Asianet Suvarna News Asianet Suvarna News

ಗದಗ ಮೃಗಾಲಯದ ತೋಳವನ್ನ ದತ್ತು ಪಡೆದ ವರ್ಷದ ಮಗು!

ಬಿಂಕದಕಟ್ಟಿ ಮೃಗಾಯಲದಲ್ಲಿನ ತೋಳವನ್ನ ದಿಶಾ ಮಹೇಶ ಕರಿಕಟ್ಟಿ ಎಂಬುವ ಒಂದು ವರ್ಷದ ಮಗು ದತ್ತು ಪಡೆದಿದೆ. ದಿಶಾ, ಮೃಗಾಲಯ(zoo)ದ ಚೋಟಾ ರಾಯಭಾರಿ ಅಂತಾ ಖುಷಿ ಹಂಚಿಕೊಂಡಿರುವ ಮೃಗಾಯಲದ ಸಿಬ್ಬಂದಿ ತಮ್ಮ ಅಧಿಕೃತ ಫೇಸ್ ಬುಕ್(Facebook) ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

A year old Disha adopted indian grey wolf from Gadag Zoo rav
Author
First Published Oct 6, 2022, 1:29 PM IST

ಗದಗ (ಅ.6) : ಬಿಂಕದಕಟ್ಟಿ ಮೃಗಾಯಲದಲ್ಲಿನ ತೋಳವನ್ನ ದಿಶಾ ಮಹೇಶ ಕರಿಕಟ್ಟಿ ಎಂಬುವ ಒಂದು ವರ್ಷದ ಮಗು ದತ್ತು ಪಡೆದಿದೆ. ದಿಶಾ, ಮೃಗಾಲಯ(zoo)ದ ಚೋಟಾ ರಾಯಭಾರಿ ಅಂತಾ ಖುಷಿ ಹಂಚಿಕೊಂಡಿರುವ ಮೃಗಾಯಲದ ಸಿಬ್ಬಂದಿ ತಮ್ಮ ಅಧಿಕೃತ ಫೇಸ್ ಬುಕ್(Facebook) ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

 ದಿಶಾ(Dishaa)1 ನೇ ವರ್ಷದ ಹುಟ್ಟುಹಬ್ಬ(Birth Day)ದಂದು 30 ಸಾವಿರ ರೂಪಾಯಿ ಚೆಕ್ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ(Deepika Bajpe) ಅವರಿಗೆ ನೀಡುವ ಮೂಲಕ ದತ್ತು ಪಡೆದಿದ್ದಾರೆ. 

ಭಾರತೀಯ ಬೂದು ತೋಳ(Wolf)ವನ್ನು ದಿಶಾ ದತ್ತು ತೆಗೆದುಕೊಳ್ಳುತ್ತಿದ್ದಾರೆ. ಶುಕ್ರವಾರ  ನವೆಂಬರ್ 30 ರಂದು ದಿಶಾಗೆ ಒಂದು ವರ್ಷ ತುಂಬುತ್ತಿದೆ. ಹೀಗಾಗಿ ದಿಶಾ ತಂದೆ ಮಹೇಶ ಕರಿಕಟ್ಟಿ ಚೆಕ್ ಮೂಲಕ ಹಣ ನೀಡಿದ್ದಾರೆ. ಬೆಂಗಳೂರಿ(Bengaluru)ನ ವಿಎಂ ವೇರ್ ಸಾಫ್ಟ್‌ವೇರ್ ಲಿಮಿಟೆಡ್‌(VMware Software India Pvt. Ltd)ನಲ್ಲಿ ವ್ಯಾಪಾರ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಮಹೇಶ್(Mahesh) ಅವರು ಮಗಳಿಗಾಗಿ ತೋಳ ದತ್ತು ಪಡೆದಿದ್ದಾರೆ..  

ಭಾರತೀಯ ಬೂದು ತೋಳ(Indian gray wolf)ವು ಮುಖ್ಯವಾಗಿ ಡೆಕ್ಕನ್ ಪ್ರಸ್ಥಭೂಮಿ ಪ್ರದೇಶದಲ್ಲಿ ಹುಲ್ಲುಗಾವಲು, ಕುರುಚಲು ಕಾಡುಗಳಿಗೆ ಸೀಮಿತವಾಗಿದೆ.  ಭಾರತೀಯ ವನ್ಯಜೀವಿ ಸಂರಕ್ಷಣೆಯ ಪ್ರಕಾರ ಇದು ಹೆಚ್ಚು ಅಳಿವಿನಂಚಿನಲ್ಲಿದೆ, ಇದು ಶುಷ್ಕ ಪ್ರದೇಶದ ಪ್ರಮುಖ ಜಾತಿಯಾಗಿದೆ. ಇಂಥ ಅಪರೂಪದ ಪ್ರಾಣಿಯನ್ನ ದಿಶಾ ದತ್ತು ಪಡೆದಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗ್ತಿದೆ.

Gadag: ಹುಟ್ಟುಹಬ್ಬಕ್ಕೆ ಬಿಂಕದಕಟ್ಟಿಯ ಭೀಮಾ ಹೆಸರಿನ ಚಿರತೆಯನ್ನು ದತ್ತು ಪಡೆದ ಬಾಲಕ

Follow Us:
Download App:
  • android
  • ios