ಇತಿಹಾಸ ಬರೆಯುವ ಹೆಳವರ ಮಕ್ಕಳ ಇತಿಹಾಸ ಬದಲಿಸುವತ್ತ ಹೆಜ್ಜೆ.

ಕುಟುಂಬದ ವಂಶವೃಕ್ಷ ಬರೆದಿಟ್ಟುಕೊಂಡು ಪ್ರತಿ ವರ್ಷ ಅವರ ಮನೆಗೆ ತೆರಳಿ ಅವರಿಗೆ ತಿಳಿಸುವ ಹೆಳವರ ಕುಟುಂಬದ ಮಕ್ಕಳು ತಂದೆ ತಾಯಿಯ ನಿರಂತರ ವಲಸೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ ಸಹಕಾರದೊಂದಿಗೆ ಶಿಕ್ಷಣ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದೆ.

A step to change the history of Helavars childrens gadagrav

ಗದಗ (ಜು.27) : ಕುಟುಂಬದ ವಂಶವೃಕ್ಷ ಬರೆದಿಟ್ಟುಕೊಂಡು ಪ್ರತಿ ವರ್ಷ ಅವರ ಮನೆಗೆ ತೆರಳಿ ಅವರಿಗೆ ತಿಳಿಸುವ ಹೆಳವರ ಕುಟುಂಬದ ಮಕ್ಕಳು ತಂದೆ ತಾಯಿಯ ನಿರಂತರ ವಲಸೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಗದಗ ಶಾಸಕ ಎಚ್.ಕೆ.ಪಾಟೀಲ ಸಹಕಾರದೊಂದಿಗೆ ಶಿಕ್ಷಣ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

ತಮ್ಮದೇಯಾದ ವಿಶಿಷ್ಟ ದಾಟಿಯಲ್ಲಿ ವಂಶ ವಾಹಿನಿ ಹೇಳುವ ಹೆಳವರ ಕುಟುಂಬಗಳು(Helavara Family) ಗದಗ(Gadag) ತಾಲೂಕಿನ ಹುಲಕೋಟಿ(Hulakoti) ಗ್ರಾಮದಲ್ಲಿ ಕಳೆದ 20 ದಿನಗಳಿಂದ ಪ್ರತಿ ವರ್ಷದಂತೆ ಬಂದು ವಾಸವಿದ್ದು ಇವರ ಮಕ್ಕಳನ್ನು ಶಾಲೆಗೆ ದಾಖಲಿಸಿ ಮಕ್ಕಳ ಇತಿಹಾಸ ಬರೆಯುವತ್ತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

Tumakuru: ಅಲೆಮಾರಿ ಸಮುದಾಯದ ವ್ಯಕ್ತಿ ಜತೆ ಅನುಚಿತ ವರ್ತನೆ: ತಹಸೀಲ್ದಾರ್‌ ತೇಜಶ್ವಿನಿಗೆ ಸಂಕಷ್ಟ

ಹುಲಕೋಟಿ ಕೃಷ್ಣಾ ಕಾಲನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎ.ವಿ.ಪ್ರಭು ಹೆಳವರ ಟೆಂಟುಗಳಿಗೆ ಭೇಟಿ ನೀಡಿ, ಶಿಕ್ಷಣದ ಮಹತ್ವವನ್ನು ಹೆಳವರಿಗೆ ತಿಳಿಸಿ ಅವರ ಮನವಲಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವಂತೆ ವಿನಂತಿಸಿದಾಗ ಹೆಳವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಲು ಒಪ್ಪಿಗೆ ನೀಡಿದ್ದಾರೆ.

ಶಾಲಾ ಪರಿಕರಗಳ ವ್ಯವಸ್ಥೆ:
ಹೆಳವರ ಮಕ್ಕಳಿಗೆ ಉಚಿತ ಹಾಗೂ ದಾನಿಗಳಿಂದ ಬಟ್ಟೆ, ಬ್ಯಾಗ, ಲೇಖನ ಸಾಮಗ್ರಿ, ಟೈ, ಬೆಲ್ಟ, ಕೊಡಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಅವರಿಗೆ ದಿನಾಲು ಹಾಲು ಬಿಸಿಊಟದ ಸೌಲಭ್ಯವನ್ನು ಸ್ಥಳೀಯ ಆಡಳಿತ ಮಂಡಳಿಗಳು ಸಹಯೋಗದಲ್ಲಿ ವ್ಯವಸ್ಥೆ ಮಾಡಲು ಶಾಸಕ ಎಚ್.ಕೆ.ಪಾಟೀಲ ವ್ಯವಸ್ಥೆ ಮಾಡಿದ್ದಾರೆ.

ವಲಸೆ ಕಾರ್ಡಿನ ವ್ಯವಸ್ಥೆ:

ಹೆಳವರು ಅಲೆಮಾರಿಗಳಾಗಿದ್ದು ತಮ್ಮ ಜೀವನಕ್ಕಾಗಿ ಊರು ಊರು ಅಲೆದು ಆಯ್ದ ಕುಟುಂಬಗಳ ವಂಶವೃಕ್ಷ ಬರೆದು ವರ್ಷದಲ್ಲಿ ಒಮ್ಮೆ ಅವರ ಮನೆಗೆ ತೆರಳಿ ವಂಶವೃಕ್ಷ ಓದಿ ಮನೆಯ ಯಜಮಾನರು ನೀಡುವ ಧಾನ್ಯ, ಹಣ ಪಡೆದು ಕಡತಗಳನ್ನು ಹೊತ್ತುಕೊಂಡು ಊರು ಊರು ತಿರುಗವ ಹೇಳವರ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆಯೂ ಅವರು ತೆರಳುವ ಊರುಗಳ ಶಾಲೆಯಲ್ಲಿಯೇ ಶಿಕ್ಷಣ ಪಡೆಯಲು, ಸೌಲಭ್ಯಗಳನ್ನ ಪಡೆಯಲು ವಲಸೆ ಕಾರ್ಡಿನ ವ್ಯವಸ್ಥೆಯನ್ನು ಮಾಡಲಾಗಿದೆ. 

Nomads Drug Peddlers; ಅಲೆಮಾರಿ ಸೋಗಲ್ಲಿ ಗ್ಯಾಂಗ್‌ನಿಂದ ಡ್ರಗ್ ಸಪ್ಲೈ!

ಹುಟ್ಟಿದ ಪ್ರತಿ ಮಗುವು ಶಿಕ್ಷಣದಿಂದ ವಂಚಿತವಾಗದಂತೆ ಸರಕಾರದ ವ್ಯವಸ್ಥೆ ಇರುವಾಗ. ನೆಲೆ ಇಲ್ಲದೇ ಇರುವದು ಮತ್ತು ಗಣತಿ ಕಾಲಕ್ಕೆ ಒಂದೆಡೆ ಇಲ್ಲದಿರುವದರಿಂದ ಹೆಳವರ ಮಕ್ಕಳು ಶಿಕ್ಷಣದಿಂದ ದೂರ ಇರುವುದಕ್ಕೆ ಕಾರಣವಾಗಿದೆ. ಅಲೆಮಾರಿ ಹೆಳವರ ಮಕ್ಕಳು ಶಾಲೆಯನ್ನೇ ನೊಡದೆ ಇರುವ ಸಂದರ್ಭವನ್ನು ಕಂಡು ನೋವಾದರೂ ಸಹ ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಲು ಸ್ಥಳಿಯ ಶಾಲೆಯು ಹೆಳವರ ಪ್ರತಿ ಕುಟುಂಬವನ್ನು ಕಂಡು ಮನವಲಿಸಲಾಗಿದೆ.. 

ಮಕ್ಕಳನ್ನ ಶಾಲೆಗೆ ದಾಖಲಿಸುವ ವಿಚಾರವಾಗಿ ಮಾತ್ನಾಡಿದ ಹೆಳವರ ಕುಟುಂಬದ ಮುಖ್ಯಸ್ಥ, ನಾವು ಅಲೆಮಾರಿ ಹೆಳವರು ಜಗತ್ತಿನ ಪ್ರತಿ ಕುಟುಂಬದ ಇತಿಹಾಸವನ್ನು ನಾವು ಓದದೇ ರೂಡಿಯಿಂದಲೇ ತಕ್ಕ ಮಟ್ಟಿಗೆ ನಮ್ಮ ತಿಳುವಳಿಕೆಯಂತೆ ಬರೆದುಕೊಂಡು ಮನೆಮನೆಗೆ ಹೋಗಿ ಇತಿಹಾಸ ತಿಳಿಸಿ ಕೊಟ್ಟ ಕಾಳು ಕಡಿಯಲ್ಲಿ ಉಪಜೀವನ ಮಾಡುತ್ತೆವೆ.. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಗೋಜಿಗೆ ಹೊಗಿಲ್ಲ ಇಂದು ನಮ್ಮ ಮಕ್ಕಳಿಗೆ ಶುಕ್ರದೆಸೆ ಆರಂಭವಾಗಿದೆ ಶಿಕ್ಷಕರೊಬ್ಬರು ನಮ್ಮ ಗುಡಸಲಿಗೆ ಬಂದು ನಮ್ಮ ಬಗ್ಗೆ ವಿಚಾರಿಸಿ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ನಮ್ಮ ಮನವೊಲಿಸಿದರು, ಅವರಿಗೆ ದೇವರು ಚೆನ್ನಾಗಿಟ್ಟಿರಲಿ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಕೊಂಡಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು.. 

ಇತ್ತ ಶಾಲೆಗೆ ಸೇರಿಸಲು ವಿಶೇಷ ಆಸಕ್ತಿ ವಹಿಸಿದ್ದ ಶಾಸಕ ಹೆಚ್ ಕೆ ಪಾಟೀಲ ಮಾತನಾಡಿ, ನಮ್ಮ ಗ್ರಾಮದ ಶಾಲೆಯ ಮುಖಭಾಗದಲ್ಲಿ 25 ಗುಡಿಸಲುಗಳಲ್ಲಿ ಜಿಟಿಜಿಟಿ ಮಳೆಯಲ್ಲಿ ಮಕ್ಕಳನ್ನು ಟೆಂಟ್ ಒಳಗೆ ಹಾಕುವದು, ತಾಯಿಯರು ಹತ್ತಿರ ಕೊರಿಸಿಕೊಂಡು‌ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ಗ್ರಾಮದಲ್ಲಿ ಇರುವಷ್ಟು ದಿನ ಗ್ರಾಮದ ಶಾಲೆಗೆ ಬಂದರೆ ಸಾಕು ಎಂದರೆ ಶಾಲಾ ಪ್ರಧಾನ ಗುರುಗಳ ಪ್ರಯತ್ನ ಮಾಡಿದಾಗ ತಾಯಂದಿರು ಶಾಲೆಗೆ ಕಳಿಸಲು ಮೊದಮೊದಲು ಅನುಮಾನ ಪಟ್ಟು ನಮ್ಮ ಮಕ್ಕಳಿಗೂ ಶಾಲೆ ಕಲಿಯಲು ಅವಕಾಶ ಇದೆಯೇ ಎಂದು ಅನುಮಾನ ವ್ಯಕ್ತಡಿಸಿದ್ದರು. ಶಿಕ್ಷಕರು ಶಾಲೆಗೆ ಕರೆ ತಂದು ಸ್ಮಾರ್ಟಬೊರ್ಡಿನಲ್ಲಿ ಚಿತ್ರ ಸಹಿತ ಕಥೆ ಹಾಡು ತೋರಿಸಿ ಕಲಿಸಿದಾಗ ತೀವ್ರವಾಗಿ ಕಲಿಯುವ ಸಾಮರ್ಥ್ಯ ಮಕ್ಕಳಲ್ಲಿ ಇದೆ ಎಂದು ಗೊತ್ತಾದ ನಂತರ ಶಿಕ್ಷಕರೆಲ್ಲಾ ಗಮನಕ್ಕೆ ತಂದ ನಂತರ, ಎಲ್ಲಾ ಪಾಲಕರನ್ನು ಶಾಲೆಗೆ ಕರೆಯಿಸಿ ಮಾತನಾಡಿದ್ದು ಎಲ್ಲಾ ಪಾಲಕರು ಒಪ್ಪಿಕೊಂಡಿದ್ದಾರೆ. ಎಲ್ಲಾ 23 ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ, ಪಾಲಕರು ಕೂಡಾ ಅವರ ಮಕ್ಕಳನ್ನು ವಸತಿ ಶಾಲೆಯಲ್ಲಿ ಬಿಡಲು ಒಪ್ಪಿದ್ದಾರೆ. ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಇದು ಮಹತ್ವದ ಪ್ರಯತ್ನವಾಗಿದೆ.

Latest Videos
Follow Us:
Download App:
  • android
  • ios