಬಾಲ​ಕಿ​ಯನ್ನು ಮದುವೆಯಾಗು​ವು​ದಾ​ಗಿ ನಂಬಿ​ಸಿದ ಯುವಕ, ಆಕೆ​ಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ 4 ದಿನ ನಿರಂತರ ಅತ್ಯಾಚಾರ ಮಾಡಿದ್ದಾನೆ. ನಂತರ ಬಾಲಕಿಯ ತಂದೆ ದೂರು ನೀಡುತ್ತಿದ್ದಾರೆ ಎಂಬ ಸುದ್ದಿ ಗೊತ್ತಾಗಿ ಹೆದರಿ, ಆಕೆಯನ್ನು ಪುನಃ ಬೈಕ್‌ನಲ್ಲಿ ಕರೆದುಕೊಂಡು ಬಂದು ಊರ ಹೊರಗೆ ಬಿಟ್ಟು ಹೋಗಿರುವ ಘಟನೆ ಕೂಡ್ಲಿಗಿ ಸಮೀಪದ ಗೋವಿಂದಗಿರಿ ತಾಂಡಾದಲ್ಲಿ ಸಂಭ​ವಿ​ಸಿ​ದೆ.

ಘಟನೆ ವಿವರ: 

ಗೋವಿಂದಗಿರಿ ಗ್ರಾಮದ ಅಪ್ರಾ​ಪ್ತೆ​ಯನ್ನು ಅದೇ ಗ್ರಾಮದ ಮಧು ನಾಯ್ಕ (30) ಎನ್ನುವ ಯುವಕ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಕಬ್ಬು ಕಡಿಯಲು ಹೋಗೋಣ ಬಾ ಎಂದು ಪುಸಲಾಯಿಸಿ, ಜನವರಿ 19ರಂದು ಸಂಜೆ 4.30ಕ್ಕೆ ಬೈಕ್‌ನಲ್ಲಿ ಹೊಸಪೇಟೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಅಲ್ಲಿ ಆತನ ಅಕ್ಕನ ಮನೆಯಲ್ಲಿ ಇಟ್ಟಿದ್ದಾನೆ. ಮನೆ​ಯ​ಲ್ಲಿ ರಾತ್ರಿ ಮದುವೆಯಾಗುತ್ತೇನೆ ಎಂದು ಬಾಲ​ಕಿ​ಯ​ನ್ನು ನಂಬಿಸಿ ಅತ್ಯಾ​ಚಾರ ಮಾಡಿ​ದ್ದಾನೆ. ಆಗ ಬಾಲ​ಕಿಯ ತಂದೆ ಘಟನೆ ಕುರಿತು ದೂರು ನೀಡುತ್ತಿದ್ದಾರೆ ಎಂಬ ವಿಷಯ ಗೊತ್ತಾ​ಗಿ ಹೆದರಿ, ಜ. 22ರಂದು ಮಧ್ಯಾಹ್ನ 1 ಗಂಟೆಗೆ ನನ್ನನ್ನು ಹೊಸಪೇಟೆಯಿಂದ ಕೂಡ್ಲಿಗಿ ಸಮೀಪದ ಗೋವಿಂದಗಿರಿ ತಾಂಡಾ ಹತ್ತಿರ ಬೈಕ್‌ನಲ್ಲಿ ಕರೆದುಕೊಂಡು ಬಂದು ಬಿಟ್ಟಿದ್ದಾನೆ ಎಂದು ಬಾಲಕಿಯೇ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಲಕಿಯನ್ನು ಅಪಹರಣ ಮಾಡಿ, ನಂತರ ಅತ್ಯಾ​ಚಾರ ನಡೆಸಿದ ಮಧುನಾಯ್ಕ ಮತ್ತು ಮಧುನಾಯ್ಕನಿಗೆ ಸಹಕಾರ ನೀಡಿದ ಈತನ ಸಂಬಂಧಿಕರಾದ ಪೀಕಿಬಾಯಿ, ಶಿವಕುಮಾರನಾಯ್ಕ, ಕುಮಾರನಾಯ್ಕ ವಿರುದ್ಧ ಬಾಲಕಿಯ ತಂದೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ಸಂಜೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಕೂಡ್ಲಿಗಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.