Asianet Suvarna News Asianet Suvarna News

Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

*   ಅಪಘಾತಕ್ಕೆ ಯುವ ಸಮೂಹವೇ ಹೆಚ್ಚು ಬಲಿ
*   ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಅಪಘಾತ ಇಳಿಕೆ
*   ಸುಕ್ಷಿತರ ಸಾವಿನ ಪ್ರಮಾಣವೂ ಅಧಿಕ
 

Accident Cases Decline in Bengaluru Death Toll Rises grg
Author
Bengaluru, First Published Jan 16, 2022, 10:38 AM IST

ಬೆಂಗಳೂರು(ಜ.15):  ರಾಜಧಾನಿ(Bengaluru) ವ್ಯಾಪ್ತಿ ಮೂರು ವರ್ಷಗಳ ಅವಧಿಯಲ್ಲಿ ಅಪಘಾತ(Accident) ಪ್ರಕರಣಗಳ ಪ್ರಮಾಣ ಕಡಿಮೆ ಆಗಿದ್ದು, ಈ ದುರಂತದಲ್ಲಿ ಅತಿ ಹೆಚ್ಚು ಯುವ ಸಮೂಹ ಬಲಿಯಾಗಿದೆ ಎಂಬ ಗಮನಾರ್ಹ ಸಂಗತಿಯು ಅಪಘಾತ ಪ್ರಕರಣಗಳ ಕುರಿತು ನಗರದ ಸಂಚಾರ ಪೊಲೀಸರು(Traffic Police) ನಡೆಸಿದ ವಿಶ್ಲೇಷಣೆಯಲ್ಲಿ ಬೆಳಕಿಗೆ ಬಂದಿದೆ. 2019ರಲ್ಲಿ ಸ್ವಯಂ ಅಪಘಾತ ಸೇರಿದಂತೆ 810 ಮಾರಣಾಂತಿಕ ಅಪಘಾತಗಳು ಸಂಭವಿಸಿ 832 ಮಂದಿ ಮೃತಪಟ್ಟಿದ್ದರು(Death). 2020ರಲ್ಲಿ 632 ಅಪಘಾತದಲ್ಲಿ 655 ಜನರು ಸಾವನ್ನಪ್ಪಿದ್ದರೆ, 2021ರಲ್ಲಿ 618 ಅಪಘಾತಗಳಲ್ಲಿ 651 ಸಾವುಗಳು ವರದಿಯಾಗಿವೆ. ಈ ಅಂಕಿ ಸಂಖ್ಯೆಗಳಿಂದ ಮರಣಾಂತಿಕ ಅಪಘಾತಗಳ ಪ್ರಮಾಣ ಗಮನೀಯವಾಗಿ ಇಳಿಕೆಯಾಗಿರುವುದು ಸ್ಪಷ್ಟವಾಗಿದೆ. ಅದರಲ್ಲೂ 2021ರಲ್ಲಿ ಕನಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಮರಣಾಂತಿಕ ಅಪಘಾತಗಳ ಅನುಪಾತಕ್ಕೆ ಹೋಲಿಸಿದರೆ 2021ರಲ್ಲಿ ಮೃತರ ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ. ಅಪಘಾತಗಳ ತೀವ್ರತೆ ಇದಕ್ಕೆ ಕಾರಣ. ಆದರೆ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ 2021ರ ಸಾವಿನ ಪ್ರಮಾಣ ಸಹ ಇಳಿಮುಖವಾಗಿರುವುದು ಗಮನಿಸಬಹುದು.

Road Accident: ಅಮೃತಾ ಕೈಯಿಂದ ಇಬ್ಬರು ಮಕ್ಕಳನ್ನು ಕಸಿದುಕೊಂಡ  ಕ್ರೂರ ವಿಧಿ

2021ರಲ್ಲಿ ಅಪಘಾತ ಪ್ರಕರಣಕ್ಕಿಂತ 33 ಸಾವುಗಳು ಹೆಚ್ಚಾಗಿದೆ. 18 ಅಪಘಾತಗಳಲ್ಲಿ ತಲಾ 2 ಸಾವು, ಮೂರು ಅಪಘಾತದಲ್ಲಿ 3 ಸಾವು ಹಾಗೂ ಒಂದು ಅಪಘಾತದಲ್ಲಿ ನಾಲ್ವರು, ಮತ್ತೊಂದರಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಅತಿವೇಗದಿಂದ ಅಪಘಾತಗಳ ತೀವ್ರತೆ ಹೆಚ್ಚಿರುವುದರಿಂದ ಒಂದಕ್ಕಿಂತ ಹೆಚ್ಚು ಸಾವು ಸಂಭವಿಸಿದೆ. ಅಲ್ಲದೆ ಮೃತಪಟ್ಟವರಲ್ಲಿ ಅತಿ ಹೆಚ್ಚು ಯುವಕ-ಯುವತಿಯರು(Youths) ಸೇರಿರುವುದು ಆಘಾತಕಾರಿ ವಿಷಯವಾಗಿದೆ ಎಂದು ಎಂದು ಜಂಟಿ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಸುಕ್ಷಿತರೇ ತಪ್ಪು ದಾರಿ:

ಇನ್ನು ಮೃತರಲ್ಲಿ ಸುಕ್ಷಿತರು ಅಂದರೆ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವೀಧರ, ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿದೆ. ಶಿಕ್ಷಣದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಇನ್ನೂ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಅಲ್ಲದೆ ವೃತ್ತಿ ಆಧಾರದ ಮೇಲೆ ಮರಣಾಂತಿಕ ಅಪಘಾತಗಳನ್ನು ವರ್ಗೀಕರಿಸಿದಾಗ ಖಾಸಗಿ ವಲಯದ ನೌಕರರು ಮತ್ತು ಸ್ವಯಂ ಉದ್ಯೋಗದಲ್ಲಿ ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾರಾಂತ್ಯದಲ್ಲೇ ಅತಿ ಹೆಚ್ಚು ಅವಘಡಗಳು ನಡೆದಿವೆ. ಅಪಘಾತ ಸಂಭವಿಸಿದ ಕೂಡಲೇ ಅಥವಾ ಒಂದು ಗಂಟೆಯ ಅವಧಿಯಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.

ಕಳಪೆ ಗುಣಮಟ್ಟದ ಹೆಲ್ಮೆಟ್‌: ಹೆಚ್ಚಿನ ಸಾವು

ಅಪಘಾತಗಳಲ್ಲಿ ಹೆಲ್ಮಟ್‌(Helmet) ಧರಿಸಿದ್ದವರಲ್ಲೇ ಹೆಚ್ಚು ಸಾವು ಸಂಭವಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ದ್ವಿಚಕ್ರ ವಾಹನ ಸವಾರರು ಕೇವಲ ನಿಯಮ ಪಾಲನೆಗಾಗಿ ಕಳಪೆ ಗುಣಮಟ್ಟದ ಹೆಲ್ಮಟ್‌ ಧರಿಸಿರುವುದು. ಅಲ್ಲದೆ ಚಿನ್‌ ಸ್ಟ್ರಾಪ್‌ ಹಾಕದಿರುವುದು ಹಾಗೂ ಅರ್ಧ ಹೆಲ್ಮಟ್‌ಗಳಿಂದ ತಲೆ ಮತ್ತು ಮಿದುಳಿನ ಬಳ್ಳಿ ಬುಡಕ್ಕೆ ಗಾಯಗಳಾಗಿ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಹೆಲ್ಮಟ್‌ಗಳ ಕುರಿತು ಚಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮತ್ತು ಕಳಪೆ ಗುಣಮಟ್ಟದ ಹೆಲ್ಮಟ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.

ಸೋಂಕಿನಲ್ಲಿ ಮದ್ಯ ಸೇವನೆ: 

ಕೊರೋನಾ(Coronavirus) ಸೋಂಕು ಕಾಲದಲ್ಲಿ ಮದ್ಯ(Alcohol) ಸೇವಿಸಿ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಕಾರಣ ಸೋಂಕು ಹಿನ್ನೆಲೆಯಲ್ಲಿ ಕೆಲ ತಿಂಗಳ ಕಾಲ ಮದ್ಯ ಸೇವನೆ ವಿರುದ್ಧ ತಪಾಸಣೆ ಸ್ಥಗಿತಗೊಳಿಸಿದ್ದನ್ನು ಜನರು ದುರುಪಯೋಗ ಪಡಿಸಿದ್ದಾರೆ ಎಂದು ರವಿಕಾಂತೇಗೌಡ ಹೇಳಿದ್ದಾರೆ.

Bengaluru Accident: 2 ಕಾರು, ಬೈಕ್‌ ಮೇಲೆ ಲಾರಿ ಪಲ್ಟಿ: 6 ಜನರ ಸಾವು

ಸಿಮೆಂಟ್‌ ರಸ್ತೆಗಳಲ್ಲಿ ಹೆಚ್ಚು ಅವ

ಡಾಂಬರು ಹಾಗೂ ಸಿಮೆಂಟ್‌ ರಸ್ತೆಗಳ ಪೈಕಿ ಡಾಂಬರು ರಸ್ತೆಯಲ್ಲೇ ಹೆಚ್ಚು ಅಪಘಾತಗಳು ಸಂಭವಿಸಿವೆ. ಆದರೆ ಡಾಂಬರು ರಸ್ತೆಗಗಿಂತ ಸಿಮೆಂಟ್‌ ರಸ್ತೆಗಳ ಉದ್ದ ಕಡಿಮೆ ಇದೆ. ಈ ಅನುಪಾತದಲ್ಲಿ ನೋಡಿದರೆ ಸಿಮೆಂಟ್‌ ರಸ್ತೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಜರುಗಿವೆ. ಇದಕ್ಕೆ ಸಿಮೆಂಟ್‌ ರಸ್ತೆಗಳ ಮೇಲೆ ವೇಗ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕೊರತೆ, ರಸ್ತೆ ಮಾರ್ಕಿಂಗ್‌ಗಳು ಸರಿಯಾಗಿ ಗೋಚರವಾಗದಿರುವುದು ಕಾರಣವಾಗಿದೆ.

ದ್ವಿಚಕ್ರ ವಾಹನಗಳ ಅಪಘಾತದಲ್ಲಿಯೇ ಅತಿ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಚಾಲಕರ ಪೈಕಿ ಭಾರಿ ವಾಹನಗಳ ಚಾಲಕರೇ ಹೆಚ್ಚು ಬಲಿಯಾಗಿದ್ದಾರೆ. ಇನ್ನುಳಿದಂತೆ ದ್ವಿಚಕ್ರ ವಾಹನ ಸವಾರರು ಹಾಗೂ ಕಾರು ಚಾಲಕರು ನಂತರ ಸಾಲಿನಲ್ಲಿದ್ದಾರೆ. ಇನ್ನು 21ರಿಂದ 40 ವರ್ಷ ವಯಸ್ಸಿನ ಯುವಕ-ಯುವತಿಯರು ಆರೋಪಿಗಳಾಗಿದ್ದಾರೆ.

ನಸುಕಿನ ಸಮಯ ಹೆಚ್ಚಿನ ಅಪಘಾತ

ಅಪಘಾತ ನಡೆದ ಸಮಯದ ಆಧಾರದ ಮೇಲೆ ಅಪಘಾತಗಳ ವಿಂಗಡಿಸಲಾಗಿದೆ. ಅಂತೆಯೇ ಬೆಳಗ್ಗೆ 9ರಿಂದ 12, ಸಂಜೆ 6ರಿಂದ ರಾತ್ರಿ 9 ಹಾಗೂ ಮಧ್ಯರಾತ್ರಿ 12ರಿಂದ ಮುಂಜಾನೆ 6ವರೆಗೆ ಅಪಘಾತಗಳು ಅಧಿಕವಾಗಿ ನಡೆದಿದೆ. ಇದನ್ನು ಗಮನಿಸಿದಾಗ ಹೆಚ್ಚಿನ ವಾಹನ ದಟ್ಟಣೆ ವೇಳೆ ಚಾಲಕರ ನಿರ್ಲಕ್ಷ್ಯ, ರಾತ್ರಿ ವೇಳೆ ಬೆಳಕಿನ ಕೊರತೆ ಹಾಗೂ ಮಧ್ಯರಾತ್ರಿ ವೇಳೆ ಅತಿವೇಗದ ಚಾಲನೆ ಅಪಘಾತಗಳಿಗೆ ಕಾರಣವಾಗಿದೆ.

ಅಪಘಾತಗಳ ವಿವರ ಹೀಗಿದೆ

ವಿವರ 2019 2020 2021

ಮರಣಾಂತಿಕ ಅಪಘಾತ 666 468 468
ಮೃತರು 688 493 499
ಸ್ವಯಂ ಅಪಘಾತ 144 164 150
ಮೃತರು 144 164 152
ಒಟ್ಟು ಅಪಘಾತ 810 632 618
ಒಟ್ಟು ಸಾವು 832 657 651
 

Follow Us:
Download App:
  • android
  • ios