ಮೋಸ ಮಾಡಲು ಮುಂದಾದ ಪೋಷಕರಿಗೇ ಚಳ್ಳೆಹಣ್ಣು ತಿನ್ನಿಸಿದ ಯುವತಿ: ಪ್ರೇಮಿಯೊಂದಿಗೆ ಮರುಮದುವೆ
ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ಭಯ
ಪೋಷಕರ ವಿರೋಧದ ನಡುವೆಯೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ
ಮೂರೇ ತಿಂಗಳ ಅವಧಿಯಲ್ಲಿ ಎರಡೆರಡು ಬಾರಿ ಹಸೆಮಣೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.02): ಇಬ್ಬರೂ ಒಂದೇ ಜಾತಿ, ಒಂದೇ ಧರ್ಮ. ಹಣಕಾಸಿನಲ್ಲೂ ಅನುಕೂಲಸ್ಥರೇ ಆಗಿದ್ದಾರೆ. ಆದರೂ ಪರಸ್ಪರ 10 ವರ್ಷದಿಂದ ಪ್ರೀತಿಸಿದವರ ಮದುವೆಗೆ ಮನೆಯರು ಒಪ್ಪಿಗೆ ಕೊಡಲಿಲ್ಲ. ಹೀಗಾಗಿ, ಮನೆಬಿಟ್ಟು ಓಡಿಹೋಗಿ ಮದುವೆ ಆದರನ್ನು, ಪುನಃ ನಾವೇ ಮದುವೆ ಮಾಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ. ಆದರೆ, ರಸ್ತೆಯಲ್ಲಿ ಹುಡುಗನಿಗೆ ಥಳಿಸಿ, ಯುವತಿಗೆ ಬೇರೊಂದು ಮದುವೆ ಮಾಡಲು ಮುಂದಾಗಿದ್ದರು. ಆಗ, ಮನೆಯಲ್ಲಿ ಮೂರು ತಿಂಗಳು ಮನೆಯಲ್ಲಿ ಸುಮ್ಮನಿದ್ದ ಯುವತಿ ಮನೆಯವರಿಗೆ ಚಳ್ಳೆಹಣ್ಣು ತಿನ್ನಿಸಿ ಮತ್ತೊಮ್ಮೆ ಮನೆಬಿಟ್ಟು ಓಡಿ ಹೋಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನ್ನ ಪ್ರೇಮಿಯನ್ನು ಮದುವೆಯಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಶಾಲಾ ಹಂತದಿಂದಲೇ ಪ್ರೀತಿ: ಶಾಲಾ ಹಂತದಿಂದಲೇ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದಾರೆ. ನಂತರ ಇಬ್ಬರೂ ಡಬಲ್ ಗ್ರ್ಯಾಜುಯೇಟ್ ಆಗಿ ಉದ್ಯೋಗ ಪಡೆದು ಇನ್ನು ಮದುವೆ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಮನೆಯವರ ವಿರೋಧ ವ್ಯಕ್ತವಾಗಿದೆ. ಆದರೂ, ಮನೆಯವರ ವಿರೋಧ ಲೆಕ್ಕಿಸದೇ ಮದುವೆಯಾಗಿದ್ದ ಜೋಡಿಯನ್ನು ಹುಡುಗಿ ಕಡೆಯವರು ಬೇರೆ ಮಾಡಿದ್ದರು. ಅದೇಕೋ ಪ್ರೇಮಿಯನ್ನು ಬಿಟ್ಟಿರಲಾಗದೇ ಪುನಃ ಮತ್ತೊಮ್ಮೆ ಮನೆಯಿಂದ ಓಡಿಬಂದ ಯುವತಿ ತನ್ನ ಪ್ರೇಮಿಯೊಂದಿಗೆ ಪೊಲೀಸರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಿದ್ದಾಳೆ.
ನಾಲ್ಕು ವರ್ಷ ಪ್ರೀತಿಸಿ ಮೋಸ ಮಾಡಿದ ಯುವತಿ: ಮನನೊಂದು ಪ್ರಿಯಕರ ಸಾವಿಗೆ ಶರಣು
ಪ್ರೀತಿಯನ್ನು ಉಳಿಸಿಕೊಳ್ಳುವ ಶಪಥ: ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿದ ಜೋಡಿಗಳು ಮದುವೆ ಆಗಿದ್ದಾರೆ. ಇನ್ನು ಪ್ರೀತಿಯನ್ನು ಉಳಿಸಿಕೊಳ್ಳುವ ಶಪಥದೊಂದಿಗೆ ಇಬ್ಬರೂ ಮದುವೆಯನ್ನು ಆಗಿದ್ದಾರೆ. ಆದರೆ, ಅವರಿಗೆ ತಮ್ಮ ಮನೆಯವರಿಂದ ಆಪತ್ತು ಕಾದಿಗೆ ಎಂಬುದು ಗೊತ್ತಾಗಿದ್ದು, ತಮ್ಮನ್ನು ರಕ್ಷಣೆ ಮಾಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಹೀಗಾಗಿ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಪ್ರೇಮಿಗಳು ಆಗಮಿಸಿ ತಾವು ಇಬ್ಬರೂ ವಯಸ್ಕರಾಗಿದ್ದು, ಒಪ್ಪಿಕೊಂಡು ಮದುವೆಯಾಗಿದ್ದು ತಮಗೆ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮದುವೆಗೆ ನಿರಾಕರಿಸಿದ ಹುಡುಗಿ ಮನೆಯವರು: ಪ್ರೇಮಿಗಳಾದ ಅನನ್ಯ ಮತ್ತು ಹೇಮಂತ್ ಎಸ್ ಪಿ ಕಛೇರಿಗೆ ಬಂದಿದ್ದಾರೆ. ಇಬ್ಬರು ಕೂಡ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನವರು. ಮಲ್ಲೇನಹಳ್ಳಿ ಗ್ರಾಮದ ಹೇಮಂತ್ ಮತ್ತು ಲಕ್ಷ್ಮಿಸಾಗರ ಗ್ರಾಮದ ಅನನ್ಯ ತರೀಕೆರೆ ಪಟ್ಟಣದಲ್ಲಿ ಶಾಲೆಯಲ್ಲಿ ಓದುತ್ತಿರುವಾಗಲೇ ಪ್ರೀತಿಸಿದ್ದರು. ಇಂದು ಇಬ್ಬರು ಡಬಲ್ ಗ್ರಾಜ್ಯುಯೆಟ್. ಶಾಲಾ ದಿನಗಳಲ್ಲಿ ಹೇಮಂತ್ ಮತ್ತು ಅನನ್ಯಳ ನಡುವೆ ಆರಂಭವಾಗಿದ್ದ ಪ್ರೇಮ ಮದ್ವೆಯಾಗುವ ಕನಸು ಮೂಡಿಸಿತ್ತು. ಪರಸ್ಪರ ಪ್ರೀತಿಸುತ್ತಿರುವ ವಿಚಾರವನ್ನು ಪೋಷಕರಿಗೂ ತಿಳಿಸಿದ್ದರು. ಆದರೆ ಅನನ್ಯ ಪೋಷಕರು ಮಾತ್ರ ಮದುವೆಗೆ ನಿರಾಕರಿಸಿದ್ದರು.
ಹುಡಗನಿಗೆ ಹಲ್ಲೆ ಮಾಡಿ- ಪ್ರೇಮಿಗಳ ದೂರ: ಇದರಿಂದ ಆತಂಕಗೊಂಡ ಅನನ್ಯ-ಹೇಮಂತ್ ಜೊತೆ ಮನೆ ಬಿಟ್ಟು ಹೋಗಿ ದೇವಾಲಯದಲ್ಲಿ ಮದುವೆಯಾಗಿದ್ದರು. ವಿಷಯ ತಿಳಿದ ಅನನ್ಯ ಪೋಷಕರು ಬನ್ನಿ ನಾವೇ ಮದ್ವೆ ಮಾಡುತ್ತೀವಿ ಅಂತ ಕರೆಸಿದ್ದರು. ಖುಷಿಯಾಗಿ ಬರ್ತಿದ್ದ ದಂಪತಿಗೆ ರಸ್ತೆ ಮಧ್ಯೆಯೇ ಆತನಿಗೆ ಹೊಡೆದು ಮಗಳನ್ನ ಕರೆದುಕೊಂಡು ಹೋಗಿದ್ದರು. ಮೂರು ತಿಂಗಳ ಸುಮ್ಮನಿದ್ದ ಅನನ್ಯ ಮತ್ತೆ ಮನೆ ಬಿಟ್ಟು ಬಂದು ಮತ್ತೊಮ್ಮೆ ಹೇಮಂತ್ ಜೊತೆ ಮದುವೆಯಾಗಿದ್ದಾರೆ. ಈಗ ನಮ್ಮ ಪಾಡಿಗೆ ನಮ್ಮ ಬಿಡಿ. ನಾವು ಬದುಕುತ್ತೇವೆಂದು ಹೆತ್ತವರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
Vijayapura: ಪ್ರೀತಿಸಿದವರು ಸಾವಿನಲ್ಲಿ ಒಂದಾದರು: ಪ್ರೇಮಿಯಿಂದ ತಾಳಿಕಟ್ಟಿಸಿಕೊಂಡು ಪ್ರಾಣಬಿಟ್ಟ ಯುವತಿ
ಪೋಷಕರ ವಿರುದ್ದ ದೂರು ನೀಡಿದ ಪ್ರೇಮಿಗಳು: ಅನನ್ಯ ಪೋಷಕರು ಮತ್ತೊಂದು ಮದುವೆಗೆ ಪ್ಲ್ಯಾನ್ ಮಾಡುತ್ತಿದ್ದಂತೆ ಅನನ್ಯ ಹೇಮಂತ್ ಜೊತೆ ಮನೆ ಬಿಟ್ಟು ಬಂದಿದ್ದಾಳೆ. ಮನೆ ಬಿಟ್ಟು ಬಂದಿರುವ ಅನನ್ಯ ಮತ್ತು ಹೇಮಂತನಿಗಾಗಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಇವರ ಮದುವೆಗೆ ಸಹಾಯ ಮಾಡಿದ ಸ್ನೇಹಿತರಿಗೂ ಕೂಟ ಜೀವ ಭಯ ಕಾಡುತ್ತಿದೆ. ಏಕೆಂದರೆ, ಇಬ್ಬರು ಮೊದಲ ಬಾರಿ ಮದುವೆಯಾದಾಗ, ಮದುವೆ ಮಾಡಿಸಿದ್ದ ಸ್ನೇಹಿತರಿಗೂ ಅನನ್ಯ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದರು. ಹಾಗಾಗಿ, ಇದೀಗ ಅವರಿಗೂ ಭಯ ಶುರುವಾಗಿದೆ. ಹಾಗಾಗಿ, ನನ್ನ ಗಂಡ ಹಾಗೂ ಆತನ ಸ್ನೇಹಿತರಿಗೆ ನಮ್ಮ ಮನೆಯವರಿಂದಲೇ ಜೀವ ಭಯ ಇದೆ. ನಮಗೆ ರಕ್ಷಣೆ ಕೊಡಿ ಎಂದು ಅನನ್ಯ ತಮ್ಮ ಪೋಷಕರಿಗೆ ವಿರುದ್ಧ ಅಸಮಾಧಾನ ಹೊರಹಾಕಿ, ಚಿಕ್ಕಮಗಳೂರು ಎಸ್ಪಿ ಕಚೇರಿಗೆ ತೆರಳಿ ಪೋಷಕರ ವಿರುದ್ಧವೇ ದೂರು ನೀಡಿದ್ದಾರೆ. ಅನನ್ಯಳಿಂದ ದೂರ ಆಗುವಂತೆ ಹೇಮಂತ್‌ಗೆ ನಿರಂತರವಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅನನ್ಯ ಪೋಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ.
ಜಾತಿ ಧರ್ಮ ಅಂತಸ್ತು ಯಾವುದೋ ಅಡ್ಡಿಯಿಲ್ಲ: ಕಳೆದ 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಅನನ್ಯ ಮತ್ತು ಹೇಮಂತ್ ಜಾತಿ ಧರ್ಮ ಅಂತಸ್ತು ಯಾವುದೂ ಅಡ್ಡಿಯಾಗಿಲ್ಲ. ಯಾಕೆಂದರೆ ಇಬ್ಬರು ಒಂದೇ ಜಾತಿ. ಇಬ್ಬರು ಮನೆ ಕಡೆ ಚೆನ್ನಾಗಿಯೇ ಇದ್ದಾರೆ. ಹೇಮಂತ್ ಪೋಷಕರದ್ದು ನೋ ಪ್ರಾಬ್ಲಂ. ಆದರೆ ಅನನ್ಯ ಪೋಷಕರು ಮಾತ್ರ ಮದುವೆ ಬಗ್ಗೆ ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಅನನ್ಯ ಪೋಷಕರಿಗೆ ಪ್ರೇಮ ವಿವಾಹದ ಬಗ್ಗೆ ಅಪನಂಬಿಕೆ ಇದ್ದು ಅದಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.