Asianet Suvarna News Asianet Suvarna News

ಅಪರೂಪದ ‘ಜಪಾನಿಸ್‌ ಸಿಲ್ಕ್‌ ಮೋತ್‌’ ಚಿಟ್ಟೆ ಬೆಂಗಳೂರಿನಲ್ಲಿ ಪತ್ತೆ

ಜಪಾನ್‌ ಮೂಲದ ಪತಂಗ ಜಾತಿಗೆ ಸೇರಿದ ಅಪರೂಪದ ಪ್ರಭೇದ ‘ಜಪಾನಿಸ್‌ ಸಿಲ್ಕ್‌ ಮೋತ್‌’ ಆರ್‌.ಆರ್‌.ನಗರದಲ್ಲಿ ಮಂಗಳವಾರ ಕಂಡು ಬಂದಿದ್ದು, ಅದನ್ನು ಸಂರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

A rare Japanese Silk Moth butterfly was found in Bengaluru gvd
Author
First Published Aug 9, 2023, 6:23 AM IST

ಬೆಂಗಳೂರು (ಆ.09): ಜಪಾನ್‌ ಮೂಲದ ಪತಂಗ ಜಾತಿಗೆ ಸೇರಿದ ಅಪರೂಪದ ಪ್ರಭೇದ ‘ಜಪಾನಿಸ್‌ ಸಿಲ್ಕ್‌ ಮೋತ್‌’ ಆರ್‌.ಆರ್‌.ನಗರದಲ್ಲಿ ಮಂಗಳವಾರ ಕಂಡು ಬಂದಿದ್ದು, ಅದನ್ನು ಸಂರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಆರ್‌ಆರ್‌ ನಗರದಲ್ಲಿ ಮಂಗಳವಾರ ಸಂಜೆ ಮನೆಯೊಂದರ ಗೇಟ್‌ ಮೇಲೆ ಈ ಅಪರೂಪದ ಚಿಟ್ಟೆಕಂಡು ಬಂದಿದೆ. ನೋಡುವುದಕ್ಕೆ ತುಂಬಾ ಸುಂದರವಾದ ಹಾಗೂ ಅಪರೂಪದ ಈ ಪತಂಗವನ್ನು ಗಮನಿಸಿದ ಸ್ಥಳೀಯರು, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪತಂಗವನ್ನು ಸಂರಕ್ಷಿಸಿ ನಗರದ ಸಮೀಪದಲ್ಲಿರುವ ತುರಹಳ್ಳಿ ಅರಣ್ಯಕ್ಕೆ ಬಿಡಲಾಗಿದೆ.

ಜಪಾನಿಸ್‌ ಸಿಲ್ಕ್‌ ಮೋತ್‌ ಪತಂಗ ಬಹಳ ಅಪರೂಪದ ಕೀಟ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಈ ಪತಂಗ ಕಾಣಿಸಿಕೊಂಡಿದೆ. ಇಂತಹ ಪತಂಗಗಳು ರಾತ್ರಿ ನಿಶಾಚಾರ ಕೀಟ ಪ್ರಬೇಧವಾಗಿದೆ. ಸಾಮಾನ್ಯವಾಗಿ ದಟ್ಟಅರಣ್ಯದಲ್ಲಿ ಕಂಡು ಬರುವ ಈ ಜಪಾನಿನ ಈ ಕೀಟ ನಗರದಲ್ಲಿ ಕಂಡು ಬಂದಿರುವುದು ಸೋಜಿಗದ ಸಂಗತಿ.

ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಸಹಾಯವಾಣಿಗೆ ಕರೆ ಮಾಡಿ: ನಗರ ಪ್ರದೇಶದಲ್ಲಿ ಇಂತಹ ಅಪರೂಪದ ಜೀವಿಗಳು ಕಂಡು ಬಂದಾಗ ಸಾರ್ವಜನಿಕರು (ಸಹಾಯವಾಣಿ 99027 94711) ಕರೆ ಮಾಡಿ ಸಹಕಾರ ನೀಡಿದರೆ, ಅವುಗಳ ಸಂರಕ್ಷಣೆಗೆ ಅನುಕೂಲವಾಗುತ್ತದೆ ಎಂದು ಪ್ರಸನ್ನ ಕುಮಾರ್‌ ಮನವಿ ಮಾಡಿದರು.

Follow Us:
Download App:
  • android
  • ios