ಕೊಪ್ಪಳ(ಜು.08): ದಾಖಲೆ ಇಲ್ಲದೆ 3.75 ಲಕ್ಷ ಹಣ​ವನ್ನು ಕಾರಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಕೊಪ್ಪಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ರೂಪಾ ಸಿ.ಎಚ್‌. ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್‌ಗೇಟ್‌ ಬಳಿ ಹಣ ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ರೆಡ್‌ ಹ್ಯಾಂಡ್‌ ಆಗಿಯೇ ಹಿಡಿದಿದ್ದಾರೆ. ಡಿಕ್ಕಿಯಲ್ಲಿ ಬ್ಯಾಗೊಂದರಲ್ಲಿ 3.75 ಲಕ್ಷ ಇರುವುದು ಪತ್ತೆಯಾಗಿದೆ. ಮೊದಮೊದಲು ಏನೂ ಇಲ್ಲವೇ ಇಲ್ಲ ಎಂದು ತಪಾಸಣೆಗೂ ಅವಕಾಶ ನೀಡಲಿಲ್ಲ. ಆದರೆ ಎಸಿಬಿ ಅಧಿಕಾರಿಗಳು ಪಟ್ಟು ಹಿಡಿದು ಪರಿ​ಶೀ​ಲನೆ ಮಾಡುತ್ತೇವೆ ಡಿಕ್ಕಿ ತೆಗೆಯಿರಿ ಎಂದಾಗ ಅಲ್ಲಿ ಬ್ಯಾಗಿನಲ್ಲಿ 3.75 ಲಕ್ಷ ಇರುವುದು ಪತ್ತೆಯಾಯಿತು. ಈ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಕೊಪ್ಪಳ: ಒಂದೇ ದಿನ ಹತ್ತು ಜನರಿಗೆ ಕೊರೋನಾ ಪಾಸಿಟಿವ್‌

ಬಳ್ಳಾರಿ ಜಿಲ್ಲೆಯ ಎಸಿಬಿ ಎಸ್ಪಿ ಬಿ.ಎಂ. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಆರ್‌.ಎಸ್‌. ಉಜ್ಜನಕೊಪ್ಪ, ಪಿಐ ಎಸ್‌.ಎಸ್‌. ಬಿಳಗಿ, ಗುರುರಾಜ ಎನ್‌.ಎಂ. ಅವರ ತಂಡ ದಾಳಿಯನ್ನು ನಡೆಸಿದೆ.