ಪ್ರಧಾನಿ ಮೋದಿ ಬಗ್ಗೆ ಎಚ್. ವಿಶ್ವನಾಥ್ ಹಗುರ ಮಾತು ಸಲ್ಲ : ಯುವ ಮೋರ್ಚಾ ಮುಖಂಡ
ಸಾಂವಿಧಾನಿಕ ಹುದ್ದೆಯಲ್ಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆಯನ್ನು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್‌ಕುಮಾರ್ ಖಂಡಿಸಿದ್ದಾರೆ.
ಮೈಸೂರು : ಸಾಂವಿಧಾನಿಕ ಹುದ್ದೆಯಲ್ಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿಕೆಯನ್ನು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್‌ಕುಮಾರ್ ಖಂಡಿಸಿದ್ದಾರೆ.
ಮೈಸೂರು-ಬೆಂಗಳೂರು ರಸ್ತೆ ವಿಚಾರವಾಗಿ ಮಾತನಾಡುವಾಗ ಬಹಳ ತಿಳಿದವರಂತೆ ಮೇಧಾವಿಯಂತೆ ಹರುಕು ಬಾಯಿಯಿಂದ ಮಾತನಾಡುತ್ತಾ, ಮೈಸೂರು-ಬೆಂಗಳೂರು ರಸ್ತೆಗೆ ನರೇಂದ್ರ ಮೋದಿಯವರ ಅಪ್ಪನ ದುಡ್ಡ, ಪ್ರತಾಪ್ ಅವರ ಅಪ್ಪನ ದುಡ್ಡಲ್ಲಿ ಮಾಡಿರೋದ ಅಂತ ಹೇಳುತ್ತಾ ಸಾಂವಿಧಾನಿಕ ಹುದ್ದೆಯಲ್ಲಿರುವ ನರೇಂದ್ರ ಮೋದಿ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಹೇಳಿಕೆಯಿಂದ ನರೇಂದ್ರ ಮೋದಿ ಅವರನ್ನು ಪ್ರೀತಿಸುವ ಅಪಾರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದ್ದಾರೆ. ನರೇಂದ್ರ ಮೋದಿಯವರ ವ್ಯಕ್ತಿತ್ವವನ್ನು ಭಾರತ ದೇಶವಲ್ಲ, ಇಡೀ ವಿಶ್ವೇ ಕೊಂಡಾಡುತ್ತಿರುವಾಗ ದೇಶದ ಒಳಗಿರುವ ಇಂತಹ ಕುತಂತ್ರಿಗಳು ಅವರ ನಾಲಿಕೆಯನ್ನು ಹರಿಯಬಡುತ್ತಾರೆ, ಇಂತಹ ಬಾಳಿಶ ಹೇಳಿಕೆಗಲಿಂದ ಮೋದಿ ಅವರ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬ ಅರಿವಿಲ್ಲದಂತೆ ಮಾನಸಿಕ ಸ್ಥಿತಿ ಕಳೆದುಕೊಂಡವರಂತೆ ಮಾತನಾಡುವುದು ಎಚ್. ವಿಶ್ವನಾಥ್ ಅವರಿಗೆ ಒಂದು ಚಾಳಿಯಾಗಿಬಿಟ್ಟಿದೆ. ಸಂಸದ ಪ್ರತಾಪ್ ಸಿಂಹ ಅವರನ್ನು ನಿಂದಿಸುವ ಇವರು, ತಾವೇ ಸತ್ಯಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಆದರೆ ಇವರು ಯಾವುದೇ ಪಕ್ಷಕ್ಕೂ ಲಾಯಲಿಟಿ ಇಲ್ಲದ ವ್ಯಕ್ತಿ ಇತ್ತೀಚಿನ ದಿನಗಳಲ್ಲಿ ಸಮಾಜಕ್ಕೆ ಗೊತ್ತಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ವಿಶ್ವನಾಥ್ ಅವರು ತಮ್ಮ ನಾಲಿಗೆ ಅರಿಯ ಬಿಡುವುದನ್ನು ನಿಲ್ಲಿಸಬೇಕು, ಇಲ್ಲವಾದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರಿಗೆ ತಕ್ಕಪಾಠವನ್ನು ಕಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು - ಮೈಸೂರು ಹೈವೇ ಟಿಕೆಟ್ ದುಬಾರಿ
ಬೆಂಗಳೂರು(ಮಾ.15): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪ್ರಯಾಣಿಕರಿಂದ 15ರಿಂದ 20 ರು.ಗಳಷ್ಟು ಬಳಕೆದಾರರ ಶುಲ್ಕ ಸಂಗ್ರಹಿಸುವ ನಿರ್ಧಾರವನ್ನು ಕೆಎಸ್‌ಆರ್‌ಟಿಸಿ ಕೈಗೊಂಡಿದೆ.
ಮಂಗಳವಾರದಿಂದಲೇ (ಮಾರ್ಚ್ 14) ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಹೀಗಾಗಿ ಸದರಿ ವೆಚ್ಚವನ್ನು ಸರಿದೂಗಿಸಲು ಈ ಎಕ್ಸ್‌ಪ್ರೆಸ್ ಹೈವೇಯ ಮೂಲಕ ಸಂಚರಿಸುವ ನಿಗಮದ ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವ ತಲಾ ಪ್ರಯಾಣಿಕರಿಂದ 15 ರು., ರಾಜಹಂಸ ಬಸ್ಸುಗಳಲ್ಲಿ 18 ರು. ಹಾಗೂ ಮಲ್ಟಿಆಕ್ಸಲ್ ಸೇರಿದಂತೆ ಇತರೆ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ 20 ರು.ಗಳನ್ನು ಬಳಕೆದಾರ ಶುಲ್ಕವನ್ನಾಗಿ ವಸೂಲು ಮಾಡುವುದು ಅನಿವಾರ್ಯವಾಗಿದೆ. ಈ ಬಳಕೆದಾರ ಶುಲ್ಕವು ಸಂಪೂರ್ಣವಾಗಿ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುವ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗುತ್ತದೆ. ಇನ್ನುಳಿದ ಸಾರಿಗೆಗಳಿಗೆ ಇದು ಅನ್ವಯಿಸುವುದಿಲ್ಲ. ಎಲ್ಲಾ ಟೋಲ್ ರಸ್ತೆಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ವಿರೋಧದ ಮಧ್ಯೆ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಸಂಗ್ರಹ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ, ವಾಹನಗಳಿಂದ ಟೋಲ್ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದ್ದು ಎಂದು ಆರೋಪಿಸಿರುವ ವಿವಿಧ ಸಂಘಟನೆಗಳು ಟೋಲ್ ಸಂಗ್ರಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.