ಶಿವಮೊಗ್ಗ: ಬಿಟ್ಟು ಹೋಗಿದ್ದ ಮಗು ಹುಡುಕಿ ಬಂದ ತಾಯಿ..!
ಜೆಪಿಎನ್ ರಸ್ತೆಯ ಹೋಟೆಲ್‌ನಲ್ಲಿ ಅನಾಥ ಮಗು ದೊರೆತಿದ್ದು, ಮಗುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಕೆಲ ದಿನಗಳ ಹಿಂದೆ ನಗರದಲ್ಲಿ ಪತ್ತೆಯಾಗಿದ್ದ ಅನಾಥ ಮಗುವಿನ ತಾಯಿ ನಾನೇ ಎಂದು ಹೇಳಿಕೊಂಡ ಮಹಿಳೆಯೊಬ್ಬರು, ಹಲವು ದಾಖಲೆ ಮೂಲಕ ಮಗು ತನ್ನದೇ ಎಂದು ನಿರೂಪಿಸಲು ಮುಂದಾಗಿದ್ದಾರೆ.
ಶಿವಮೊಗ್ಗ (ಆ.23): ಕೆಲ ದಿನಗಳ ಹಿಂದೆ ನಗರದಲ್ಲಿ ಪತ್ತೆಯಾಗಿದ್ದ ಅನಾಥ ಮಗುವಿನ ತಾಯಿ ನಾನೇ ಎಂದು ಹೇಳಿಕೊಂಡ ಮಹಿಳೆಯೊಬ್ಬರು, ಹಲವು ದಾಖಲೆ ಮೂಲಕ ಮಗು ತನ್ನದೇ ಎಂದು ನಿರೂಪಿಸಲು ಮುಂದಾಗಿದ್ದಾರೆ.
ಕಳೆದ ಆ.14 ರಂದು ಜೆಪಿಎನ್ ರಸ್ತೆಯ ಹೋಟೆಲ್‌ನಲ್ಲಿ ಅನಾಥ ಮಗು ದೊರೆತಿದ್ದು, ಮಗುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಇದೇ ವೇಳೆ ಕೆಲವರು ಮಗುವನ್ನು ದತ್ತು ಪಡೆಯಲು ಸಹ ಮುಂದಾಗಿದ್ದರು. ಆದರೆ ಇದೀಗ ಮಹಿಳೆಯೊಬ್ಬರು ಆ ಮಗು ನನ್ನದೇ. ವಾಪಸ್ ಕೊಡಿ ಎಂದು ಮುಂದೆ ಬಂದಿದ್ದಾರೆ.
ಶಿವಮೊಗ್ಗ: 'ಸಚಿವ ಸ್ಥಾನ ನೀಡದಿರುವುದು ತೀವ್ರ ನೋವಾಗಿದೆ'
ತಾಯಿಯ ಮಾಹಿತಿ ಗೌಪ್ಯತೆ ಕಾಪಾಡಬೇಕಾದ ಹಿನ್ನೆಲೆಯಲ್ಲಿ ಅವರ ಹೆಸರು ಮತ್ತು ವಿಳಾಸವನ್ನ ಬಹಿರಂಗ ಪಡಿಸಿಲ್ಲ. ಅನಿವಾರ್ಯ ಕಾರಣಕ್ಕಾಗಿ ನಗರದ ಜೆಪಿಎನ್ ರಸ್ತೆಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದೆ ಎಂದಿರುವ ಅವರು, ಈಗ ಕೆಲವು ದಾಖಲಾತಿ ಸಮೇತ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗಿ ಆ ಮಗುವಿನ ತಾಯಿ ನಾನೇ. ನನ್ನ ಮಗು ಕೊಡಿ ಎಂದು ಕೇಳಿದ್ದಾರೆ. ಮೇಲ್ನೋಟಕ್ಕೆ ಮಗುವಿನ ತಾಯಿ ಅವರೇ ಎಂದು ಕಂಡುಬಂದರು ಸಹ ಸಮಿತಿ ಈ ತಾಯಿ ನೀಡಿರುವ ಮಾಹಿತಿ ಆಧರಿಸಿ ಪರಿಶೀಲನೆ ನಡೆಸುತ್ತಿದೆ.
ಶಾಲೆ ಛಾವಣಿ ಕುಸಿತ: ಮಕ್ಕಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ