ದಾವಣಗೆರೆ(ಜೂ.24): 'ದೇವ್ರೇ ಬಾರನ್ನೂ ಓಪನ್ ಮಾಡ್ದೆ.. ಬ್ಯೂಟಿ ಪಾರ್ಲರ್‌ನೂ ಓಪನ್ ಮಾಡ್ದೆ... ಗರ್ಲ್ಸ್ ಕಾಲೇಜೊಂದನ್ನು ಓಪನ್ ಮಾಡಪ್ಪ...! ನಮ್ ಹುಡುಗೀಗೆ ನೋಡಿ ಬಹಳ ದಿನವಾಯ್ತು..!' ಅಂತ ಇಲ್ಲಿನ ಪ್ರತಿಷ್ಟಿತ ಕಾಲೇಜಿನ ಮುಖ್ಯ ಗೇಟ್‌ ಬಳಿ ನೆಲ ಮುಟ್ಟಿ ನಮಸ್ಕಾರ ಮಾಡುತ್ತಾ ಕಾಲೇಜನ್ನೇ ದಿಟ್ಟಿಸಿ ನೋಡುತ್ತಾ ನಿಲ್ಲುವ 18 ಸೆಕೆಂಡ್‌ನ ವಿಡಿಯೋವೊಂದು ದಾವಣಗೆರೆ ಟ್ರೋಲ್ಸ್ ಹೆಸರಿನಲ್ಲಿ ಈಗ ಸಾಕಷ್ಟು ವೈರಲ್ ಆಗಿದೆ,

"

ಇಲ್ಲಿನ ಅಕ್ಕಮಹದೇವಿ ರಸ್ತೆಯ ಎವಿಕೆ ಕಾಲೇಜು ಮುಂಬಾಗದ ರಸ್ತೆಯಿಂದ ಕಾಲೇಜಿನತ್ತ ಮೊಣಕಾಲುವರೆಗಿನ ಚಡ್ಡಿ ಧರಿಸಿದ ಯುವಕನೊಬ್ಬ ಗಾಂಭೀರ್ಯದಿಂದ ಹೆಜ್ಜೆಹಾಕುತ್ತಾ ಬಂದು, ಕಾಲೇಜಿನ ಗೇಟ್ ಬಳಿ ಬಗ್ಗಿ ನೆಲಕ್ಕೆ ನಮಸ್ಕರಿಸುತ್ತಾ ನಿಲ್ಲುತ್ತಾನೆ. ಕಾಲೇಜಿನತ್ತ ಮುಖಮಾಡಿ ಹೇಳುವ ದೃಶ್ಯ, ಅದಕ್ಕೆ ಫ್ರೆಂಡ್ಸ್ ಚಿತ್ರದ 'ತಿರುಪತಿ, ತಿರುಮಲ ವೆಂಕಟೇಶ... ಸ್ವಲ್ಪ ಕಿವಿಗೊಟ್ಟು ಕೇಳು ಒಂದು ನಿಮಿಷ' ಎಂಬ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ.

ಕೇವಲ ಹಾಸ್ಯದ ಉದ್ದೇಶದಿಂದ ಮಾಡಿರುವ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಮೌಲ್ಯಮಾಪನ ಬಾಕಿ ಇದೆ. ಡಿಗ್ರಿ ಕಾಲೇಜ್ ಓಪನ್ ಆಗಲು ಕೆಲವು ದಿನಗಳಂತೂ ಹುಡುಗ-ಹುಡುಗಿಯರು ಕಾಯಲೇಬೇಕು. ಕಾಲೇಜಿಗೆ ಬಂದ ಮೇಲೆ ಸಾಮಾಜಿಕ ಅಂತರವನ್ನು ದೇವರೇ ಕಾಪಾಡಬೇಕು.